ವರ್ಜಿನ್ ಮೊಹಿತೊ (ಇಬುಕ್)

ವರ್ಜಿನ್ ಮೊಹಿತೊ (ಇಬುಕ್)

Regular price
$3.99
Sale price
$3.99
Regular price
Sold out
Unit price
per 
Shipping does not apply

GET FREE SAMPLE

ಬೇರು ಮತ್ತು ವರ್ಜಿನ್ ಮೊಹಿತೊ ಎರಡೂ ಕಥಾ ಸಂಕಲನಗಳು. ಈ ಎರಡೂ ಸಂಕಲನಗಳ ನಡುವೆ ೧೮ ವರ್ಷಗಳ ಅಂತರವಿದ್ದರೂ ಅಲ್ಲಿರುವ ಹದಿನಾರು ಕಥೆಗಳು ಈ ಲೇಖಕ ಮೂಲತಃ ಒಬ್ಬ ಕಥೆಗಾರ ಎನ್ನುವುದನ್ನು ಸಾಬೀತು ಮಾಡುತ್ತವೆ. ಇಲ್ಲಿ ಗ್ರಾಮೀಣ- ನಗರ ಸಂವೇದನೆಗಳ ಹದವಾದ ಮಿಶ್ರಣ ಮತ್ತು ಸರಾಗವಾಗಿ ಓದಿಸಿಕೊಂಡು ಹೋದರೂ ಓದುಗರನ್ನು ಯೋಚನೆಗೆ ತಳ್ಳುವ, ಬಡಿದೆಬ್ಬಿಸುವಂತಹ ಕಥೆಗಳಿವೆ. ಒಬ್ಬ ಪತ್ರಕರ್ತ ಕಥೆ ಬರೆಯಲು ಹೋದಾಗ ಅವು ಗೊತ್ತಿಲ್ಲದೇ ’ವರದಿ’ಗಳಾಗುವ ಅಪಾಯ ಇದ್ದೇ ಇರುತ್ತದೆ. ಆದರೆ, ಈ ಲೇಖಕ ಅತ್ಯಂತ ಸಹಜವಾಗಿ ಆ ಅಪಾಯದಿಂದ ಮುಕ್ತವಾಗಿ ಅತ್ಯಂತ ಸರಾಗವಾಗಿ ಕಥೆಗಳನ್ನು ಹೆಣೆದಿದ್ದಾರೆ.

- ಸತೀಶ್ ಚಪ್ಪರಿಕೆ

 

ಆಧುನಿಕ ಶಿಕ್ಷಣ, ಹಣ, ಯಶಸ್ಸು ಮತ್ತು ಅವುಗಳಿಂದ ಪ್ರಾಪ್ತವಾಗುವ ಐಹಿಕ ಸುಖದ ಬದುಕಿನ ಎರಡು ಅನಿವಾಸಿ ಭಾರತೀಯ ಕುಟುಂಬಗಳ ಕಥೆಯನ್ನು `ವರ್ಜಿನ್ ಮೊಹಿತೊ' ಅನಾವರಣಗೊಳಿಸುತ್ತದೆ. ಮಾಯಾ ಮತ್ತು ಕಾರ್ತಿಕ್ ವಿದೇಶಿ ಶಿಕ್ಷಣ ಪಡೆದು, ಕ್ಷಮತೆ ಹಾಗೂ ಪರಿಶ್ರಮದಿಂದ ಯಶಸ್ಸಿನ ಮೆಟ್ಟಿಲೇರುತ್ತಿರುವ ವಿಶ್ವಾನುಭವಕ್ಕೆ ತೆರೆದುಕೊಂಡ ತರುಣ ಪೀಳಿಗೆಯವರು. ಉಭಯ ಕುಟುಂಬಗಳೂ `ರಿಲಿಜೀಯಸ್' ಮತ್ತು `ಎಥಿಕಲ್'.

ಬದುಕಿನ ನಿರ್ಣಾಯಕ ಘಟ್ಟ ‘ಮದುವೆ’ಯ ಮೂಲಕ ಹೊಸ ಜೀವನ ಆರಂಭಿಸಲು ಕಾರ್ತಿಕ್ ಮತ್ತು ಮಾಯಾ ಬಯಸುತ್ತಿದ್ದಾರೆ. ಇನ್ನೇನು ಸಂಬಂಧ ಕುದುರಿ ಕಥೆ ಸುಖಾಂತ್ಯ ಪಡೆಯಬೇಕು ಎನ್ನುವಲ್ಲಿ, ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಪುರುಷಾಹಂಕಾರದ ಪ್ರಶ್ನೆಯೊಂದನ್ನು ಕಾರ್ತಿಕ್, ಮಾಯಾಳಿಗೆ ಕೇಳುವುದರೊಂದಿಗೆ ಕಥೆ ಆ್ಯಂಟಿ-ಕ್ಲೈಮಾಕ್ಸ್ ಗೆ ತಿರುಗುತ್ತದೆ. ಅನಿವಾಸಿ ತರುಣ ಕಾರ್ತಿಕ್ ನೈತಿಕ ಅಧಃಪತನ ಕಾಣುತ್ತಾನೆ. ಮನುಷ್ಯ ಸಾಫಲ್ಯತೆ ಪಡೆಯುವುದು ಐಹಿಕ ಸಿರಿತನದಿಂದಲೋ ಅಥವ ತಾನು ಸಂಸ್ಕಾರದಿಂದ ಪಡೆದುಕೊಂಡ ನೈತಿಕತೆ, ಸಚ್ಚಾರಿತ್ರ‍್ಯ ಮತ್ತು ಮಾನವೀಯ ಗುಣದಿಂದಲೋ ಎಂದು ಕಥೆ ಶೋಧಿಸುತ್ತಿರುವಂತಿದೆ. ವಿನ್ಯಾಸ, ನಿರೂಪಣೆ, ಶೈಲಿ ಮತ್ತು ಕಥಾಪರಿಸರಗಳಿಂದ 'ವರ್ಜಿನ್ ಮೊಹಿತೊ' ಯಶಸ್ವಿ ಕಥೆಯಾಗಿದೆ.

 

-ಕೇಶವ ಮಳಗಿ

 

ಪುಟಗಳು: 120

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !