ಓದಿದವರು: ವೈದೇಹಿ
ಆಡಿಯೋ ಪುಸ್ತಕದ ಅವಧಿ : 3 ಗಂಟೆ 42 ನಿಮಿಷ
ಸಣ್ಣಕಥೆ, ಕಾವ್ಯ, ಕಾದಂಬರಿಗಳು, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧ ಹೀಗೆ ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಚಾಚಿಕೊಂಡಿರುವ ಕನ್ನಡದ ಹಿರಿಯ ಲೇಖಕಿ ವೈದೇಹಿ. ಅವರ ಅಮ್ಮಚ್ಚಿ ಎಂಬ ನೆನಪು, ಗುಲಾಬಿ ಟಾಕೀಸ್ ಕತೆಗಳು ಸಿನೆಮಾ ಆಗುವುದರ ಮೂಲಕ ಬಹಳ ದೊಡ್ಡ ಮಟ್ಟದಲ್ಲಿ ಜನರನ್ನು ತಲುಪಿವೆ. ಅವರ ಆಯ್ದ ಕತೆ ಮತ್ತು ಕವನಗಳನ್ನು ಅವರದ್ದೇ ದನಿಯಲ್ಲಿ ರೆಕಾರ್ಡ್ ಮಾಡಿರುವ ಈ ಆಡಿಯೋ ಪುಸ್ತಕದಲ್ಲಿ ಗುಲಾಬಿ ಟಾಕೀಸ್, ಅಕ್ಕು, ಅವಲಂಬಿತರು, ಅಮ್ಮಚ್ಚಿ ಎಂಬ ನೆನಪು, ಕ್ರೌಂಚ ಪಕ್ಷಿಗಳು ಅನ್ನುವ ಕತೆಗಳೂ ಮತ್ತು ಶಿವನ ಮೀಸುವ ಹಾಡು, ತಿಳಿಸಾರು, ಎಲ್ಲಿ ಹೋದರು, ಅಡುಗೆ ಮನೆಯ ಹುಡುಗಿ, ಮಗಳಿಗೆ, ನನ್ನ ಗಂಡನ ಊರು ತೋರಿಸುವೆ ಬಾರೆ, ನನ್ನ ಅಮ್ಮನ ಸೀರೆ ಅನ್ನುವ ಕವಿತೆಗಳು ವೈದೇಹಿ ಅವರ ದನಿಯಲ್ಲಿ ಅರಳಿವೆ. ಈ ಆಡಿಯೋ ಪುಸ್ತಕಕ್ಕೆ ಖ್ಯಾತ ವಿಮರ್ಶಕ ಅಶೋಕ್.ಟಿ.ಪಿ ಅವರು ದನಿ ಮುನ್ನುಡಿ ನುಡಿದಿದ್ದಾರೆ.