ಶಿವರಾಮ ಕಾರಂತ (ವಿಶ್ವಮಾನ್ಯರು) (ಇಬುಕ್)

ಶಿವರಾಮ ಕಾರಂತ (ವಿಶ್ವಮಾನ್ಯರು) (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

ಲೇಖಕರು:

ಸಂಪಾದಕ: ಡಾ।। ನಾ. ಸೋಮೇಶ್ವರ

ಲೇಖಕ: ಟಿ. ಎಸ್‌. ಗೋಪಾಲ್‌

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಕೋಟ ಶಿವರಾಮ ಕಾರಂತ(1902-1997) ಕನ್ನಡದ ಬಹುಮುಕ ಪ್ರತಿಭೆ. ಅವರು ಕಾದಂಬರಿಕಾರರು, ಸಮಾಜ ಚಿಂತಕರು, ಪರಿಸರವಾದಿಗಳು, ಯಕ್ಷಗಾನ ತಜ್ಞರು, ಚಿತ್ರನಿರ್ದೇಶಕರು ಹಾಗೂ ಚಿಂತಕರೆಂದು ಹೆಸರಾಗಿದ್ದವರು. ಶಿವರಾಮಕಾರಂತರು ಕಾದಂಬರಿಕಾರರೆಂದು ಪ್ರಸಿದ್ಧರಾಗಿದ್ದರೂ, ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸ ಮಾಡಿದವರು. ಅವುಗಳಲ್ಲಿ ವಿಜ್ಞಾನ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಪ್ರಮುಕವಾದವು. ಇತಿಹಾಸಕಾರ ರಾಮಚಂದ್ರ ಗುಹ ಅವರು ಕಾರಂತರನ್ನು ‘ಸ್ವಾತಂತ್ರ್ಯೋತ್ತರ ಭಾರತದ ರವೀಂದ್ರನಾಥ್ ಠಾಕೂರ್‘ ಎಂದು ಕರೆದರು. ಆ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ.

ಕಾರಂತರ ‘ಮರಳಿ ಮಣ್ಣಿಗೆ‘ ಮೂರು ತಲೆಮಾರುಗಳ ಕತೆಯ ಕನ್ನಡದ ಪ್ರಮುಕ ಹಾಗೂ ಬಹು ಚರ್ಚಿತ ಕಾದಂಬರಿ. ಜ್ಞಾನಪೀಠ ಪ್ರಶಸ್ತಿಯು ‘ಮೂಕಜ್ಜಿಯ ಕನಸುಗಳು‘ ಕೃತಿಯ ಬದಲು ‘ಮರಳಿ ಮಣ್ಣಿಗೆ‘ ಬರಬೇಕಿತ್ತು ಎನ್ನುವುದು ಅನೇಕರ ವಾದ. ಇತ್ತೀಚಿನ ದಿನಗಳಲ್ಲಿ ‘ಮೂಕಜ್ಜಿಯ ಕನಸುಗಳು‘ ಕೃತಿಯ ವಿಶಿಷ್ಟತೆಯನ್ನು ವಿಮರ್ಶಕರು ಮನಗಂಡಿರುವರು. ‘ಚೋಮನ ದುಡಿ‘ ಹಾಗೂ ‘ಅಳಿದ ಮೇಲೆ‘ ಕಾರಂತರ ಬಹು ಚರ್ಚಿತ ಇತರ ಕಾದಂಬರಿಗಳು. ಕನ್ನಡ ಸಾಹಿತ್ಯಕ್ಕೆ ಸದಾ ಪ್ರಸ್ತುತವಾಗುವ ಕಾರಂತರನ್ನು ಸೊಗಸಾಗಿ ಪರಿಚಯ ಮಾಡಿಕೊಟ್ಟಿದ್ದಾರೆ ಶ್ರೀ ಟಿ.ಎಸ್. ಗೋಪಾಲ್.



ಪುಟಗಳು: 48 

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !