ಸಂವಹನ (ಇಬುಕ್)

ಸಂವಹನ (ಇಬುಕ್)

Regular price
$12.99
Sale price
$12.99
Regular price
Sold out
Unit price
per 
Shipping does not apply

GET FREE SAMPLE

 

ಇಪ್ಪತ್ತು ಕಾವ್ಯ ವಿಮರ್ಶೆಯ ಪ್ರಬಂಧಗಳು.

 

‘ಸಂವಹನ’ ಎಂಬ ಹೆಸರಿನಿಂದ ಪ್ರಕಟವಾಗುತ್ತಿರುವ ಇಪ್ಪತ್ತು ವಿಮರ್ಶಾ ಪ್ರಬಂಧಗಳು ಸುಮಾರು ಐವತ್ತು ವರ್ಷದ ಅವಧಿಯಲ್ಲಿ ಎಲ್ಲೆಲ್ಲೊ ಗಾಳಿ ಬೆಳಕನ್ನು ಕಂಡವು. ಇವುಗಳಲ್ಲಿ ನಾಲ್ಕೆಂಟು ಲೇಖನಗಳು ‘ಪ್ರಬುದ್ಧ ಕರ್ನಾಟಕ’ ಎಂಬ ತ್ರೈಮಾಸಿಕದಲ್ಲಿ ಹಾಗೂ ಕೆಲವೊಂದು ವಿದ್ವದ್ ಗ್ರಂಥಗಳಲ್ಲಿ ಪ್ರಕಟವಾದವು. ಹಾಗಾಗಿ ಈ ಲೇಖನಗಳು ಓದುಗರ ಪೂರ್ಣ ಗಮನವನ್ನು ಸೆಳೆದುಕೊಳ್ಳುವ ಯಾವುದೇ ಆಶಯವನ್ನು ಇಟ್ಟುಕೊಂಡಿರಲಿಲ್ಲ. ಇದು ಸಂತೋಷಪಡಬೇಕಾದ ಸಂಗತಿಯಲ್ಲ ಎಂದೆನಿಸುತ್ತದೆ. ಇಷ್ಟೇ ಅಲ್ಲದೆ ಇನ್ನು ಸುಮಾರು ಇಪ್ಪತ್ತು ಮೂವತ್ತು ಲೇಖನಗಳು ಪ್ರಕಟಣೆ ಇಲ್ಲದೆ ನಾನು ಮಾಡಿರಬಹುದಾದ ಅಪಚಾರವನ್ನು ಚುಚ್ಚಿ ಮನದಟ್ಟು ಮಾಡುತ್ತಿರುವಂತೆ ಭಾಸವಾಗುತ್ತಿದೆ. ಐವತ್ತು ವರ್ಷದ ಅವಧಿಯಲ್ಲಿ ಬರಹದ ವಿಧಿವಿಧಾನಗಳು ಗಮನಾರ್ಹವಾಗಿ ಬದಲಾವಣೆಗೊಂಡಿದೆ. ಹಾಗಿದ್ದೂ ಓದಬಹುದಾದ ಮನನೀಯ ಅಂಶಗಳು ಇರಬಹುದೆಂಬ ಪ್ರತ್ಯಯದಿಂದ ಗ್ರಂಥ ರೂಪದಲ್ಲಿ ಲೇಖನಗಳು ಮೈದಾಳಿ ಓದುಗರ ಸಹನೆಯನ್ನು ಕೋರುತ್ತಿವೆ. ಕಾಲ ಮೀರಿದ ಈ ಬರಹವನ್ನು ತಾಳ್ಮೆಯಿಂದ ಒಮ್ಮೆ ಅವಗಾಹಮಾಡಬಹುದು ಎಂಬ ಭಾವನೆ ಮೂಡಿದರೆ ಧನ್ಯತಾಭಾವ ಲಾಭದಾಯಕ ಎಂಬ ಸಮಾಧಾನ ಬಂದೀತು. ಈ ಲೇಖನಗಳೆಲ್ಲವೂ ಒಂದೇ ಕಾಲದಲ್ಲಿ ಬರೆದವಲ್ಲ ಎಂಬುದು ಎಷ್ಟು ದಿಟವೊ ಮನಸ್ಸಿನ ಒಂದೇ ಹದದಲ್ಲಿ ಬರೆದಂಥವೂ ಅಲ್ಲ ಎಂಬುದೂ ಅಷ್ಟೆ ಗಮನಾರ್ಹ. ಕೆಲವೊಂದು ಲೇಖನ ಭಾಗ ನನಗೆ ತುಂಬಾ ಅಸಮಾಧಾನವನ್ನು ತಂದಿವೆ ಮತ್ತು ಕೆಲವೆಡೆ ಸಹನೀಯ ಎಂಬ ಭಾವನೆಯನ್ನು ತಂದಿವೆ.

 

ಪುಟಗಳು: 429
 
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !