ಉಕ್ಕಿದ ನೊರೆ

ಉಕ್ಕಿದ ನೊರೆ

Regular price
$5.99
Sale price
$5.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ   

ಕಾರಂತರೇ ಹೇಳಿರುವ ಹಾಗೆ ಈ ಕಾದಂಬರಿ 1930 ಇಸವಿಯಿಂದ 1955 ವರಗೆ ನಡೆದಿರಬಹುದಾದಂತ (ಕಾಲ್ಪನಿಕ )ಘಟನಾವಳಿಗಳ ಹಂದರ.
ಈ ಕಾಲಘಟ್ಟದಲ್ಲಿ ಭಾರತ ಅನೇಕ ಬದಲಾವಣೆಗಳ ಪರ್ವ ಕಂಡಿದೆ, ದೇಶದ ಸ್ವಾತಂತ್ರ್ಯದ ಕಾವು ಹೆಚ್ಚಿದ ಸಮಯ, ವಿಶ್ವ ಯುದ್ಧದ ಕರಿ ನೆರಳು ಭಾರತದ ಆರ್ಥಿಕತೆಗೆ ಹೇಗೆ ಮಾರಕವಾಯಿತು, ಹಳ್ಳಿಯಿಂದ ನಗರ ಹಾಗೂ ಪಟ್ಟಣಗಳಿಗೆ ಗುಳೆ ಹೋಗುವ ಚಿತ್ರಣ, ಬಡತನಕ್ಕೆ ತಮ್ಮ ಹೊಲ ತೋಟಗಳನ್ನು ಅಗ್ಗಕ್ಕೆ ಮಾರಲು ಪ್ರೇರೇಪಿಸುವ ಹಾಗು ಬೇರೆ ಊರಲ್ಲಿ ದುಡಿದ ದುಡ್ಡನು ಆಸ್ತಿಮಾಡುವಂತೆ ಅನಿವಾಸಿಗಳಿಗೆ ಹೊಂಚುಹಾಕುವ ದಲ್ಲಾಳಿಗಳ ಚಿತ್ರಣ ಬಹಳ ಅರ್ಥವತ್ತಾಗಿ ಚಿತ್ರಿಸಿದ್ದಾರೆ.
ಅದರಲ್ಲೂ ಸ್ವಾತಂತ್ರ್ಯ ಪೂರ್ವದಲ್ಲಿ ಕೆಲವರು ಮರಿ ಪುಡಾರಿಗಳಾಗಿದ್ದು ನಂತರ ಹೇಗೆ ಬಣ್ಣ ಬದಲಿಸಿ ಖಾದಿಧಾರಿಗಳಾಗಿ ಜನತೆಗಳ ಕಣ್ಣಿಗೆ ಹೇಗೆ ಸ್ವಾತಂತ್ರ್ಯ ಹೋರಾಟಗಾರರಾಗಿ ವಿಜೃಂಭಿಸಿದರು ಎನ್ನುವ ಪ್ರಸಂಗಗಳು ಬಹಳ ಸೊಗಸಾಗಿ ಚಿತ್ರಿಸಿದ್ದಾರೆ.
ಸಾಮಾನ್ಯವಾಗಿ ಅತಿ ಹಿರಿಯರನ್ನು ನಾವು ಸ್ವಾತಂತ್ರ್ಯ ಭಾರತದ ಬಗ್ಗೆ ಕೇಳಿದಾಗ ಅವರಲ್ಲಿ ಅಂತಹ ಉತ್ಸಾಹ ಕಾಣುತ್ತಿರಲಿಲ್ಲ ಆದರೆ ನಮಗೆ ಇವರ ಭಾವನೆ ಹೀಗೇಕೆಂದು ತಿಳಿಯುತ್ತಿರಲಿಲ್ಲ, ಅದಕ್ಕೆ ಉತ್ತರ ಈ ಕಾದಂಬರಿಯಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.
ಈ ಕಾದಂಬರಿ ಬರೆದು 40 ವರ್ಷಗಳೇ ಸಂದರೂ ಇನ್ನೂ ಈಗಿನ ಭಾರತಕ್ಕೆ ಅಷ್ಟೇ ಪ್ರಸ್ತುತ, ಎಷ್ಟೇ ಹಳೆಯ ಕಾದಂಬರಿಯಾದರೂ ಓದುಗರನ್ನು ಸೆಳೆಯುವ ಶಕ್ತಿ ತುಂಬಿಸಿರುವ ಮಹಾನ್ ವ್ಯಕ್ತಿ ನಮ್ಮ ಕಾರಂತರು.

 

-Mahesh

 

ಕೃಪೆ

www.goodreads.com

 

ಪುಟಗಳು: 248

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !