ಬರೆದವರು - ಕೆ.ಪಿ.ಪೂರ್ಣಚಂದ್ರ ತೇಜಸ್ವಿ
ದನಿ - ಆದಿತ್ಯ ಭಾಗ್ವತ್
ಭೂಗತ ಜಗತ್ತಿನ ಅನೇಕ ವೃತ್ತಾಂತಗಳು ಇದರಲ್ಲಿ ಇದೆಯಾದರೂ ಇದು ಮೂಲತಃ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮನುಷ್ಯನೊಬ್ಬನ ಅದಮ್ಯ ಹೋರಾಟದ ಕಥೆ. ಈ ಕಥೆ ಪ್ರಾರಂಭವಾಗುವುದು ಫ್ರಾನ್ಸಿನ ರಾಜಧಾನಿ ಪ್ಯಾರಿಸ್ಸಿನಿಂದ. ಯಾವ ತಪ್ಪನ್ನೂ ಮಾಡಿಲ್ಲದ ಕೊಲೆ ಪ್ರಕರಣಕ್ಕೆ ಸಂಬಂಧವೇ ಇಲ್ಲದೆ ಎಲ್ಲೋ ಇದ್ದ ಒಬ್ಬ ತರುಣನನ್ನು (ಪ್ಯಾಪಿಲಾನ್) ನಿಷ್ಕಾರಣವಾಗಿ ಫ್ರೆಂಚ್ ಪೊಲೀಸರೂ, ಸರ್ಕಾರೀ ಲಾಯರುಗಳೂ ಸೇರಿ ಪಿತೂರಿ ಮಾಡಿ, ಜೀವಾವಧಿಶಿಕ್ಷೆ ವಿಧಿಸುವಂತೆ ಮಾಡಿ, ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದ ಕಾರಾಗೃಹ ದ್ವೀಪಗಳಿಗೆ ಗಡೀಪಾರು ಮಾಡಿಸುತ್ತಾರೆ. ಸಮಾನತೆ, ನ್ಯಾಯ, ಸ್ವಾತಂತ್ರಗಳಿಗೆ ಆಧಾರ ಸ್ಥಂಭವೆನಿಸಿದ್ದ ಫ್ರೆಂಚ್ ನಾಗರಿಕತೆಯೇ ಎಂಥ ಕ್ರೂರ, ನಿರ್ದಯ, ಅಮಾನುಷ ವ್ಯವಸ್ಥೆಯನ್ನು ಖೈದಿಗಳ ನೆವದಲ್ಲಿ ಅಲ್ಲಿ ರೂಪಿಸಿತ್ತು ಎನ್ನುವುದು ಇಡೀ ಮನುಕುಲವನ್ನೇ ಬೆಚ್ಚಿಬೀಳಿಸುವ ಸಂಗತಿ. ಈ ದ್ವೀಪಗಳಿಗೆ ಹೋದ ಯಾವನೂ ತನ್ನ ಕಾರಾಗೃಹದ ಅವಧಿ ಮುಗಿಸಿ ಜೀವಸಮೇತ ಹಿಂದಿರುಗಿರುವುದಿಲ್ಲ