ಛಂದ ಪುಸ್ತಕ ಬಹುಮಾನ ಪಡೆದ ಕಥಾಸಂಕಲನ. ಡಾ. ಎಚ್ ಎಸ್ ರಾಘವೇಂದ್ರ ರಾವ್ ಅವರು ಈ ಕೃತಿಯನ್ನು ಆಯ್ಕೆ ಮಾಡಿದ್ದಾರೆ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾದೆಮಿಯ ಯುವ ಪುರಸ್ಕಾರವೂ ಲಭಿಸಿದೆ.
ಮೂಲತಃ ಕೊಡಗಿನವರು. ತಂದೆ ಅಪ್ಪಣ್ಣ ಹಾಗೂ ತಾಯಿ ದೇವಮ್ಮ. ಓದಿದ್ದು ನವೋದಯ ಶಾಲೆಗಳಲ್ಲಿ. ನಂತರ ನರ್ಸಿಂಗ್ ತರಬೇತಿ ಮುಗಿಸಿ ಇದೀಗ ನೌಕರಿ ನಿಮಿತ್ತ ಚೆನ್ನೈನಲ್ಲಿ ವಾಸ. ಓದಿನ ಸಲುವಾಗಿ ಊರೂರು ಅಲೆದು, ಬದುಕಿನ ಏಕತಾನತೆಯನ್ನು ಮೀರಲೆಂದು ಪಕ್ಷಭೇದವಿಲ್ಲದೇ ಪುಸ್ತಕಗಳನ್ನು ಓದಿಕೊಂಡಿದ್ದಾರೆ. ಬದುಕಿನ ಅನಿರೀಕ್ಷಿತ ಏಟುಗಳು ಮತ್ತದನ್ನು ದಾಟಿ ಬಂದ ಹಾದಿ ಕಟ್ಟಿಕೊಟ್ಟ ಅನುಭವಗಳು ಅಪಾರ. ಇವರ ಕತೆಗಳಿಗೆ ಪ್ರಜಾವಾಣಿ ಮತ್ತು ವರ್ತಮಾನ ಡಾಟ್ ಕಾಮ್‍ನವರು ನಡೆಸುವ ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಬಂದಿದೆ. ಈಗ ಛಂದ ಪುಸ್ತಕ ಬಹುಮಾನ.
ಪುಟಗಳು: 194