ಸಮಾಜಮುಖಿ ವಾರ್ಷಿಕ ಕಥಾ ಸಂಕಲನ-2022 (ಇಬುಕ್)

ಸಮಾಜಮುಖಿ ವಾರ್ಷಿಕ ಕಥಾ ಸಂಕಲನ-2022 (ಇಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಸಮಾಜಮುಖಿ ಪ್ರಕಾಶನ

Publisher: Samajamukhi Prakashana

 

ಸಮಕಾಲೀನ ಆಗುಹೋಗುಗಳ ಮಾಹಿತಿ, ವಿಶ್ವವಿದ್ಯಮಾನಗಳ ವಾಸ್ತವಿಕ ಅರಿವು, ಪುಸ್ತಕಲೋಕದ ಸಮೃದ್ಧ ಜ್ಞಾನ, ಸಂಸ್ಕೃತಿ ಸಂಪದದ ಹದವಾದ ಪಾಕ ಮತ್ತು ಓದುಗರ ಅನ್ನಿಸಿಕೆಗಳ ಪ್ರತಿಬಿಂಬದ ಜೊತೆಗೆ ಪ್ರತೀ ತಿಂಗಳು ಜ್ವಲಂತ ವಿಷಯಗಳ ಮುಖ್ಯ ಚರ್ಚೆ ಹೊತ್ತು ಬರುತ್ತಿರುವ ಸಮಾಜಮುಖಿ ಬಗ್ಗೆ ವಿಸ್ತರಿಸಿ ಹೇಳುವ ಅಗತ್ಯವಿಲ್ಲ. ನಾಲ್ಕು ವರ್ಷಗಳ ಸಮಾಜಮುಖೀ ನಡಿಗೆಯಲ್ಲಿ ಸೈದ್ಧಾಂತಿಕ ಬದ್ಧತೆಗಳನ್ನು ಮೀರಿದ ವೈಚಾರಿಕತೆ ಪಸರಿಸಬೇಕೆಂಬ ನಮ್ಮ ಹಂಬಲ ಓದುಗರ ಬೆಂಬಲದೊಂದಿಗೆ ಮತ್ತಷ್ಟು ಹರಳುಗಟ್ಟಿದೆ. ಕನ್ನಡ ಮನಸ್ಸುಗಳ ಅನುಭವ ಮತ್ತು ವಿವೇಕಗಳಿಗೆ ವ್ಯಾಪಕತೆ ಒದಗಿಸಿ ಕ್ರಮಬದ್ಧ ಚಿಂತನೆ ಬೌದ್ಧಿಕತೆ ಕಟ್ಟಬೇಕೆಂಬ ಸಮಾಜಮುಖಿಯ ಕಾಯಕದ ಹಿಂದೆ ಅಡಕವಾಗಿರುವುದು ಕುವೆಂಪು ಅವರ ನಿರಂಕುಶಮತಿ, ವೈಚಾರಿಕ ಪ್ರಜ್ಞೆ ಮತ್ತು ಸರ್ವೋದಯದ ಆಶಯಗಳು. ಕನ್ನಡಿಗರಿಗೆ ಕನ್ನಡಿಯೂ, ದೀಪವೂ ಆಗುವ ಸಮಾಜಮುಖಿ ತವಕದ ಜೊತೆಗೆ ತಾವೂ ಇರುವಿರೆಂಬ ನಂಬಿಕೆ ನಮ್ಮದು.

ಇದೀಗ ಸಮಾಜಮುಖಿ ಐದನೇ ವರ್ಷಕ್ಕೆ ಕಾಲಿರಿಸಿದ ಸಂದರ್ಭದಲ್ಲಿ ಕನ್ನಡದ ಸಣ್ಣ ಕತಾಸಾಹಿತ್ಯ ಪ್ರಕಾರಕ್ಕೆ ಉತ್ತೇಜನ ನೀಡಲು ಕತಾ ಸ್ಪರ್ಧೆ ಏರ್ಪಡಿಸಲಾಗಿತ್ತು. ನಮ್ಮ ಆಹ್ವಾನಕ್ಕೆ ಪುಟಿದುಬಂದ ಪ್ರತಿಕ್ರಿಯೆ ನಿಜಕ್ಕೂ ಅಭೂತಪೂರ್ವ. ಗಮನಾರ್ಹ ಅಂಶವೆಂದರೆ ಸ್ಪರ್ಧೆಗೆ ಬಂದ ಎಲ್ಲಾ ಕತೆಗಳೂ ಇ-ಮೇಲ್ ಮೂಲಕವೇ ಬಂದಿದ್ದು; ಅಂಚೆಯಲ್ಲಿ ಒಂದೂ ಬಂದಿಲ್ಲ! ಸುಮಾರು ಐನೂರರಷ್ಟಿದ್ದ ಕತೆಗಳ ಮೊದಲ ಸುತ್ತಿನ ಜರಡಿಯಲ್ಲಿ ಕಾಲುಭಾಗ ಜೊಳ್ಳುಗಳು ಉದುರಿಹೋದವು. ಆಯ್ಕೆ ಪ್ರಕ್ರಿಯೆಯ ಮುಂದಿನ ಹಂತದಲ್ಲಿ ನನ್ನ ಒಂದು ತಿಂಗಳ ಸಮಯ ಮತ್ತು ಪರಿಶ್ರಮ ವ್ಯಯವಾದರೂ ಅದೊಂದು ಮರೆಯಲಾಗದ ಅನುಭವವಾಗಿತ್ತು. ಅಂತಿಮ ಹಂತ ಏರಿದ ಐವತ್ತೆಂಟು ಕತೆಗಳನ್ನು ತಮ್ಮ ಬಹುಮಾನಿತ ಕತೆಗಳ ಮೂಲಕವೇ ನಾಡಿಗೆ ಪರಿಚಿತರಾದ ಅಮರೇಶ ನುಗಡೋಣಿ ಅವರಿಗೆ ದಾಟಿಸಿದಾಗ ನನಗೆ ಒಂದಿಷ್ಟು ನಿರಾಳತೆ.

ನಿಮಗೆ ಗೊತ್ತಿರುವಂತೆ ಸ್ಪರ್ಧೆಯ ತೀರ್ಪುಗಾರರಿಗೆ ಕಳುಹಿಸಿದ ಕತೆಗಳ ಕಡತದಲ್ಲಿ ಕತೆಗಾರರ ಹೆಸರು ಇರುವುದಿಲ್ಲ. ತೀರ್ಪುಗಾರರು ಅತ್ಯಂತ ಕಡಿಮೆ ಸಮಯದಲ್ಲಿ ನಮ್ಮ ಗಡುವಿನೊಳಗೆ ಸಮಾಜಮುಖಿ ಪುರಸ್ಕಾರಕ್ಕೆ ಆಯ್ಕೆಯಾದ ಐದು ಮತ್ತು ಮೆಚ್ಚುಗೆ ಪಡೆದ ಗುಂಪಿನ ಹತ್ತು ಕತೆಗಳನ್ನು ಅಂತಿಮಗೊಳಿಸಿದರು. ಇವುಗಳೊಂದಿಗೆ ವಿವಿಧ ಕಾರಣಗಳಿಗಾಗಿ ನನಗೆ ಇಷ್ಟವಾದ ಏಳು ಕತೆಗಳು ಈ ಸಂಪುಟದಲ್ಲಿ ಸ್ಥಾನ ಪಡೆದಿವೆ. ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ ಎಲ್ಲಾ ಕತೆಗಾರರಿಗೆ, ತೀರ್ಪುಗಾರರಿಗೆ ಧನ್ಯವಾದಗಳು.

ನಿಮ್ಮ ಕೈಯಲ್ಲಿರುವ ಈ ಪುಸ್ತಕ ‘ಸಮಾಜಮುಖಿ ಪ್ರಕಾಶನ’ದ ಮೂರನೇ ಕೃತಿ.

ಎಂದಿನಂತೆ ಬರಮಾಡಿಕೊಳ್ಳಿ, ಬೆಂಬಲವಿರಲಿ.

-ಚಂದ್ರಕಾಂತ ವಡ್ಡು

ಸಂಪಾದಕ

 

ಪುಟಗಳು: 272

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !