ರಾಮಾಯಣ –ಒಂದು ಹೊಸ ಓದು

ರಾಮಾಯಣ –ಒಂದು ಹೊಸ ಓದು

Regular price
$6.99
Sale price
$6.99
Regular price
Sold out
Unit price
per 
Shipping does not apply

ನಾವಲೇಕರರು ರಾಮನನ್ನು ಹುಲುಮಾನವನ ನೆಲೆಯಲ್ಲಿ ನಿಲ್ಲಿಸಿ, ರಾಮಾಯಣದಲ್ಲಿ ಬರುವ ಪವಾಡದ ಅಂಶಗಳನ್ನು ಪ್ರಕ್ಷೇಪವೆಂಬ ಕಾರಣಕ್ಕೆ ಪೂರ್ತಿಯಾಗಿ ಬದಿಗೆ ಸರಿಸಿ, ಇತಿಹಾಸದ ದೃಷ್ಟಿಯಿಂದ ರಾಮನ ಚಾರಿತ್ರ್ಯವನ್ನು ಈ ಕೃತಿಯಲ್ಲಿ ಅವಲೋಕಿಸಿದ್ದಾರೆ. ಶ್ರೀರಾಮ ಭಾರತದ ಒಂದೊಂದು ಹಳ್ಳಿಯಲ್ಲೂ ಈಗಲೂ ಏಕೆ ಪೂಜೆಗೊಳ್ಳುತ್ತಿದ್ದಾನೆ, ಅವನು ಅಖಂಡ ಭಾರತ ದೇಶದ ಪ್ರಾಣಶಕ್ತಿಯಾಗಲು ಕಾರಣವೇನು ಮುಂತಾದ ಪ್ರಶ್ನೆಗಳನ್ನು ರಾಗ-ದ್ವೇಷಗಳಿಲ್ಲದೆ ನಿರ್ಲಿಪ್ತವಾಗಿ, ವಿದ್ವತ್ಪೂರ್ಣವಾಗಿ ಈ ಕೃತಿಯಲ್ಲಿ ಶೋಧಿಸಿದ್ದಾರೆ.

ರಾಮಾಯಣವನ್ನು ಕಲ್ಪವೃಕ್ಷವೆಂದು ಕರೆದ ಭಕ್ತರೂ ಉಂಟು; ಹಾಗೆಯೇ ಅದನ್ನು ವಿಷವೃಕ್ಷ ಎಂದು ಕರೆದ ಟೀಕಾಕಾರರೂ ಉಂಟು. ಆದರೆ ಅತಿರೇಕಗಳಲ್ಲಿ ನಿಂತು ನಾವು ತೆಗೆದುಕೊಳ್ಳುವ ಯಾವುದೇ ತೀರ್ಮಾನ ನ್ಯಾಯಯುತವಾಗಿ ಇರಲಾರದು. ನಮ್ಮದೊಂದು ಅಜೆಂಡಾ ಅಥವಾ ಪೂರ್ವಸಿದ್ಧ ಕಲ್ಪನೆ ಇದ್ದಾಗಲಷ್ಟೇ ನಾವು ಅತಿರೇಕದಲ್ಲಿ ನಿಂತು ವಿಮರ್ಶೆ ಮಾಡುತ್ತಿರುತ್ತೇವೆ. ಅಂತಹ ವಿಮರ್ಶೆಯಿಂದ ನಮ್ಮ ಪೂರ್ವಸಿದ್ಧ ಕಲ್ಪನೆಗೆ ನ್ಯಾಯ ಸಿಗಬಹುದು. ಆದರೆ ಹಾಗೆ ವಿಮರ್ಶೆ ಮಾಡುವುದರಿಂದ ನಮಗರಿವಿಲ್ಲದೆಯೇ ನಮ್ಮ ವಿಮರ್ಶೆಯ ಪ್ರಜ್ಞೆಯನ್ನು, ನಮ್ಮ ನಿಯತ್ತನ್ನು ನಾವು ಮಾರಿಕೊಂಡಿರುತ್ತೇವೆ. ಈ ಧೋರಣೆಯಿಂದ ಅಂತಿಮವಾಗಿ ಆದಿಕವಿ ವಾಲ್ಮೀಕಿಗೆ ಅನ್ಯಾಯವಾಗುತ್ತದೆ. ಈ ಮಾತು ರಾಮನ ಭಜನೆ ಮಾಡುವವರಿಗೂ, ನಿಂದನೆ ಮಾಡುವವರಿಗೂ ಸಮಾನವಾಗಿ ಅನ್ವಯವಾಗುತ್ತದೆ. 

 

ಪುಟಗಳು: 216

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !