ರಂಗ ಪುರಾಣ (ಇಬುಕ್)

ರಂಗ ಪುರಾಣ (ಇಬುಕ್)

Regular price
$7.99
Sale price
$7.99
Regular price
Sold out
Unit price
per 
Shipping does not apply

GET FREE SAMPLE

‘ರಂಗ ಪುರಾಣ’ ಥಿಯೇಟರ್ ತತ್ಕಾಲ್ ಬುಕ್ಸ್ ನ ಮೂರನೇ ಪ್ರಕಟಣೆ. ಸೃಜನಶೀಲ ಸಾಹಿತ್ಯ, ರಂಗಭೂಮಿ, ಸಿನಿಮಾ ಕೃತಿಗಳ ಪ್ರಕಟಣೆಗಳಿಗಾಗಿ ಹುಟ್ಟಿಕೊಂಡ ಈ ಪ್ರಕಾಶನಕ್ಕೆ, ಚನ್ನಕೇಶವ ಸ್ಥಾಪಕ ಸಂಪಾದಕರು.

ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ರಂಗಭೂಮಿಯಲ್ಲಿ ನಾವು ಹಲವಾರು ಗೆಳೆಯರು ಜೊತೆಗೆ ಸಾಗಿ ಬಂದಿದ್ದೇವೆ. ನಮ್ಮ ಮನಸ್ಸಿಗೆ ಬಂದದ್ದನ್ನು ಮಾಡಿ ಮುಗಿಸುವ ವಿಷಯದಲ್ಲಿ, ನಮ್ಮೆಲ್ಲರಿಗೂ ಬೆಂಬಲವಾಗಿ ನಿಲ್ಲುತ್ತಿದ್ದುದು ಚನ್ನಕೇಶವ! ಅವನು ಜೊತೆಗೂಡಿದನೆಂದರೆ ಆ ಕೆಲಸ ಮುಗಿದಂತೆಯೇ. ಹಾಗೆ ಈ ಪ್ರಕಾಶನದ ಮೂಲಕ ಹಲವು ಪುಸ್ತಕ ಪ್ರಕಟನೆಯ ಯೋಜನೆ ಹಮ್ಮಿಕೊಂಡಿದ್ದೆವು. ಮಧ್ಯದಲ್ಲಿ ಚನ್ನಕೇಶವ ನಮ್ಮನ್ನಗಲಿದ್ದಾನೆ...

ಈಗ ಅವನೇ ಬರೆದಿರುವ ‘ರಂಗ ಪುರಾಣ’ವನ್ನು ಪ್ರಕಟಿಸುತ್ತಿದ್ದೇವೆ. ಇದಕ್ಕೆ ನಮ್ಮೊಡನೆ ನಿಂತ, ವಿವೇಕ ಶಾನಭಾಗ, ಕ್ಯಾಥಿ ಪರ್ಕಿನ್ಸ್, ಎಮ್ ಎಸ್ ಜಹಾಂಗೀರ್, ಮೌನೇಶ್ ಬಡಿಗೇರ್, ಪ್ರಕಾಶ್ ಬಾಬು ಎಮ್ ಎಸ್, ಶ್ರೀಧರ ಹೆಗ್ಗೋಡು, ಅರವಿಂದ ನರೇಗಲ್, ನಾಗರಾಜ್ ಪತ್ತಾರ, ಗೀತಾ ಸಿದ್ದಿ, ವಿಜಯಕುಮಾರ್ ಸೀತಪ್ಪಾ, ನವೀನ, ಸಹನಾ,    ರಾಜಾರಾಮ್ ಕೆ ಎಸ್, ಪ್ರತೀಕ ಮುಕುಂದ, ಶಿಶಿರ ಕೆ ವಿ, ಲೋಕಚರಿತ ಬಳಗ, ಸತೀಶ್ ನೀನಾಸಮ್, ಕಿರಣ್ ನಾಯಕ್, ರಾಘು ಶಿವಮೊಗ್ಗ, ಗೋಪಾಲಕೃಷ್ಣ ದೇಶಪಾಂಡೆ, ರೇವತಿ ನಾಡಗೀರ ಮತ್ತು ಪ್ರಕಟಿಸಲು ಅನುಮತಿಯಿತ್ತ ಗಿರಿಜಾ ಸಿದ್ದಿ, ಹಾಗೂ ಮಧುರ ಚನ್ನಿಗ ಸುಬ್ಬಣ್ಣ ಅವರಿಗೆ ಧನ್ಯವಾದ ಹೇಳುತ್ತಾ...

ಆಸಕ್ತ ಓದುಗರಿಗೆ ಅರ್ಪಿಸುತ್ತಿದ್ದೇವೆ.

 

ಅಚ್ಯುತ ಕುಮಾರ್

 

 

ಪುಟಗಳು : 200

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !