ಹನ್ನೊಂದನೇ ಅಡ್ಡರಸ್ತೆ

ಹನ್ನೊಂದನೇ ಅಡ್ಡರಸ್ತೆ

Regular price
$3.99
Sale price
$3.99
Regular price
Sold out
Unit price
per 
Shipping does not apply

ಮಂಗಲಾ ನಿಸ್ಸಂದೇಹವಾಗಿ ನಮ್ಮ ನಡುವಿನ ಅತ್ಯುತ್ತಮ ಕತೆಗಾರ್ತಿಯಲ್ಲೊಬ್ಬರು. ವಸ್ತು ಮತ್ತು ನಿರ್ವಹಣೆ ಎರಡರಲ್ಲೂ ಪ್ರಯೋಗಶೀಲರಾಗಿರುವ ಈ ಕತೆಗಾರ್ತಿ ಈ ಕಾರಣಕ್ಕಾಗಿಯೇ ಕುತೂಹಲ ಮತ್ತು ಭರವಸೆ ಹುಟ್ಟಿಸುತ್ತಾರೆ. ಇವರ ಮೊದಲ ಸಂಕಲನ ‘ಕಾಲಿಟ್ಟಲ್ಲಿ ಕಾಲುದಾರಿ’ ಕೂಡ ಹೆಣ್ಣಿನ ಪಲ್ಲಟಗೊಳ್ಳುತ್ತಿರುವ ಲೋಕದೃಷ್ಟಿಯನ್ನು ಸೂಚಿಸುತ್ತಿದೆ. ಸುಮಂಗಲಾ ಅವರ ಹೊಸ ಕಥಾ ಸಂಕಲನ ‘ಹನ್ನೊಂದನೇ ಅಡ್ಡರಸ್ತೆ’ ಇದರ ಮುಂದುವರಿಕೆಯಂತಿದೆ.

ಸಮಕಾಲೀನ ಲೇಖಕಿಯರು ಸ್ವಮಗ್ನತೆಯಿಂದ ಹೊರಬರುತ್ತಾ ಲೋಕದೊಂದಿಗಿನ ತಮ್ಮ ಅನುಸಂಧಾನದ ಹೊಸ ವಿನ್ಯಾಸವನ್ನು ರಚಿಸಿಕೊಳ್ಳುತ್ತಿರುವ ಪ್ರಕ್ರಿಯೆಯ ಪ್ರಾತಿನಿಧಿಕ ಚಹರೆಗಳಂತಿವೆ ಇಲ್ಲಿನ ಕಥೆಗಳು. ಹೆಣ್ಣು ಲೋಕವನ್ನು ಗ್ರಹಿಸುವ ಮತ್ತು ಒಳಗೊಳ್ಳುವ ಬಗೆ ಬೇರೆಯೇ ಎನ್ನುವ ಪ್ರಶ್ನೆಯೊಂದನ್ನು ಓದುಗರಲ್ಲಿ ಈ ಕಥೆಗಳು ಏಳಿಸುತ್ತವೆ.

- ಎಂ.ಎಸ್.ಆಶಾದೇವಿ, ಪ್ರಜಾವಾಣಿ ವಿಮರ್ಶೆ (www.shorturl.at/aiuM7)

ಪುಟಗಳು: 144

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !