ಉಲ್ಲಂಘನೆ (ಇಬುಕ್)

ಉಲ್ಲಂಘನೆ (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

 

ಇದು ಡಾ. ನಾ. ಮೊಗಸಾಲೆಯವರ ಪ್ರಸಿದ್ಧ ಕಾದಂಬರಿ .

ಮೊಗಸಾಲೆಯವರ ಈ ‘ಉಲ್ಲಂಘನೆ’ ಕಾದಂಬರಿಯನ್ನು ಓದುವಾಗ ತಟ್ಟನೆ ಮನಸ್ಸಿಗೆ ಬರುವ ವಿಷಯವೆಂದರೆ ಅವರು ‘ಕತೆ ಹೇಳು’ ವ ಕನ್ನಡದ ಸಂಪ್ರದಾಯದಲ್ಲಿ ನಿಂತೇ ಕೃತಿ ರಚಿಸಿರುವುದು. ಪೀಳಿಗೆಗಳ ಕತೆ  ಹೇಳುವಾಗ ಕಾದಂಬರಿಗೆ ದಕ್ಕುವ ಹರಹು ಅಗಾಧವಾದದ್ದು ಮತ್ತು ಹಾಗೆಯೇ ಪಾತ್ರ ವೈವಿಧ್ಯವೂ ಬಹು ಪಾರ್ಶ್ವ ಉಳ್ಳದ್ದು. ಈ ಕಾದಂಬರಿಗೆ ಮೊಗಸಾಲೆಯವರು ಆರಿಸಿಕೊಂಡ ವಸ್ತು ಬಂಟರ ಜಮೀನುದಾರಿ ಪದ್ಧತಿ ಮತ್ತು ಸ್ವಾತಂತ್ರ್ಯ ಪೂರ್ವಕಾದಲ್ಲಿ ಅವರು ಬದುಕಿದ ರೀತಿಗೆ ಸಂಬಂಧಿಸಿದ್ದಾಗಿದೆ. ದಕ್ಷಿಣ ಕನ್ನಡದವರೇ ಆಗಿ ಅಲ್ಲಿಯೇ ನೆಲೆಸಿದ ಮೊಗಸಾಲೆಯವರು ತಮ್ಮದಲ್ಲದ ಸಮಾಜದೊಡನೆ ಬದುಕಿದ್ದಾರೆ ಮತ್ತು ಅದರಲ್ಲಿ ಬೆರೆತಿದ್ದಾರೆ. ಹೀಗಾಗಿ ಅವರಿಗೆ ಆ ಸಮಾಜವನ್ನು ಕುರಿತು ಬರೆಯಲು ಹೆಚ್ಚು ‘ಅಭ್ಯಾಸ’ದ ಅವಶ್ಯಕತೆ ಬೇಕಾಗಿಲ್ಲ. ಇದಲ್ಲದೆ ಒಂದು ಕಥಾ ವಸ್ತು ಹೊಳೆದೊಡನೆ ಕೈಯಲ್ಲಿ ನೋಟ್ ಬುಕ್ ಮತ್ತು ಪೆನ್ನು ಹಿಡಿದುಕೊಂಡು ಟಿಪ್ಪಣಿ ಮಾಡಿಕೊಳ್ಳುತ್ತ ಭೌತವಾದಿಯ ಮೂಲ ತತ್ವವನ್ನೇ ಹಿಡಿದುಕೊಂಡು ಕೃತಿ ರಚಿಸುವ ಸಾಲಿಗೆ ಸೇರಿದವರಲ್ಲ ಮೊಗಸಾಲೆ. ಸ್ಫೂರ್ತಿಯ ಸೆಲೆಗಳು ಒಡೆದಾಗಲೆಲ್ಲ ಸುತ್ತಲಿನ ಜೀವನ ಸೃಜನಶೀಲ ಅಭಿವ್ಯಕ್ತಿಗೆ ಕಾರಣವಾಗುವಷ್ಟರ ಮಟ್ಟಿಗೆ ಅವರಿಗೆ ಸುತ್ತಲಿನ ಜೀವನ ಸೃಜನಶೀಲ ಅಭಿವ್ಯಕ್ತಿಗೆ ಕಾರಣವಾಗುವಷ್ಟರ ಮಟ್ಟಿಗೆ ಅವರಿಗೆ ಸುತ್ತಲಿನ ಜೀವನ ಬೇಕು. ಅಂದರೆ ವಿವರಗಳಿಗಿಂತ ಹೆಚ್ಚಾಗಿ ತಾವು ಹೇಳುತ್ತಿರುವುದಕ್ಕೆ ಒಂದು ಕಲಾತ್ಮಕ ರೂಪ ಸಿಗಬೇಕಾದುದರ ಕಡೆಗೆಯೇ ಅವರ ಗಮನ ಹೆಚ್ಚಾಗಿ ಹೋಗುತ್ತಿದೆ. ‘ಉಲ್ಲಂಘನೆ’ಯಲ್ಲಿ ಮೊಗಸಾಲೆಯವರು ವಿವರಗಳನ್ನು ಉಪಯೋಗಿಸಿದ ರೀತಿ ನೋಡಿದರೆ ಆ ಎಲ್ಲ ವಿವರಗಳೊಡನೆಯೇ ಅವರು ತಮ್ಮ ಬಾಳನ್ನು ಕಳೆದಿದ್ದಾರೆಂದು ಥಟ್ಟನೆ ಗುರುತಿಸಬಹುದು. 

 

ಪುಟಗಳು: 562

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !