ಆಕಾಶಕ್ಕೆ ಏಣಿ ಹಾಕಿ

ಆಕಾಶಕ್ಕೆ ಏಣಿ ಹಾಕಿ

Regular price
$7.99
Sale price
$7.99
Regular price
Sold out
Unit price
per 
Shipping does not apply

ಬೆಳೆಯುವ ವಯಸ್ಸಿನಲ್ಲಿ ನನ್ನ ಮನಸ್ಸಿನಲ್ಲಿ ಇದ್ದ ತುಮುಲಗಳು, ಅಜ್ಞಾನ, ಗೊಂದಲಗಳು ಇವುಗಳ ಜೊತೆಗೆ ಆಪ್ತಸಲಹೆ ಮತ್ತು ವ್ಯಕ್ತಿವಿಕಸನಗಳ ತರಬೇತಿ ಕಾರ್ಯಕ್ರಮಗಳಿಂದಾಗಿ ಯುವ ಪೀಳಿಗೆಯ ಜೊತೆಗಿನ ಸಂಪರ್ಕಗಳು ಈ ಪುಸ್ತಕ ಬರೆಯಲು ಉತ್ತೇಜಕ ಶಕ್ತಿಗಳು. ಯುವ ಜನರ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಭವವಾಗುತ್ತವೆ. ಮನಸ್ಸಿನಲ್ಲಿ ಗೊಂದಲಗಳಿರುತ್ತವೆ. ಸಂಘರ್ಷಗಳು ನಡೆಯುತ್ತಿರುತ್ತವೆ. ಪೋಷಕರನ್ನು ಕೇಳುವ ಧೈರ್ಯ ಅನೇಕರಿಗೆ ಬರುವುದಿಲ್ಲ. ಬೇರೆ ಯಾರನ್ನು ಕೇಳಿದರೆ ಅವುಗಳಿಗೆ ಸಮಾಧಾನ ಸಿಗಬಹುದು ಎಂದು ತಿಳಿಯುವುದಿಲ್ಲ. ಇದರಿಂದ ಸಹವಯಸ್ಕರನ್ನು, ಅಂತರ್ಜಾಲ ತಾಣಗಳನ್ನು ಅವಲಂಬಿಸಬೇಕಾಗಿ ಬರುವುದು. ಅಲ್ಲಿ ಸರಿಯಾದ ಮಾರ್ಗದರ್ಶನ ಸಿಗದೇ ಹೋಗಬಹುದು. ಸ್ವ-ಸಹಾಯ ಪುಸ್ತಕಗಳಿವೆ. ಇವು ಬಹುತೇಕ ಇಂಗ್ಲೀಷ್‌ ಭಾಷೆಯಲ್ಲಿ ಇರುತ್ತವೆ. ಎಲ್ಲರಿಗೂ ತಲುಪುವುದಿಲ್ಲ. ಅವುಗಳಲ್ಲಿ ಅನೇಕವು ಕನ್ನಡಕ್ಕೆ ಭಾಷಾಂತರವಾಗಿವೆ, ನಿಜ. ಆದರೆ ಭಾಷಾಂತರಕ್ಕಿಂತ ಕನ್ನಡದಲ್ಲಿಯೇ ಮೂಲ ಪುಸ್ತಕವಿದ್ದರೆ ಹೆಚ್ಚು ಆಪ್ಯಾಯಮಾನವಾಗಬಹುದು ಎನಿಸಿತು. ಬರೆಯುವಾಗ ಎರಡು ಸಮಸ್ಯೆಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬರೆದಿದ್ದೇನೆ. ಮೊದಲನೆಯದು ಈಗಿನ ಯುವ ಪೀಳಿಗೆಗೆ ಓದುವುದು ಎಂದರೆ ಪರೀಕ್ಷೆಗಾಗಿ ಮಾತ್ರ ಎಂದಾಗಿದೆ. ಅವರಿಗೆ ಸಿದ್ಧಾಂತಗಳು, ಶಾಸ್ತ್ರೋಕ್ತ  ವಿವರಣೆಗಳು ಬೇಕಿಲ್ಲ. ಅವರ ಮನಸ್ಸಿನಲ್ಲಿ ಸದ್ಯ ಕಾಡುತ್ತಿರುವ ಪ್ರಶ್ನೆಗಳಿಗೆ, ಸಮಸ್ಯೆಗೆ ಪರಿಹಾರ ಬೇಕು. ಎರಡನೆಯದು ಸುದೀರ್ಘವಾಗಿದ್ದರೆ ಓದುವಷ್ಟು ತಾಳ್ಮೆ ಇಲ್ಲ. ಹೀಗಾಗಿ ಈ ಪುಸ್ತಕದಲ್ಲಿ ಸುಮಾರು 60 ಅಧ್ಯಾಯಗಳು ಬರುತ್ತವೆ. ಪ್ರತಿಯೊಂದೂ ಐದು ನಿಮಿಷಗಳಲ್ಲಿ ಓದಿ ಮುಗಿಸಬಹುದು. ಆ ಐದು ನಿಮಿಷಗಳ ಓದು ಮನಸ್ಸಿನಲ್ಲಿ ಹೆಚ್ಚಿನ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳಲು ಓದುಗರಿಗೆ ನೆರವಾಗಬಹುದು. ನಾನು ಓದಿದ ಅನೇಕ ಪುಸ್ತಕಗಳು, ಸ್ವಂತ ಚಿಂತನೆಗಳು ಹಾಗೂ ಯುವಜನರ ಸಂಪರ್ಕದಲ್ಲಿ ಆದ ಅನುಭವಗಳು ಈ ಪುಸ್ತಕಕ್ಕೆ ಆಕರ.

ಪುಟಗಳು - 184