ಪುಟಾಣಿ ಪತ್ತೇದಾರರು (ಇಬುಕ್)

ಪುಟಾಣಿ ಪತ್ತೇದಾರರು (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

1976 - 77 ಸುಮಾರಿನಲ್ಲಿ ನಾನು ಓದಿದ ಒಂದು ಮಕ್ಕಳ ಇಂಗ್ಲೀಷ್ ನಾಟಕ ನನ್ನ ಮನಸ್ಸಿಗೆ ಬಹಳ ಮೆಚ್ಚುಗೆಯಾಯಿತು. ಕನ್ನಡದಲ್ಲಿ ಮಕ್ಕಳ ನಾಟಕಗಳೇ ಬಹಳ ವಿರಳವಾದ್ದರಿಂದ ಆ ನಾಟಕದ ಭಾವಾನುವಾದವನ್ನು ಕನ್ನಡದಲ್ಲಿ ಮಾಡಬೇಕೆಂಬ ಉತ್ಕಟವಾದ ಇಚ್ಛೆ ನನ್ನಲ್ಲಿ ಬೇರೂರಿದಲ್ಲದೆ, ತಕ್ಷಣ ಅದು ಕಾರ್ಯರೂಪಕ್ಕೂ ಇಳಿಯಿತು. ಆದರೆ ಆಗ ನನ್ನ ಸಾಂಸಾರಿಕ ಮತ್ತು ವೃತ್ತಿ ಜೀವನಗಳು ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದ ಸಂದರ್ಭ. ಅದರಿಂದಾಗಿ ನಾಟಕದ ಅನುವಾದ ಕಾರ್ಯವನ್ನು ಒಂದು ವ್ಯವಸ್ಥಿತ ರೀತಿಯಲ್ಲಿ ಮಾಡಲಾಗದೆ ಸಮಯ ದೊರೆತಾಗಲೆಲ್ಲಾ ಹಲವು ಉಪಯೋಗಿಸಿದ ಕ್ಯಾಲೆಂಡರ್ ಹಾಳೆಗಳ ಹಿಂಭಾಗದಲ್ಲಿ ಮತ್ತು ಕೈಗೆ ಸಿಕ್ಕ ಹಲವು ಬಿಡಿ ಖಾಲಿಹಾಳೆಗಳಲ್ಲಿ ಬರೆಯುತ್ತಾ ಹೋದೆ. ಈ ರೀತಿ ಏಳುತ್ತಾ, ಮುಗ್ಗರಿಸುತ್ತಾ ಮುಂದುವರೆದ ಅನುವಾದ ಕಾರ್ಯ ಯಾವುದೋ ಸಂದರ್ಭದಲ್ಲಿ ತೊಡರಿದ್ದು ಮತ್ತೆ ಮೇಲೇಳಲೇ ಇಲ್ಲ. ಆ ಹೊತ್ತಿಗೆ ನಾನು ಹನ್ನೊಂದು ದೃಶ್ಯಗಳನ್ನು ಮುಗಿಸಿ ಹನ್ನೆರಡನೆಯ ಕೊನೆಯ ದೃಶ್ಯಕ್ಕೆ ಬಂದಿದ್ದೆ. ನಾನು ಅನುವಾದ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡದೆ ಇದ್ದುದರಿಂದ ಯಾವಾಗ ನಾನು ಆ ಬರವಣಿಗೆಯನ್ನು ಪೂರ್ಣವಾಗಿ ನಿಲ್ಲಿಸಿದೆ? ಮೂಲ ಆಂಗ್ಲ ಪುಸ್ತಕವನ್ನು ನಾನು ಎಲ್ಲಿಂದ ತಂದಿದ್ದೆ? ಅದರ ಕರ್ತೃ ಯಾರು? ಅದನ್ನು ನಾನು ಯಾವಾಗ, ಯಾರಿಗೆ ಹಿಂತಿರುಗಿಸಿದೆ? (ದುರಾದೃಷ್ಟವಶಾತ್ ಅದ್ಯಾವುದನ್ನೂ ನಾನು ಮೊದಲೇ ಗುರ್ತುಮಾಡಿಕೊಂಡಿರದೇ ಇದ್ದುದರಿಂದ) ಇವ್ಯಾವುಗಳ ಕುರುಹೂ ದೊರೆಯದಷ್ಟು ನಿಗೂಢವಾಗಿ ಎಲ್ಲಾ ಸಂಬಂಧಪಟ್ಟ ಚಟುವಟಿಕೆಗಳೂ ಸ್ಥಬ್ಧವಾದುವಲ್ಲದೆ, ನಾನಿಂತಹ ಒಂದು ಕೆಲಸದಲ್ಲಿ ತೊಡಗಿದ್ದೆ ಎಂಬ ವಿಷಯವೂ ನನ್ನ ಸ್ಮೃತಿಪಟಲದಿಂದ ಸಂಪೂರ್ಣವಾಗಿ ಮಾಯವಾಗಿತ್ತು! ಮೂವತ್ತು ವರ್ಷಗಳ ನಂತರ, ಇತ್ತೀಚೆಗೆ ಅನೀರೀಕ್ಷಿತವಾಗಿ ಆ ಕರಡು ಪ್ರತಿಗಳು, ನಾನು ಆಗಾಗ್ಗೆ ಬರೆದು ನಿಲ್ಲಿಸಿದ್ದ ಹಲವಾರು ಕೈಬರಹಗಳ ಪ್ರತಿಗಳೊಂದಿಗೆ ದೊರೆತಾಗ ಆ ಲೇಖನದ ಎಷ್ಟೋ ಹಾಳೆಗಳು ಜೀರ್ಣವಾಗಿ ಹರಿದುಹೋಗುವ ಸ್ಥಿತಿಯಲ್ಲಿದ್ದವು. ಹಲವು ಹಾಳೆಗಳ ಹರಿದ ಚೂರುಗಳು ಕಾಣೆಯಾಗಿದ್ದುವು. ಕೊನೆಗೊಮ್ಮೆ ನಾನು ಆ ಬರವಣಿಗೆಯನ್ನು ಆ ಸ್ಥಿತಿಯಲ್ಲಿ ಓದಿದಾಗ, ಏನಾದರೂ ಮಾಡಿ ಅದನ್ನು ಪೂರ್ಣಗೊಳಿಸಿ ಹೊರತರಲೇಬೇಕೆಂಬ ಧೃಡ ನಿರ್ಧಾರ ನನ್ನಲ್ಲಿ ಮೂಡಿಬಂತು. ಅದರ ಫಲವಾಗಿ ಈ ನಾಟಕ ಈಗ ಪೂರ್ತಿಗೊಂಡು ಹೊರಬರುತ್ತಿದೆ. ಆದರೆ ವಿಷಾದದ ವಿಷಯವೆಂದರೆ ಈ ಲೇಖನದ ಮೂಲಕರ್ತೃ ಯಾರು? ಆಂಗ್ಲಭಾಷೆಯಲ್ಲಿ ಅದರ ಹೆಸರೇನಾಗಿತ್ತು? ಎಂಬುದಕ್ಕೆ ನನ್ನ ಹತ್ತಿರ ಯಾವ ಪುರಾವೆಯೂ ಇಲ್ಲ. ಅದನ್ನು ಕಂಡು ಹಿಡಿಯುವ ಪ್ರಯತ್ನ ಇದುವರೆವಿಗೂ ಫಲಿಸಿಲ್ಲ. ನಾನು ಈ ನಾಟಕಕ್ಕೆ ëಪುಟಾಣಿ ಪತ್ತೆದಾರರುí ಎಂದು ಹೆಸರಿಸಿರುವುದರಿಂದ ಬಹುಶಃ ಮೂಲ ಲೇಖನದ ಹೆಸರು ëಲಿಟಲ್ ಡಿಟೆಕ್ಟೆವ್ಸ್í ಎಂದೋ ಅಥವಾ ëಯಂಗ್ ಡಿಟೆಕ್ಟೆವ್ಸ್í ಎಂದೋ ಆಗಿದ್ದಿರಬಹುದು. ಆದರೆ ಅದರ ಕರ್ತೃವಿನ ಹೆಸರು ಇದುವರೆವಿಗೂ ತಿಳಿದುಕೊಳ್ಳಲಾಗಿಲ್ಲ. ಏನೇ ಆದರೂ ನಾನು ಮೊದಲಿಗೆ ಆತನಿಗೆ ಋಣಿ. ಒಂದು ಸಮಯ ಯಾರಾದರೂ ಓದುಗರು ಈ ಸಂಬಂಧವಾದ ವಿವರಗಳನ್ನು ನನ್ನ ಗಮನಕ್ಕೆ ತಂದಲ್ಲಿ ನಾನು ಅವರಿಗೆ ಆಭಾರಿಯಾಗಿರುತ್ತೇನೆ.

 

- ಬೂದಗೆರೆ ಸಚ್ಚಿದಾನಂದ

 

ಪುಟಗಳು: 80

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !