ಪತ್ರವ್ಯವಹಾರ ಮತ್ತು ನಾನು (ಇಬುಕ್)

ಪತ್ರವ್ಯವಹಾರ ಮತ್ತು ನಾನು (ಇಬುಕ್)

Regular price
$9.99
Sale price
$9.99
Regular price
Sold out
Unit price
per 
Shipping does not apply

GET FREE SAMPLE

ಕಾರಂತರ ಮಾತೃಭಾಷೆ ಕನ್ನಡವಾದುದಕ್ಕಿರಬೇಕು- ಅವರ ಬಹಳಷ್ಟು ಪತ್ರಗಳು ಕನ್ನಡದಲ್ಲಿಯೇ ಇವೆ. ಆಂಗ್ಲ ಭಾಷೆಯಲ್ಲಿ ಬರೆಯುತ್ತಿದ್ದವರಿಗೆ' ಮಾತ್ರ ಆಂಗ್ಲ ಭಾಷೆಯಲ್ಲಿಯೇ ಉತ್ತರ ಬರೆಯುತ್ತಿದ್ದರು. ಕನ್ನಡದಲ್ಲಿ ಬರೆದು ರೂಢಿಯಿಲ್ಲದ ಕೆಲವು ಮಿತ್ರರಿಗೂ ಇಂಗ್ಲಿಷ್‌ನಲ್ಲಿಯೇ ಪತ್ರ ಬರೆಯುವ ಹವ್ಯಾಸವನ್ನು ಇಂದಿಗೂ ಉಳಿಸಿ ಕೊಂಡಿದ್ದಾರೆ. ಕೆಲವು ಅಪವಾದಗಳನ್ನು ಬಿಟ್ಟರೆ, ಕಾರಂತರ ಪತ್ರಗಳೆಲ್ಲ ಸುದೀರ್ಘವೇ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ರೂಪದ ಪತ್ರವಾದರೆ, ಮತ್ತಷ್ಟು ದೀರ್ಘವಾಗಿರುತ್ತದೆ. ಸಹಿ ಹಾಕಿದ ಬಳಿಕವೂ ಉಳಿದ ಖಾಲಿ ಜಾಗದಲ್ಲಿ ಮತ್ತೆ ನೆನಪಾದುದನ್ನು ಬರೆಯುತ್ತಾರೆ. ಪಿ. ಎಸ್‌. ಎಂಬ ಸೂಚನೆ ಇದ್ದರೆ ಉಂಟು; ಇಲ್ಲವಾದರೆ ಇಲ್ಲ. ಕೈಬರಹದ ಚಿತ್ರಗಳ ಮೂಲಕವೂ ವಿಷಯವನ್ನು ಮನದಟ್ಟು ಮಾಡಿಕೊಡುತ್ತಾರೆ. ಸ್ವಹಸ್ತಾಕ್ಷರದ ಪತ್ರಗಳೇ ಹೆಚ್ಚು. ದಿನವೂ ಹತ್ತಾರು ಕೆಲಸಗಳ ನಡುವೆ ಮಾಡಿಕೊಂಡಿರುವ ಕೆಲಸವಾದುದರಿಂದ, ಪತ್ರಗಳ ಗೀಚುವಿಕೆಯಲ್ಲಿ ಅವಸರದಿಂದಾಗಿ ತಪ್ಪಕ್ಷರಗಳು ಗೋಚರವಾಗುತ್ತವೆ; ಕೆಲವೊಮ್ಮೆ ವಿಪರೀತ ಗೀಚುವಿಕೆಯಿಂದಾಗಿ, ಬರೆದದ್ದು ಅರ್ಥವಾಗದೆ ಇರುವುದೂ ಇದೆ. ಅವರ ಅಕ್ಷರವನ್ನು ಓದಲು ಅವರಿಗೇನೆ ಆಗದೆ ಹೋದ ಉದಾಹರಣೆಗಳಿವೆ. ಒಬ್ಬರಿಗೆ ಪತ್ರ ಬರೆದು, ಇನ್ನೊಬ್ಬರ ವಿಳಾಸವನ್ನು ಬರೆದ ಉದಾಹರಣೆಗಳೂ ಇವೆ. ವಿಳಾಸದಾರನಿಗೆ 'ಗದಾಪ್ರಹಾರ'ವೂ, 'ಸ್ನೇಹಸಿಂಚನ'ವೂ ಸಂದರ್ಭಕ್ಕೆ ತಕ್ಕಂತೆ ಲಭ್ಯವಾಗುತ್ತವೆ. ಹಿರಿಯ, ಕಿರಿಯ ಮಿತ್ರರಿಗೆ ಬರೆದ ಪತ್ರಗಳಲ್ಲಿ 'ಸ್ನೇಹಜೀವಿ'ಯ ಪರಿಚಯವಾಗುತ್ತದೆ. ಗುರುತು, ಪರಿಚಯವಿಲ್ಲದವರಿಗೂ ಎಷ್ಟೊಂದು ಸ್ನೇಹಮಯ ಪತ್ರಗಳನ್ನು ಬರೆಯುತ್ತಾರಲ್ಲವೇ ಎಂದನಿಸುತ್ತದೆ- ಕೆಲವು ಪತ್ರಗಳನ್ನು ಅವಲೋಕಿಸುವಾಗ. ಹಿರಿಯ, ಕಿರಿಯ, ಪರಿಚಿತ, ಅಪರಿಚಿತ ಎಂಬ ಭೇದವಿಲ್ಲದ ಸಹಾಯ ತತ್ಪರತೆಯನ್ನು ಅವರ ಪತ್ರಗಳಲ್ಲಿ ಕಾಣಬಹುದು. ಕಾರಂತರ ಪತ್ರಗಳು ವಿಷಯ ವೈವಿಧ್ಯತೆಯಿಂದ ಕೂಡಿದ್ದು ಅವರ ಅಧ್ಯಯನಪ್ರಿಯತೆಯನ್ನು ಎತ್ತಿ ತೋರಿಸುತ್ತವೆ. ಸಮಕಾಲೀನ- ಸಾರ್ವಜನಿಕ ಮಾತ್ರವಲ್ಲ, ವ್ಯಕ್ತಿಗತ ಘಟನೆಗಳ ಬಗ್ಗೆಯೂ ಸ್ಪಂದನವಿದೆ.

ಶಿವರಾಮ ಕಾರಂತರ ಬರಹ, ಭಾಷಣ, ಸಂದರ್ಶನ, ಸಂವಾದಗಳಂತೆ ಅವರ ಪತ್ರಗಳೂ ಕೆಲವರಿಗೆ ಖುಷಿ ಕೊಡುತ್ತವೆ; ಮತ್ತೆ ಕೆಲವರನ್ನು ಸಿಟ್ಟಿಗೂ ಎಬ್ಬಿಸುತ್ತವೆ; ಮತ್ತೂ ಹಲವರಿಗೆ ಮನರಂಜನೆಯನ್ನೂ, ಜ್ಞಾನವನ್ನೂ ಒದಗಿಸುತ್ತವೆ.

ಇತಿ,
ಬಿ. ಮಾಲಿನಿ ಮಲ್ಯ.

 

ಪುಟಗಳು: 340

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !