ಅಳ್ಳಿಟ್ಟು ಪ್ರಹಸನಗಳು

ಅಳ್ಳಿಟ್ಟು ಪ್ರಹಸನಗಳು

Regular price
$7.99
Sale price
$7.99
Regular price
Sold out
Unit price
per 
Shipping does not apply

ಹುಬ್ಬಳ್ಳಿಯ ಜವಾರಿ ಭಾಷೆ, ಪಕ್ಕಾ ಲೋಕಲ್ ಎನಿಸುವ ಪದಲಾಲಿತ್ಯ, ಕಚಗುಳಿ ಇಡುವ ಸಾಲುಗಳು, ಪ್ರತಿದಿನದ ಬದುಕಿಗೆ ಸಂಬಂಧಿಸಿದ ವಿಷಯವಸ್ತು, ಇದು ನಮ್ಮಮನೆಯಲ್ಲೇ ನಡೆದದ್ದೇನೋ ಎನಿಸುವ ಆಪ್ತತೆ, ಅನಿರೀಕ್ಷಿತವಾಗಿ ಆಗಮಿಸಿ ಅಚ್ಚರಿ ಹುಟ್ಟಿಸುವ ಟ್ವಿಸ್ಟ್​ಗಳು… ಇವು ಪ್ರಶಾಂತ ಆಡೂರರ ಪ್ರಬಂಧ ಅರ್ಥಾತ್ ಪ್ರಹಸನಗಳ ಪ್ಲಸ್ ಪಾಯಿಂಟ್​ಗಳು.

ಮುಖಪುಟದಲ್ಲಿರುವ ಮುಗ್ಧ ಮಗುವಿನ ಮುಖಭಾವದಿಂದಲೇ ಸೆಳೆದುಬಿಡುತ್ತದೆ 'ಅಳ್ಳಿಟ್ಟು'. ಈ ಮಗು ಆಡುತ್ತಿದೆಯೋ, ಅಣಕಿಸುತ್ತಿದೆಯೋ ಅಥವಾ 'ಅವ್ಕ್' ಅನ್ನುತ್ತ ಅವಸರದ ಜಗತ್ತನ್ನು ಎಚ್ಚರಗೊಳಿಸುತ್ತಿದೆಯೋ ಗೊತ್ತೇ ಆಗುವುದಿಲ್ಲ. ಈ ಅಳ್ಳಿಟ್ಟು 'ತಿಂದು ಮುಗಿಸಿದ' ನಂತರ ಓದುಗರಿಗೂ ಆಗುವುದು ಇದೇ ಅನುಭೂತಿ.

- ಪ್ರಭುದೇವ ಶಾಸ್ತ್ರಿಮಠ