ಬರಹಗಾರರು: ಶ್ರೀಧರ್ ಬನವಾಸಿ (ಫಕೀರ)
ಫಕೀರ ಹೆಸರಿನಲ್ಲಿ ಕತೆ ಸೃಜಿಸುವ ಶ್ರೀಧರ ಬನವಾಸಿ, ವಾಸ್ತವದ ಮೃತ್ತಿಕೆಯಲ್ಲಿ ತಮ್ಮ ಕಥನ ಬೀಜಗಳನ್ನೂರಿ ಅರ್ಥವತ್ತಾದ ಕಥೆಗಳ ಫಸಲನ್ನು ಸಮೃದ್ಧವಾಗಿಸುವ ನಿಷ್ಣಾತರು. ವಸ್ತು ವೈವಿಧ್ಯತೆಯಿಂದಲೇ ಓದುಗರನ್ನು ಪ್ರಭಾವಿಸುವ 'ಬ್ರಿಟಿಷ್ ಬಂಗ್ಲೆ' ಸಂಕಲನದ ಕಥೆಗಳು ಹೊಸ ಹೊಳವಿನ ಅಗಾಧತೆಯಿಂದಲೂ ಗಮನ ಸೆಳೆಯುತ್ತವೆ. ಓದುಗರನ್ನು ತನ್ನೊಳಗು ಮಾಡಿಕೊಳ್ಳುವ ಈ ಬಗೆ ರೋಚಕವಾಗಿರುವಂತೆ ವಿಶಿಷ್ಟವೂ ಆಗಿದೆ. ಜೀವ ಪ್ರೀತಿಗೂ ತಹತಹಿಸುವ, ಮಾನವೀಯ ಬದುಕಿಗೂ ಕಾತರಿಸುವ, ಮನುಷ್ಯ ಹುಡುಕಾಟದ ಧಾವಂತಕ್ಕಾಗಿ ತೆರೆದುಕೊಳ್ಳುವ ನಡೆ, ಅಂತಃಸತ್ವವನ್ನು ಸಾಂದ್ರವಾಗಿಸುವ ಕಾರಣದಿಂದ ಶ್ರೀಧರ ಅವರ ಕಥನಗಾರಿಕೆ ಮಹತ್ವಗಾರಿಕೆ ಪಡೆದುಕೊಳ್ಳುವಂತಾಗಿದೆ.
ಸರಳತೆ ಮತ್ತು ಸಂಕೀರ್ಣತೆ ಎರಡನ್ನೂ ಸಮರ್ಥವಾಗಿಯೂ, ಆಪ್ತವಾಗಿಯೂ ಬಿಂಬಿಸುವ ಇಲ್ಲಿನ ಕಥೆಗಳು ಕುತೂಹಲ, ನಾಟಕೀಯತೆಯ ಧಾಟಿಯಲ್ಲೂ ಅರಿವಿನ ವಿಸ್ತಾರವನ್ನು ದಶಿಸುವ ಪರಿಣಾಮದಲ್ಲಿ ಸಂವೇದನಾಶೀಲವಾಗಿರುವುದು ಹೆಗ್ಗಳಿಕೆಯಷ್ಟೇ ಅಲ್ಲ, ಅಭಿನಂದನಾರ್ಹವೂ ಕೂಡ. ಹಾಗಾಗಿ ಶ್ರೀಧರ ಬನವಾಸಿ ಕನ್ನಡದ ಭರವಸೆಯ ಕಥೆಗಾರ ಎಂಬುದರಲ್ಲಿ ಉತ್ಪ್ರೇಕ್ಷೆ ಇಲ್ಲ.
-ಪ್ರೊ. ಅಬ್ಬಾಸ್ ಮೇಲಿನಮನಿ