ಜಗವನೆ ಜಯಿಸೋಣ

ಜಗವನೆ ಜಯಿಸೋಣ

Regular price
$11.99
Sale price
$11.99
Regular price
Sold out
Unit price
per 
Shipping does not apply

ಒಂದು ಕತೆಯ ಪ್ರಕಾರ ಹದಿನೆಂಟು ಅಡಿ ಎತ್ತರದ ಅಮೃತಶಿಲೆ ಹಲವು ವರ್ಷಗಳ ಕಾಲ ಹಾಗೆಯೇ ಬಿದ್ದುಕೊಂಡಿತ್ತು. ವಾಸ್ತವದಲ್ಲಿ, ಅದು ಮೈಕೆಲೆಂಜೆಲೊ ಹುಟ್ಟುವುದಕ್ಕೂ ಎಷ್ಟೋ ಹಿಂದಿನಿಂದಲೇ ಅಲ್ಲಿತ್ತು. ಲಿಯೋನಾರ್ಡೋ ಡಾವಿಂಚಿಯಂಥ ಮಹಾನ್‌ ಕಲಾವಿದರನ್ನೂ ಆಹ್ವಾನಿಸಿ ಈ ಶಿಲೆಯಿಂದ ಶಿಲ್ಪಕೃತಿಯನ್ನು ರಚಿಸಲು ಕೇಳಿಕೊಳ್ಳಲಾಗಿತ್ತು. ಅವರೆಲ್ಲ ಅದರತ್ತ ನೋಡಿ ಅದು ನಿರುಪಯುಕ್ತವೂ ದೋಷಪೂರ್ಣವೂ ಆಗಿದೆ ಎಂದು ಕೈಚೆಲ್ಲಿದರು. ಅದರಿಂದ ಏನನ್ನೂ ಕೆತ್ತಲು ಸಾಧ್ಯವಿಲ್ಲ ಎಂದರವರು. ಕೆಲವು ವರ್ಷಗಳ ಬಳಿಕ, ಮೈಕೆಲೆಂಜೆಲೊ ಆ ದೋಷಪೂರಿತವೂ ನಿರುಪಯುಕ್ತವೂ ಆದ ಶಿಲೆಯನ್ನು ಕೆತ್ತುವ ಕೆಲಸದಲ್ಲಿ ತೊಡಗಿ ಅತ್ಯದ್ಭುತವಾದ ಕಲಾಕೃತಿಯೊಂದನ್ನು ನಿರ್ಮಿಸಿದ. ಅವನು ‘ಡೇವಿಡ್‌’ ಎಂಬ ಆ ಶಿಲ್ಪದ ಕೆತ್ತನೆ ಮಾಡುತ್ತಿರುವಾಗ, ಒಬ್ಬ ಪುಟ್ಟ ಬಾಲಕ ಅವನ ಬಳಿಗೆ ಹೋಗಿ “ಯಾಕೆ ನೀನು ಈ ಕಲ್ಲನ್ನು ಬಡಿಯುತ್ತಿರುವೆ” ಎಂದು ಕೇಳಿದನಂತೆ. ಅದಕ್ಕೆ ಮೈಕೆಲೆಂಜೆಲೊ ಕಲ್ಲಿಗೆ ಇನ್ನೂ ಬಲವಾಗಿ ಬಡಿಯುತ್ತಾ “ಓ ಬಾಲಕನೆ, ಈ ಶಿಲೆಯಲ್ಲಿ ಒಂದು ದೈವವಿದೆ. ನಾನು ಆತನನ್ನು ಬಿಡುಗಡೆಗೊಳಿಸುತ್ತಿರುವೆ” ಎಂದನಂತೆ. ನೀವು ಯೋಚಿಸಿ: ನಾವೆಲ್ಲ ಆ ಅದ್ಭುತ ಶಿಲೆಯ ಹಾಗೆಯೇ ಅಲ್ಲವೇ? ನಮ್ಮೆಲ್ಲರಲ್ಲೂ ಓರ್ವ ಪ್ರತಿಭಾವಂತನಿದ್ದಾನೆ. ಒಳಗೊಬ್ಬ ವಿಜೇತನಿದ್ದಾನೆ; ಪ್ರಕಟಗೊಳ್ಳಲು ಕಾಯುತ್ತಿದ್ದಾನೆ. ನಾವು ಯಾರೂ ದೋಷಿಗಳಲ್ಲ, ನಿರುಪಯುಕ್ತರಲ್ಲ; ಬಹಳಷ್ಟು ಸಂದರ್ಭಗಳಲ್ಲಿ, ಓರ್ವ ಯೋಗ್ಯ ಶಿಲ್ಪಿಯ ಬರವಿಗಾಗಿ ನಾವು ಕಾಯುತ್ತಿರುತ್ತೇವೆ; ಆ ಶಿಲ್ಪಿ ಒರಟಾದ ಶಿಲೆಯನ್ನು ಕೆತ್ತಿ ಒಳಗಿರುವ ವಿಜಯಿಯನ್ನು ಹೊರಗೆ ತರಲಿ ಎಂದು ಕಾಯುತ್ತಿರುತ್ತೇವೆ.

ಜಗವನೆ ಜಯಿಸೋಣ’ ಕೃತಿ ನಿಮ್ಮಲ್ಲಿರುವ ನಾಯಕ ತನ್ನನ್ನು ತಾನು ಕಂಡುಕೊಳ್ಳಲು ಸಹಕರಿಸುತ್ತದೆ. ನಮ್ಮಲ್ಲಿ ಅಪಾರವಾದ ಅಂತಃಸತ್ತ್ವವಿದೆ. ನಾವೆಲ್ಲ ಇನ್ನೂ ಉತ್ತಮರಾಗಬಹುದು. ಈ ಕೃತಿಯು ಅಂಥ ಕೆಲವು ಮಾರ್ಗಸೂಚಿಗಳನ್ನು ಕೊಡುತ್ತದೆಂದು ನಾನು ನಂಬಿದ್ದೇನೆ. ಅದು ನಿಮ್ಮನ್ನು ಬದಲಾಯಿಸುವುದಿಲ್ಲ. ಆದರೆ ನೀವು ಏನಾಗಬೇಕಾಗಿದೆಯೋ ಅದಾಗಲು ಈ ಕೃತಿ ಸಹಕಾರಿ. ಉಳಿದವರು ತಮ್ಮ ಪೂರ್ಣ ಅಂತಃಸತ್ತ್ವವನ್ನು ಬೆಳೆಸಿಕೊಳ್ಳಲು ಬೇಕಾದ ನೆರವು ನೀಡುವ ನಿಮಗೆ ಈ ಪುಸ್ತಕ ನೆರವಾಗುತ್ತದೆ. ‘ಜಗವನೆ ಜಯಿಸೋಣ’ ಎಂಬ ಕೃತಿಯು ನಿಜಕ್ಕೂ ಕತೆಗಳ ಸಂಕಲನ, ನನ್ನ ಜೀವನ ಪರಿವರ್ತನೆಗೆ ಕಾರಣವಾದ ಕತೆಗಳು; ನಿಮ್ಮ ಜೀವನದಲ್ಲೂ ಪರಿವರ್ತನೆಯುಂಟು ಮಾಡಬಲ್ಲ ಕತೆಗಳು. ನಾನು ಬಹಳಷ್ಟು ಮುಖ್ಯ ಪಾಠಗಳನ್ನು ನನ್ನ ಮೇಲಧಿಕಾರಿಗಳಿಂದ ಕಲಿಯದೆ ಮಾರಾಟ ಪ್ರತಿನಿಧಿಗಳು, ಲಿಫ್ಟ್ ನಿಯಂತ್ರಕರು, ಕರಣಿಕರು ಹಾಗೂ ಕಾರ್ಖಾನೆಯ ಕೆಲಸಗಾರರಿಂದ ಕಲಿತಿದ್ದೇನೆ. ಬಹಳಷ್ಟು ಸಂದರ್ಭಗಳಲ್ಲಿ ಸಾಮಾನ್ಯ ಜನರೇ ಅಸಾಧಾರಣ ನಾಯಕರು. ನಾಯಕರು ನಾಯಕರನ್ನು ಸೃಷ್ಟಿಸುತ್ತಾರೆ, ಅನುಯಾಯಿಯಗಳನ್ನಲ್ಲ ಎಂಬ ಹೇಳಿಕೆ ಸರಿಯಾಗಿದೆ. ಈಗಲೆ ಕೆತ್ತನೆ ಶುರುಮಾಡಿ, ಸಾವಿರ ನೇತಾರರು ಮೂಡಿ ಬರಲಿ. ನೆನಪಿಡಿ,

ನೀವು ಏನಾಗಬಹುದಿತ್ತೋ ಅದಾಗಲು ಇನ್ನೂ ಕಾಲಮಿಂಚಿಲ್ಲ.

ಪುಟಗಳು: 248