ಇದನೆಲ್ಲಾ ನಿಮಗೆ ಹೇಳಲು ತೇಜಸ್ವಿ ನನಗೆ ನಿಮಿತ್ತ….

ಇದನೆಲ್ಲಾ ನಿಮಗೆ ಹೇಳಲು ತೇಜಸ್ವಿ ನನಗೆ ನಿಮಿತ್ತ….

Regular price
$5.99
Sale price
$5.99
Regular price
Sold out
Unit price
per 
Shipping does not apply

ಮೂಡಿಗೆರೆಯವರೇ ಆದ ಜೀವಾಳ ತಮ್ಮ ಬಾಲ್ಯದಿಂದಲೂ ತೇಜಸ್ವಿ ಅವರನ್ನು ಹತ್ತಿರದಿಂದ ನೋಡುತ್ತಾ ಬೆಳೆದಿದ್ದಾರೆ. ತಮಗಿದ್ದ ಆಸಕ್ತಿ-ಹವ್ಯಾಸಗಳ ಕಾರಣದಿಂದ ಸಹಜವಾಗಿ ತೇಜಸ್ವಿ ಅವರ ಸಂಪರ್ಕಕ್ಕೆ ಬಂದಿದ್ದಾರೆ. ಇದು ಇವರು ಜಗತ್ತನ್ನು ನೋಡುವ, ಗ್ರಹಿಸುವ ರೀತಿಯನ್ನೂ ಪ್ರಭಾವಿಸಿವೆ. ಆದರಿದು ಏಕಮುಖವಾಗಿಲ್ಲ. ಜೀವಾಳ ಮತ್ತು ಇವರ ಸಮಾನ ಮನಸ್ಕ ಗೆಳೆಯರ ಚಟುವಟಿಕೆಗಳಿಂದಲೂ ತೇಜಸ್ವಿ ಪ್ರಭಾವಿತರಾಗಿದ್ದರು ಎಂಬುದು ಈ ಕೃತಿಯಲ್ಲಿ ತಿಳಿಯುತ್ತದೆ.

ಕೃತಿಯ ಓಪನಿಂಗ್‌ ರೋಚಕವಾಗಿದೆ. ಥ್ರಿಲ್ಲರ್‌ ಸಿನಿಮಾದ ಕಥೆ ಹೇಳುತ್ತಿದ್ದಾರೇನೋ ಎಂದು ಭಾಸವಾಗುತ್ತದೆ. ಮುಂದೆ ಓದಿದಂತೆ ಈ ಪ್ರಸಂಗದ ನಾಯಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಎಂದು ತಿಳಿಯುತ್ತದೆ. ತಮ್ಮನ್ನು ಛೇಸ್‌ ಮಾಡಿಕೊಂಡು ಬಂದ ಕುತೂಹಲಿಗ ಯುವಕರಿಗೆ ತೇಜಸ್ವಿ ಪ್ರತಿಕ್ರಿಯಿಸಿದ ರೀತಿಯೂ ಅವರ ಸೀದಾಸದಾ ಗುಣ ತೋರಿಸುತ್ತದೆ.

ಜೀವಾಳ ಅವರು ತೇಜಸ್ವಿ ಅವರೊಂದಿಗೆ ನಡೆಸಿದ ಚರ್ಚೆಗಳು, ಸುತ್ತಾಟಗಳು ಓದುಗರಿಗೆ ಪ್ರಕೃತಿ ಸಂರಕ್ಷಣೆಯ ಆಯಾಮಗಳನ್ನು ಈ ಕೃತಿ ತಿಳಿಸಿಕೊಡುತ್ತವೆ. ಪಶ್ಚಿಮಘಟ್ಟದ ಮೇಲೆ ದಂಧೆಕೋರರು ಅವ್ಯಾಹತವಾಗಿ ನಡೆಸುತ್ತಿರುವ ದಾಳಿ, ಅದಕ್ಕೆ ಪ್ರತಿಯಾಗಿ ಪರಿಸರ ಚಿಂತಕರು ನಡೆಸಬೇಕಾದ ಕ್ರಿಯೆ ಕುರಿತ ವಿಚಾರಗಳು ಇಲ್ಲಿ ದೊರೆಯುತ್ತವೆ. ತೇಜಸ್ವಿ ಅವರ ಅನೇಕ ಕೃತಿಗಳಲ್ಲಿ ಪರಿಸರದ ಬಗೆಗಿನ ಚಿಂತನೆಗಳು ಬಂದಿವೆಯಾದರೂ ಈ ಕೃತಿಯಲ್ಲಿ ಇಂಥ ಚಿಂತನೆಗಳೆಲ್ಲವೂ ಒಂದೆಡೆಯೇ ದೊರೆತಿರುವುದು ಮತ್ತು ಇದು ಬರೆಹಕ್ಕೆ ಸೀಮಿತವಾಗದಂತೆ ತೇಜಸ್ವಿ ಹೇಗೆ ಕಾರ್ಯೋನ್ಮುಖರಾಗುತ್ತಿದ್ದರು ಎಂಬುದು ತಿಳಿಯುತ್ತದೆ.

ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಮಾಡುವ ಕೆಲಸಗಳು ಕೆಲವೊಮ್ಮೆ ಹೇಗೆ ಪರಿಸರದ ಚಟುವಟಿಕೆಗಳಿಗೆ ಭಂಗ ತರುತ್ತವೆ ಎಂಬುದನ್ನು ಯಗಚಿ ಜಲಾಶಯ ಮತ್ತು ಮೀನುಗಳ ಉದಾಹರಣೆ ಮೂಲಕ ತೇಜಸ್ವಿ ವಿವರಿಸುವದನ್ನೂ ಜೀವಾಳ ಕಟ್ಟಿಕೊಟ್ಟಿದ್ದಾರೆ. ಇಂಥ ಆಸಕ್ತಿಕರ ವಿವರಣೆಗಳು ಕೃತಿಯುದ್ದಕ್ಕೂ ದೊರೆಯುತ್ತವೆ.

ತೇಜಸ್ವಿ ಸಾವಿನಿಂದ ಧನಂಜಯ ತತ್ತರಿಸುತ್ತಾರೆ. ಈ ಬಳಿಕ ತೇಜಸ್ವಿ ಅವರ ‘ನಿರುತ್ತರ’ ಮನೆಗೆ ಭೇಟಿ ನೀಡುತ್ತಾರೆ. ಆಗ ಜರುಗಿದ ಮರಕುಟುಕದ ಪ್ರಸಂಗ ಲೇಖಕರನ್ನು ತೇಜಸ್ವಿ ಎಷ್ಟರಮಟ್ಟಿಗೆ ಆವರಿಸಿಕೊಂಡಿದ್ದಾರೆ ಎಂಬುದನ್ನು ತಿಳಿಸುತ್ತದೆ. ಈ ಸಂದರ್ಭದಲ್ಲಿ ಲೇಖಕರು ನೀಡುವ ವಿವರಣೆ ಓದುಗರ ಕಣ್ಣಾಲಿ ತುಂಬುವಂತೆ ಮಾಡುತ್ತದೆ.

 

ಪುಟಗಳು: 169

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !