ತಾಯಿ ತೆರೇಸ (ಇಬುಕ್)

ತಾಯಿ ತೆರೇಸ (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

ವಿಶ್ವದ ಮಹಾನ್ ವ್ಯಕ್ತಿಗಳ ಪಂಕ್ತಿಯಲ್ಲಿ ತಾಯಿ ತೆರೇಸ ನಿಸ್ಸಂದೇಹವಾಗಿ ಸೇರುತ್ತಾರೆ. ಆಕೆ ರಾಜಕಾರಣಿಯಾಗಿರಲಿಲ್ಲ ಶ್ರೇಷ್ಠ ಸಾಹಿತಿಯಾಗಿರಲಿಲ್ಲ. ಪ್ರಸಿದ್ಧ ವಿಜ್ಞಾನಿಯಾಗಿರಲಿಲ್ಲ, ಶ್ರೀಮಂತ ಕೈಗಾರಿಕೋದ್ಯಮಿಯಾಗಿರಲಿಲ್ಲ, ಜನಪ್ರಿಯ ನಟಿಯೂ ಆಗಿರಲಿಲ್ಲ. ಆದರೆ ಹೆತ್ತವರು, ಹುಟ್ಟಿದ ಊರು, ದೇಶವನ್ನು ತ್ಯಜಿಸಿ ಭಾರತಕ್ಕೆ ಬಂದು ತಮ್ಮ ವೈಯಕ್ತಿಕ ಸುಖ, ವೈಭೋಗ, ಸೌಲಭ್ಯಗಳನ್ನು ನಿರ್ಲಕ್ಷಿಸಿ ಬಡವರ ಉದ್ಧಾರಕ್ಕಾಗಿ ಬದುಕನ್ನೇ ಮುಡಿಪಾಗಿಟ್ಟರು. ಅವರ ಬದುಕು, ಸಾಧನೆ ಕೇವಲ ವ್ಯಕ್ತಿಗತ ಚರಿತ್ರೆಯಷ್ಟೇ ಆಗದ ಒಂದು ವಿಶ್ವದ ಕಥೆಯಾಗುವುದರಲ್ಲಿ ಸಂದೇಹವಿಲ್ಲ.

ತಾಯಿ ತೆರಸ ಅಸಮಾನ್ಯ ಮಹಿಳೆ. ಆಕೆಯ ಸಾಧನ ಬಹುಮುಖವಾದದ್ದು. ಸ್ಥಾಪಿಸಿರುವ ಸೇವಾಶ್ರಮಗಳು ಅಸಂಖ್ಯಾತ ಪಡೆದಿರುವ ಬಹುಮಾನ, ಪ್ರಶಸ್ತಿಗಳು ಅಪಾರ. ಆಕೆ ನೊಬೆಲ್ ಪಾರಿತೋಷಕ ಪಡೆದ ವಿಶ್ವವಿಖ್ಯಾತೆ. ಆಕೆಯ ಪಾಲಿಗೆ ಮಾನವ ಕುಲದ ಸೇವೆಯೇ ಭಗವಂತನ ಸೇವೆ. ಬಡವರ ಕಲ್ಯಾಣಕ್ಕಾಗಿ ಶ್ರಮಿಸುವುದೇ ಮಾನವ ಧರ್ಮ ಎನ್ನುವ ಸಂದೇಶವನ್ನು ಜಗತ್ತಿಗೇ ನೀಡಿದರು. ಆಕೆಯ ಬದುಕಿನ ಪುಟಗಳನ್ನು ತೆಗೆಯುತ್ತಾ ಹೋದವರಿಗೆ ಅವರ ವ್ಯಕ್ತಿತ್ವದ ಪದರಗಳು ಕಣ್ಣಿಗೆ ಸ್ಪಷ್ಟವಾಗಿ ಕಾಣಿಸುವಂತೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ.

ತಾಯಿ ತೆರೇಸ ಅವರನ್ನು ಕುರಿತು 'Something beautiful for God' ಎಂಬ ಇಂಗ್ಲೀಷ್ ಪುಸ್ತಕವನ್ನು ಬರೆದಿರುವ ಇಂಗ್ಲೆಂಡಿನ ಪ್ರಸಿದ್ಧ ಲೇಖಕ ಮಾಲ್ಕಮ್ ಮಾಗರಿಡ್ಜ್ 'ಈ ಅಂಧಕಾರದಲ್ಲಿ ತಾಯಿ ತೆರೇಸ ಪ್ರಕಾಶಮಾನವಾದ ಬೆಳಕಿನಂತಿದ್ದಾರೆ. ಕ್ರೈಸ್ತನ ಪ್ರೇಮದ ಸುವಾರ್ತೆಯ ಸಜೀವ ರೂಪವಾಗಿದ್ದಾರೆ' ಎಂದು ಪುಸ್ತಕದಲ್ಲಿ ಬರೆದಿರುವುದು ಅವರ ಜೀವನ ಸಾಧನೆಯನ್ನು ತಿಳಿದುಕೊಂಡವರಿಗೆ ಮನದಟ್ಟಾಗುವುದು.

ಬಡವೃದ್ಧರ, ರೋಗಿಗಳ, ಅನಾಥ ಮಕ್ಕಳ ಸಮಸ್ಯೆಗಳನ್ನು ಕುರಿತಾದ ತರಸ ಅವರ ಆಳವಾದ ಗಂಭೀರವಾದ ಆಲೋಚನೆಗಳು, ನಿರ್ಭೀತ ಅಭಿಪ್ರಾಯಗಳು, ಸಲಹೆಗಳು, ಸಂದೇಶಗಳು ವಿಶ್ವದ ಜನತೆಗೆ ಅದರಲ್ಲೂ ಸಮಾಜಸೇವಾ ಕಾರ್ಯಗಳಲ್ಲಿ ಆಸಕ್ತಿಯಿರುವ ಕಿರಿಯರ ನಿರಂತರ ವಾಚನಕ್ಕೆ, ಅಧ್ಯಯನಕ್ಕೆ ಅರ್ಹವಾಗಿದೆ ಮತ್ತು ಹೊಸ ಶಕ್ತಿ, ಸ್ಫೂರ್ತಿ, ಮಾರ್ಗದರ್ಶನ ನೀಡುತ್ತವೆ.

೧೯೮೪ರ ಜುಲೈ ೩ನೇ ತಾರೀಖು ತಾಯಿ ತೆರೇಸ ಮೈಸೂರು ನಗರಕ್ಕೆ ಆಗಮಿಸಿದ್ದಾಗ ಅವರನ್ನು ನೋಡುವ, ಸಂದರ್ಶಿಸುವ ಅವಕಾಶ ನನಗೆ ಸಿಕ್ಕಿತ್ತು. ಈ ಗ್ರಂಥದ ಮೊದಲನೆಯ ಮುದ್ರಣ ಪ್ರಕಟವಾದದ್ದು ೧೯೮೫ರ ಜನವರಿ ತಿಂಗಳಿನಲ್ಲಿ. ಆದರೆ ಅವರೀಗ ಜೀವಂತವಾಗಿಲ್ಲ. ೧೯೯೭ರ ಸೆಪ್ಟೆಂಬರ್ ೬ನೇ ತಾರೀಖು ಕಲ್ಕತ್ತದಲ್ಲಿ ನಿಧನರಾದರು.

ತಾಯಿ ತೆರೇಸ ಅವರನ್ನು ಕುರಿತು ಹಲವಾರು ಪುಸ್ತಕಗಳು ಪ್ರಕಟವಾಗಿದ್ದರೂ ಅವರ ಬದುಕು-ಸಾಧನೆಗಳ ಸಮಗ್ರ ಚಿತ್ರಣ ನೀಡುವಂತಹ ಕೃತಿ ಕನ್ನಡದಲ್ಲಿ ಇತ್ತೀಚೆಗೆ ಬಂದಿಲ್ಲವೆಂದು ತೀರ್ಮಾನಿಸಿ ಈ ಪರಿಷ್ಕೃತ ಗ್ರಂಥವನ್ನು ಬರೆದಿದ್ದೇನೆ. ಇದರ ರಚನೆಗೆ ಹಲವಾರು ಪುಸ್ತಕಗಳ, ಲೇಖನಗಳ ನೆರವು ಪಡೆದಿದ್ದೇನೆ. ಅವುಗಳ ಲೇಖಕರಿಗೆ ನಾನು ಋಣಿಯಾಗಿದ್ದೇನೆ. ಕನ್ನಡದ ಮಹಾಜನತೆ ನನ್ನ ಇತರ ಕೃತಿಗಳಂತೆ ಈ ಕೃತಿಯನ್ನೂ ಪ್ರೀತಿಯಿಂದ, ಸಹೃದಯತೆಯಿಂದ ಸ್ವೀಕರಿಸುತ್ತಾರೆಂದು ನಂಬಿದ್ದೇನೆ.

 

- ಆರ‍್ಯಾಂಬ ಪಟ್ಟಾಭಿ.

 

ಪುಟಗಳು: 87

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !