ವಚನದಿಂದ ಆಯ್ದ ಸಾಲುಗಳ ಓದು - ಭಾಗ 2 (ಆಡಿಯೋ  ಬುಕ್)

ವಚನದಿಂದ ಆಯ್ದ ಸಾಲುಗಳ ಓದು - ಭಾಗ 2 (ಆಡಿಯೋ ಬುಕ್)

Regular price
$4.99
Sale price
$4.99
Regular price
Sold out
Unit price
per 
Shipping does not apply

ಪ್ರಕಾಶಕರು: ನಾಗು ಸ್ಮಾರಕ ಪ್ರಕಾಶನ

Publisher: Naagu Smaraka Prakashana

 

ಬರೆದವರು ಮತ್ತು ಓದಿದವರು: ಸಿ.ಪಿ. ನಾಗರಾಜ

ಆಡಿಯೋ ಪುಸ್ತಕದ ಅವಧಿ : 5 ಗಂಟೆ 54 ನಿಮಿಷ

 

ಹನ್ನೆರಡನೆಯ ಶತಮಾನದ 24 ಮಂದಿ  ಶಿವಶರಣಶರಣೆಯರು ರಚಿಸಿದ ವಚನಗಳಿಂದ ಆಯ್ದ  157  ವಚನದ ಸಾಲುಗಳನ್ನು ವಿವರಿಸಿದ್ದೇನೆ. ಈ ಸಾಲುಗಳೆಲ್ಲವೂ ಓದುಗರು ಮತ್ತು ಕೇಳುಗರು  ಸಾಮಾಜಿಕ ಅರಿವು ಮತ್ತು ಸಾಮಾಜಿಕ ಎಚ್ಚರವನ್ನು ಪಡೆಯುವುದಕ್ಕೆ ದಾರಿಯನ್ನು ತೋರಿಸುತ್ತವೆ.

ವ್ಯಕ್ತಿಯು ತನ್ನ ನಡೆನುಡಿಗಳಿಂದ ತನ್ನ ಮತ್ತು ತನ್ನ ಕುಟುಂಬದ ಒಳಿತನ್ನು ಸಾಧಿಸುವಂತೆಯೇ ಸಹಮಾನವರ ಮತ್ತು ಸಮಾಜದ ನೆಮ್ಮದಿಯ ಬದುಕಿಗೂ ಒಳಿತನ್ನು ಉಂಟುಮಾಡಬೇಕೆಂಬ ತಿಳಿವಳಿಕೆಯನ್ನು  ಪಡೆಯುವುದೇ ಸಾಮಾಜಿಕ ಅರಿವು.

ದೇವರು, ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ನಡೆಯುವ ಆಚರಣೆಗಳಿಂದ ಮಾನವರ ಬದುಕಿನಲ್ಲಿ ಉಂಟಾಗುತ್ತಿರುವ ಪರಿಣಾಮಗಳನ್ನು ಚೆನ್ನಾಗಿ  ಗಮನಿಸಿ, ಯಾವ ಬಗೆಯ ಆಚರಣೆಗಳು ಮಾನವ ಸಮುದಾಯದ ಸಂಕಟಗಳಿಗೆ ಕಾರಣವಾಗಿವೆ ಎಂಬುದನ್ನು ಅರಿತುಕೊಂಡು, ಅಂತಹ ಆಚರಣೆಗಳಿಂದ ದೂರವಿರುವುದೇ ಸಾಮಾಜಿಕ ಎಚ್ಚರ. 

ಇಂತಹ ಅರಿವು ಮತ್ತು ಎಚ್ಚರವನ್ನು ನಮ್ಮಲ್ಲಿ ಮೂಡಿಸುವಂತಹ ವಚನದ ಸಾಲುಗಳನ್ನು ಈಗ  ಓದೋಣ ಮತ್ತು ಕೇಳೋಣ  ಬನ್ನಿ.

 

 - ಸಿ.ಪಿ.ನಾಗರಾಜ

 

ಈಗ ಸಿ.ಪಿ.ನಾಗರಾಜ ಅವರದ್ದೇ ದನಿಯಲ್ಲಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.