ನನ್ನ'ಅಣ' ಮೈಸೂರು ಅನಂತಸ್ವಾಮಿ

ನನ್ನ'ಅಣ' ಮೈಸೂರು ಅನಂತಸ್ವಾಮಿ

Regular price
$3.99
Sale price
$3.99
Regular price
Sold out
Unit price
per 
Shipping does not apply

 ಈ ಕೃತಿ ಮೈಸೂರು ಅನಂತಸ್ವಾಮಿಯವರ ಬಗ್ಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ನಮ್ಮ ಮುಂದಿಟ್ಟಿದೆ. ಕುವೆಂಪು ಹಾಗೂ ಕಾಳಿಂಗರಾಯರ ಬಗ್ಗೆ ಅವರಿಗಿದ್ದ ಅಗಾಧ ಪ್ರೀತಿಯನ್ನು ಪರಿಚಯಿಸುತ್ತದೆ. ಅವರ ತುಂಟತನ, ಹಾಸ್ಯ ಮನೋಭಾವದ ಝಲಕ್ ನೀಡುತ್ತದೆ. ಮೈಸೂರು ಅನಂತಸ್ವಾಮಿಯವರ ಬಗ್ಗೆ ಅವರ ಕುಟುಂಬದವರೇ ಬರೆದ ಮೊದಲ ಕೃತಿ ಇದು. ಸುನೀತಾ ತಮ್ಮ ಸಂಗ್ರಹದಲ್ಲಿದ್ದ ಅತಿ ಅಪರೂಪದ ಫೋಟೋಗಳನ್ನು ಜೊತೆಗೂಡಿಸುವುದರ ಮೂಲಕ ಈ ಕೃತಿಯ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದರು.

ಈ ಕೃತಿ ನಾದದ ನದಿ ನಡೆದ ರೀತಿಯನ್ನು ಹಿಡಿದಿಡುವ ಪ್ರಯತ್ನ.

ಕನ್ನಡದ ಪ್ರಸಿದ್ಧ ಕವಿಗಳ ಕವನಗಳನ್ನು ಸಾಮಾನ್ಯ ಜನರ ಮನೆ,ಮನಕ್ಕೂ ತಲುಪಿಸಿದ ಹೆಗ್ಗಳಿಕೆ ಮೈಸೂರು ಅನಂತಸ್ವಾಮಿಯವರದ್ದು. ಎದೆ ತುಂಬಿ ಹಾಡಿದೆನು, ಜೋಗದ ಸಿರಿ ಬೆಳಕಿನಲ್ಲಿ, ಓ ನನ್ನ ಚೇತನಾ ಆಗು ನೀ ಅನಿಕೇತನ ತರದ ಹಾಡುಗಳು ಕನ್ನಡಿಗರ ಮನದಲ್ಲಿ ಎಂದಿಗೂ ಮರೆಯದೇ ಉಳಿದಿದ್ದರೆ ಅದು ಅವರ ಪ್ರತಿಭೆಗೆ ಸಾಕ್ಷಿ.

ಅವರ ಮಗಳು ಅಪ್ಪನ ಗರಡಿಯಲ್ಲೇ ಪಳಗಿದ ಖ್ಯಾತ ಗಾಯಕಿ ಸುನೀತಾ ಅನಂತಸ್ವಾಮಿ ಇಲ್ಲಿ ಹಲವು ಆಪ್ತ ಸಂಗತಿಗಳನ್ನು ದಾಖಲಿಸಿದ್ದಾರೆ . ಮೈಸೂರು ಅನಂತಸ್ವಾಮಿ ಅವರ ಲೋಕದಲ್ಲಿ ಕಳೆದು ಹೋಗಬೇಕಾದರೆ ಈ ಕೃತಿಯನ್ನು ಓದಲೇಬೇಕು.

ಪುಟಗಳು: 40