ಸಂಜೀವಿನಿ

ಸಂಜೀವಿನಿ

Regular price
$4.99
Sale price
$4.99
Regular price
Sold out
Unit price
per 
Shipping does not apply

ಪ್ರಕಾಶಕರು: ಸಂಜೋತಾ ಪುರೋಹಿತ

Publisher: Sanjota Purohita

 

ಇಲ್ಲಿ ನಾನೇನನ್ನೋ ಗಹನವಾದುದನ್ನು ಹೇಳ ಹೊರಟಿಲ್ಲ. ನೀವು ಎಲ್ಲೂ ಕಂಡಿರದ ವಿಸ್ಮಯಗಳನ್ನು ಪರಿಚಯಿಸುವ ಕಾದಂಬರಿಯೂ ಇದಲ್ಲ. ಒಂದು ಸರಳ ಪ್ರೇಮ ಕತೆಯಿದು. ನನ್ನ ಜೀವನದಲ್ಲಿ ನಡೆದದ್ದು. ನನ್ನ ಕತೆ, ನನ್ನ ಪ್ರೇಮ ಕತೆ. ಹಾಗಂತ ಈ ಪುಸ್ತಕ ನನ್ನ ಜೀವನ ಚರಿತ್ರೆಯಲ್ಲ. ಇಲ್ಲಿ ಬರುವ ಕಾಲೇಜ್, ಸ್ನೇಹ, ಹಾಸ್ಟೆಲ್ ಮುಂತಾದ ನೆನಪುಗಳೆಲ್ಲ ನನ್ನ ಅನುಭವದಿಂದ ಹೆಕ್ಕಿ ತೆಗೆದ ಸಂಗತಿಗಳಾದರೂ ಇಲ್ಲಿ ಬರುವ ಹಲವು ಘಟನೆಗಳು ಮತ್ತು ಪಾತ್ರಗಳು ಕಾಲ್ಪನಿಕ. ಈ ಕತೆ ನಿಮ್ಮ ಜೀವನದಲ್ಲಿ ಅಥವಾ ನಿಮ್ಮ ಸ್ನೇಹಿತರ ಜೀವನದಲ್ಲಿ ನಡೆದಿರಬಹುದು. ಪ್ರೀತಿ ಯಾರ ಜೀವನದಲ್ಲಿರುವುದಿಲ್ಲ ಹೇಳಿ.. ಹಾಗಾಗಿ ಈ ಕತೆ ನೀವು ಎಲ್ಲೋ ಕೇಳಿರುವ ಅಥವಾ ಪ್ರತ್ಯಕ್ಷವಾಗಿ ನೋಡಿರುವ ಅಥವಾ ನೀವೇ ಅನುಭವಿಸಿರುವ ಕತೆಯಾಗಿರಬಹುದು. ಈ ಕತೆ ಓದಿದ ನಂತರ ಜೀವನದ ಚೈತ್ರ ಮಾಸದಲ್ಲಿ ನಿಮ್ಮೊಳಗೆ ಚಿಗುರಿದ್ದ ಪ್ರೀತಿಯ ನೆನಪಾದರೆ ನಾನು ಬರೆದಿದ್ದಕ್ಕೂ ಸಾರ್ಥಕ.

ಮೊದಲ ಪ್ರೀತಿ ಎಂದೆಂದಿಗೂ ಅಮರ. ನಮ್ಮಲ್ಲಿ ಬಹುತೇಕರಿಗೆ ತಮ್ಮ ಮೊದಲ ಪ್ರೀತಿಯನ್ನು ಮದುವೆಯಾಗಿ ಕೊನೆಯವರೆಗೂ ಅವರೊಂದಿಗೆ ಬದುಕುವ ಸೌಭಾಗ್ಯವಿರುವುದಿಲ್ಲ. ಈ ಕಾದಂಬರಿ ಮೂಲಕ ಮೊದಲ ಪ್ರೀತಿ ಹುಟ್ಟುವ ಬಗೆ, ಮನಸಿನಲ್ಲಿ ನಡೆವ ತಾಕಲಾಟಗಳು ದೂರಾದಾಗ ಅನುಭವಿಸುವ ಬೇಗುದಿ ಹೀಗೆ ಎಲ್ಲವನ್ನು ಹಿಡಿದಿಟ್ಟು ನಿಮ್ಮ ಮುಂದಿಡುತ್ತಿದ್ದೇನೆ. ಮೊದಲ ಪ್ರೀತಿಯನ್ನು ಸದಾ ಜೀವಂತವಾಗಿರಿಸುವ ಪ್ರಯತ್ನವೇ "ಸಂಜೀವಿನಿ".

ಇಲ್ಲಿ ಪ್ರಮಥ ಆಗಿರುವ ಹುಡುಗ, ನನ್ನ ಪತಿ ಸಮರ್ಥ. ಮದುವೆಯಾಗಿದೆ. ಹದಿನೆಂಟರ ಹರೆಯದಲ್ಲಿ ಕಂಡ ಕನಸಿನಂತೆಯೇ ಪ್ರೀತಿಯಿಂದ ಬಾಳುತ್ತಿದ್ದೇವೆ. ಬದುಕು ಸುಂದರವಾಗಿದೆ.

 

-ಸಂಜೋತಾ ಪುರೋಹಿತ

 

ಪುಟಗಳು: 152

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !