ಟೊಮ್ಯಾಟೊ ಕೆಚಪ್

ಟೊಮ್ಯಾಟೊ ಕೆಚಪ್

Regular price
$2.49
Sale price
$2.49
Regular price
Sold out
Unit price
per 
Shipping does not apply

ಈ ಕಥಾಸಂಕಲನದಲ್ಲಿ 12 ವಿಭಿನ್ನ ಕಥೆಗಳಿವೆ.

ಈ ಕಥಾಲೋಕದಲ್ಲಿ ನಾರಣಕಾಕಾ, ಗೋಪಣ್ಣರಂಥ ಕಾಮಿಗಳಿದ್ದಾರೆ, ಸಾಬೀತು ಕಥೆಯ ಉಮಾಳಂಥ ದಿಟ್ಟೆಯರಿದ್ದಾರೆ, ಸೆಲೆಯ ಶೀನಣ್ಣನಂಥ ಭಗೀರಥರಿದ್ದಾರೆ. ಮಾನಸಿಕ ನೆಮ್ಮದಿ ಕಳಕೊಂಡ ಕಾದಂಬಿನಿಯಂಥ ಆಧುನಿಕಳಿದ್ದಾಳೆ. ಹೀಗೆ ಒಂದು ವಿಸ್ತೃತ ಮಾನವ ಲೋಕವೊಂದು ನಮ್ಮೆದುರು ಇಲ್ಲಿನ ಕಥೆಗಳಲ್ಲಿ ತೆರೆದುಕೊಳ್ಳುವ ರೀತಿ ಅನನ್ಯವಾಗಿದೆ. ಸಾವಧಾನವಾಗಿ ಕಥೆ ಹೇಳುತ್ತಲೇ ಅದರಾಚಿನ ಇನ್ನೇನನ್ನೋ ಹೊಳೆಯಿಸುವ ಪ್ರಯತ್ನವಿದೆ.

ಪ್ರೇಮ, ಕಾಮ, ಹಿಂಸೆ, ಕ್ರೌರ್ಯ, ಒಳಸಂಚು, ಪ್ರತಿಭಟನೆ.. ಇತ್ಯಾದಿಗಳ ನಡುವೆಯೇ ಅರಳಿಕೊಳ್ಳುವ,ಜೀವಚೈತನ್ಯ, ಸವಾಲನ್ನೆದುರಿಸುವ ಸಾಮರ್ಥ್ಯ ಮೊದಲಾದ ಮಾನವ ಲೋಕದ ಸಮಸ್ತ ಗುಣಗಳನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಯತ್ನದಲ್ಲಿ ಮಹತ್ವದ ಹೆಜ್ಜೆಯಿಟ್ಟಿರುವ ಈ ಕಥಾಸಂಕಲನವು-ಅಜಿತರು ಕನ್ನಡ ಕಥಾ ಕ್ಷೇತ್ರದಲ್ಲಿಗಟ್ಟಿಯಾಗಿ ನೆಲೆಯೂರಲಿದ್ದಾರೆ ಎಂಬುದನ್ನು ಸಾಬೀತು ಪಡಿಸುತ್ತದೆ.

 -ಸುಬ್ರಾಯ ಚೊಕ್ಕಾಡಿ.

 

ಪುಟಗಳು: 140

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !