ರಂಗಭೂಮಿಯ ಮುಖಾಂತರ

ರಂಗಭೂಮಿಯ ಮುಖಾಂತರ

Regular price
$5.99
Sale price
$5.99
Regular price
Sold out
Unit price
per 
Shipping does not apply

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಕೆ.ವಿ. ಅಕ್ಷರ ಅವರು ಕಳೆದ ಹತ್ತು ವರ್ಷಗಳಲ್ಲಿ ಬರೆದ ಮೂವತ್ತೈದು ಲೇಖನಗಳು ಇಲ್ಲಿ ಸಂಕಲಿತವಾಗಿವೆ. ಜಾಗತೀಕರಣದ ಪ್ರಸ್ತುತ ಸಂದರ್ಭದಲ್ಲಿ ರಂಗಭೂಮಿಯ ಸ್ವರೂಪ, ಸಮಸ್ಯೆ ಮತ್ತು ಸವಾಲುಗಳನ್ನು ಬೇರೆ ಬೇರೆ ನೆಲೆಗಳಲ್ಲಿ ಚರ್ಚಿಸಿ ಅರ್ಥೈಸುವ, ಸದ್ಯದ ಬಿಕ್ಕಟ್ಟುಗಳಿಗೆ ಮೌಲಿಕ ಉತ್ತರಗಳನ್ನು ಸೂಕ್ಷ್ಮವಾಗಿ ಶೋಧಿಸಿಕೊಳ್ಳುವ ಮಹತ್ವದ ಬರಹಗಳು ಇಲ್ಲಿವೆ. ಎಲ್ಲವೂ ಮಾರುಕಟ್ಟೆಯ ಒತ್ತಡಗಳಿಂದ ನಿರ್ಧರಿತವಾಗಿ ಉದ್ಯಮೀಕರಣಕ್ಕೆ ಒಳಗಾಗುತ್ತಿರುವ, ವ್ಯಾವಹಾರಿಕ ಲಾಭ-ನಷ್ಟಗಳೇ ಸಾಂಸ್ಕೃತಿಕ ವ್ಯಾಪಾರಗಳನ್ನೂ ನಿಯಂತ್ರಿಸುತ್ತಿರುವ ನಮ್ಮ ಈ ಕಾಲದಲ್ಲಿ ಅಕ್ಷರ ಅವರು ಕಟ್ಟುತ್ತಿರುವ ಪ್ರತಿರೋಧದ ಮಾದರಿಗಳು ನಮ್ಮನ್ನು ತೀವ್ರವಾದ ಚಿಂತನೆಗೆ ಹಚ್ಚುವಂತಿವೆ. ರಂಗಭೂಮಿಯು ಅಕ್ಷರ ಅವರಿಗೆ ಕೇವಲ ಒಂದು ಹವ್ಯಾಸವಲ್ಲ; ವೃತ್ತಿಯೂ ಅಲ್ಲ; ಅದು ಅವರು ಬದುಕನ್ನು ನೋಡುವ ಒಂದು ಕ್ರಮ. ಅದು ಅವರ ಮುಖ್ಯ ಭಾಷೆ. ತಮ್ಮ ಸುತ್ತಣ ಲೋಕವನ್ನು ರಂಗಪ್ರತಿಮೆಗಳಲ್ಲೇ ಗ್ರಹಿಸಿ ರಂಗನುಡಿಗಟ್ಟಿನಲ್ಲೇ ಅಭಿವ್ಯಕ್ತಿಸುವ ಅಕ್ಷರ ಅವರ ಬರವಣಿಗೆ -- ಅವು ಸಾಮಾಜಿಕ-ರಾಜಕೀಯ-ಸಾಂಸ್ಕ ತಿಕ ಸಮಸ್ಯೆಗಳ ವಿಶ್ಲೇಷಣೆಗಳಾಗಿರಲಿ, ಸಾಹಿತ್ಯವಿಮರ್ಶೆಯಾಗಿರಲಿ, ವ್ಯಕ್ತಿಚಿತ್ರ-ಪುಸ್ತಕವಿಮರ್ಶೆಯ ಲೇಖನಗಳಾಗಿರಲಿ -- ಸಿದ್ಧಜಾಡಿಗೆ ಬೀಳದೆ ತನ್ನದೇ ಆದ ಅನನ್ಯತೆಯನ್ನೂ ಹೊಸತನವನ್ನೂ ಪಡೆದುಕೊಂಡಿದೆ. ರಂಗಭೂಮಿಯ ಮುಖಾಂತರ ಸದ್ಯದ ಸಂದಿಗ್ಧಗಳಿಗೆ ಎದುರಾಗಿರುವ ಈ ಕ್ರಮವು ಏಕಕಾಲದಲ್ಲಿ ರಂಗದ ಒಳಗನ್ನೂ ಹೊರಗನ್ನೂ ಹೊಸಬೆಳಕಿನಲ್ಲಿ ಕಾಣಿಸಿ ಓದುಗರ ಅರಿವನ್ನು ಹಿಗ್ಗಿಸುವಂತಿದೆ.


-ಟಿ.ಪಿ. ಅಶೋಕ

 

ಪುಟಗಳು: 248

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !