ಶಂಕರ ವಿಹಾರ: ಆಧುನಿಕನೊಬ್ಬನ ಅದ್ವೈತ ಯಾತ್ರೆ

ಶಂಕರ ವಿಹಾರ: ಆಧುನಿಕನೊಬ್ಬನ ಅದ್ವೈತ ಯಾತ್ರೆ

Regular price
$7.99
Sale price
$7.99
Regular price
Sold out
Unit price
per 
Shipping does not apply

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಆದಿಶಂಕರರನ್ನು ಕೇಂದ್ರದಲ್ಲಿಟ್ಟುಕೊಂಡು ಅದ್ವೈತ ಮತ್ತು ಬೇರೆ ಭಾರತೀಯ ದರ್ಶನಗಳ ಲೋಕದಲ್ಲಿ ನಡೆಸಿರುವ ಒಂದು ಮಾನಸಿಕ ಪ್ರವಾಸ ಕಥನ ಈ ಪುಸ್ತಕ. ಆದಿಶಂಕರರನ್ನು ಕುರಿತ ಆಧುನಿಕ ಕಾಲದ ಅಪಕಲ್ಪನೆಗಳ ಚಿತ್ರಗಳನ್ನೊಳಗೊಂಡ ‘ಶಂಕರ ವಿಕಲ್ಪ’ ಎಂಬ ಕಂಡಿಕೆಯೊಂದಿಗೆ ಈ ಕಥನವು ಆರಂಭವಾಗುತ್ತದೆ. ಆಮೇಲೆ, ಶಂಕರರ ಚಿಂತನೆಗಳಲ್ಲಿ ನಂಬಿಕೆಯ ಪಾಲೆಷ್ಟು, ವೈಚಾರಿಕತೆಯ ಪಾಲೆಷ್ಟು? ಅವರ ವೈಚಾರಿಕತೆ ಯಾವ ಬಗೆಯದು? - ಮೊದಲಾದ ಪ್ರಶ್ನೆಗಳು ‘ಶಂಕರ ವಿಚಾರ’ ಎಂಬ ಅಧ್ಯಾಯದಲ್ಲಿ ಚರ್ಚಿತವಾಗಿವೆ. ‘ಶಂಕರ ದರ್ಶನ’ ಎಂಬ ಭಾಗವು ಅದ್ವೈತ ಸಿದ್ಧಾಂತಕ್ಕೆ ಅಡಿಗಲ್ಲಾಗಿರುವ ಅದರ ಲೋಕಾಕೃತಿಯನ್ನು ಭಾರತದ ಬೇರೆಬೇರೆ ದರ್ಶನಗಳ ಸಂದರ್ಭದಲ್ಲಿಟ್ಟು ಅವಲೋಕಿಸುತ್ತದೆ. ಮತ್ತು ಅಂಥ ದರ್ಶನಕ್ಕೆ ತಲುಪಲು ಈ ಮಾರ್ಗವು ರೂಪಿಸಿಕೊಂಡ ತಾರ್ಕಿಕ-ವೈಧಾನಿಕ ಕ್ರಮಗಳನ್ನು ‘ಶಂಕರ ವಿಧಾನ’ ಎಂಬ ಭಾಗವು ಗುರುತಿಸುತ್ತದೆ. ಬಳಿಕ, ‘ಶಂಕರ ಸಂವಾದ’ವೆಂಬೊಂದು ಅಧ್ಯಾಯವು ಅದ್ವೈತಕ್ಕೂ ಬೇರೆ ದರ್ಶನಗಳಿಗೂ ನಡೆದ ಕೊಡುಕೊಳ್ಳುವಿಕೆಯನ್ನು ಗುರುತಿಸುವ ಜತೆಗೆ, ಈ ದಾರ್ಶನಿಕತೆಯು ಒಂದು ಧಾರ್ಮಿಕನಂಬಿಕೆಯಾಗಿ ಕೆಲಸ ಮಾಡುವ ದಾರಿಗಳನ್ನು ಗಮನಿಸಿದೆ. ‘ಶಂಕರ ಅನ್ವಯ’ ಎಂಬ ವಿಭಾಗವು ಕಾವ್ಯಮೀಮಾಂಸೆಯಲ್ಲಿ ಶಂಕರ ದರ್ಶನವು ಅನ್ವಯಗೊಳ್ಳುವ ಸ್ವಾರಸ್ಯವನ್ನು ನೋಡುವ ಪ್ರಯತ್ನ ಮಾಡಿದೆ. ಆ ಚಿಂತನೆಯು ತನ್ನ ಕಾಲದ ಸಮಾಜ-ಸಮುದಾಯಗಳೊಂದಿಗೆ ಕಟ್ಟಿಕೊಂಡ ಸಂಬಂಧಗಳೇನಿರಬಹುದು - ಎಂಬ ಊಹೆಯು ‘ಶಂಕರ ಸಮಾಜ’ದಲ್ಲಿ ಹರಡಿಕೊಂಡಿದೆ. ಶಂಕರರ ವೈಯಕ್ತಿಕ ಬದುಕು ಮತ್ತು ಅದರ ಬಗೆಗಿನ ಐತಿಹ್ಯಗಳೂ ‘ಶಂಕರ ಚರಿತೆ’ ಎಂಬ ಅಧ್ಯಾಯದಲ್ಲಿ ಕೂಡಿಕೊಂಡಿವೆ. ಕಡೆಯದಾಗಿ, ಇಂಥ ಹುಡುಕಾಟದಿಂದ ದೊರಕುವ ಕೆಲವು ಆಲೋಚನಾ ಪ್ರಸ್ಥಾನಗಳು ಹೇಗೆ ಸಮಕಾಲೀನ ಗ್ರಹಿಕೆಗಳಿಗೆ ಸಹಾಯಕ - ಎಂಬ ಚಿಕ್ಕ ತಪಶೀಲು ‘ಶಂಕರ ಸಂಧಾನ’ವೆಂಬ ಗುಚ್ಛದಲ್ಲಿ ಕೂಡಿದೆ.

 

ಪುಟಗಳು: 184

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !