ಸುಮಂಗಲಾ ಅವರ ಬಹುದೊಡ್ಡ ಶಕ್ತಿ ಸಂಬಂಧಗಳ ನಡುವೆ ಹುಟ್ಟುವ ಪಿಸುಮಾತನ್ನು ದಾಖಲಿಸುವ ರೀತಿ, ಹಾಗಾಗಿಯೇ ಇಲ್ಲಿ ಕತೆಯ ಚೌಕಟ್ಟು ಭಿನ್ನವಾಗಿದ್ದರೂ ಅವರ ಸಣ್ಣ ಕತೆಗಳಂತೆ ಕಾದಂಬರಿಯೂ ಮುಖ್ಯವಾಗಿ ಸಂಬಂಧಗಳ ಕುರಿತಾಗಿ ಮಾತಾಡುತ್ತದೆ.
ಕತಾನಾಯಕ ಅಂತ ಕರೆಯಬಹುದಾದ ಮಹೇಶನ ಪ್ರಜ್ಞೆಯಿಂದ ಕತೆ ಸಾಗುತ್ತದೆ. ಕತೆಗೆ ಮುಖ್ಯವಾಗಿ ಎರಡು ಆಯಾಮಗಳಿವೆ. ಒಂದು ಬದುಕಿನ ಹೋರಾಟದ ಬಗ್ಗೆ, ಇದರಲ್ಲಿ ರೈತರ ಆತ್ಮಹತ್ಯೆ, ಮಹೇಶನ ಗೆಳತಿ ನೀತೂವಿನ ಗದ್ದೆ ಮಾಡಿ ಗೇಯ್ಯುವ ಆಸೆ, ವಿಧುರ ಪ್ರೊಫೆಸರ್ ಅವರ ಕೈ ಹಿಡಿದು ಬರುವ ಜಲಜರ ತೋಟ ಉಳಿಸಿಕೊಳ್ಳುವ ಛಲ ಇವೆಲ್ಲ ಬರುತ್ತದೆ. ಇನ್ನೊಂದು ಸಂಬಂಧಗಳ ಬಗ್ಗೆ. ಇದು ಹಲವಾರು ಗಂಟುಗಳ ಹೊಂದಿವೆ. ಮಹೇಶನಿಗೆ ತನ್ನ ಗೆಳತಿ ಅನು ಕೈ ತಪ್ಪಿ ಹೋದ ಕುರಿತು ಬೇಸರವಿದೆ. ಅವಳ ಗೆಳತಿಯಾಗಿ ತನ್ನೊಳಗೆ ಬೆಚ್ಚಗಿರುವ ನೀತೂವಿನ ಕುರಿತು ಹೇಳಲಾರದ ಭಾವಗಳಿವೆ, ಪ್ರೊಫೆಸರ್ ಅವರಿಗೆ ಹೆಂಡತಿ ತೀರಿಕೊಂಡು ಎರಡು ಮೂರು ವರ್ಷಗಳಾದ ಬಳಿಕ ಸಾಮೀಪ್ಯ ಬೇಕಿದೆ ಆದರೆ ಮಂದಿಯ ಭಯವಿದೆ. ಇವೆಲ್ಲ ಸಂಬಂಧಗಳ ಸಿಕ್ಕು ಬಿಡಿಸುತ್ತಾ ಕತೆ ಸಾಗುತ್ತದೆ.
- ಪ್ರಶಾಂತ್ ಭಟ್, ಪುಸ್ತಕ ಪ್ರೇಮಿ ಬ್ಲಾಗ್ ವಿಮರ್ಶೆ
ಪುಟಗಳು: 192
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !