ವಿ.ಕೃ.ಗೋಕಾಕ್ (ವಿಶ್ವಮಾನ್ಯರು) (ಇಬುಕ್)

ವಿ.ಕೃ.ಗೋಕಾಕ್ (ವಿಶ್ವಮಾನ್ಯರು) (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

ಲೇಖಕರು:

ಸಂಪಾದಕ: ಡಾ।। ನಾ. ಸೋಮೇಶ್ವರ

ಲೇಖಕ: ಟಿ. ಎಸ್‌. ಗೋಪಾಲ್‌

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ವಿನಾಯಕ ಕೃಷ್ಣ ಗೋಕಾಕರು (1909-1992) ವಿ.ಕೃ.ಗೋಕಾಕ್ ಎಂದೇ ಪರಿಚಿತರು. ಇದುವರೆಗೂ ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಮೊದಲ ನಾಲ್ಕು ಪ್ರಶಸ್ತಿಗಳು ನವೋದಯ ಪರ್ವ ಕಾಲದ ಮೇರು ಸಾಹಿತಿಗಳಿಗೆ ಸಂದರೆ(ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ) ನಂತರದ ನಾಲ್ಕು ಪ್ರಶಸ್ತಿಗಳು ನವ್ಯೋತ್ತರ ಕಾಲದ, ಆಧುನಿಕ ಸಮಕಾಲೀನ ಕನ್ನಡ ಸಾಹಿತ್ಯದ ಉದ್ದಾಮ ಸಾಹಿತಿಗಳಿಗೆ ದೊರೆತಿವೆ (ವಿ.ಕೃ.ಗೋಕಾಕ್, ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಕಂಬಾರ). ವಿ.ಕೃ.ಗೋಕಾಕರು ನವ್ಯೋತ್ತರ ಕನ್ನಡ ಸಾಹಿತ್ಯ ದಿಗಂತದ ಅರುಣೋದಯವೆನ್ನಬಹುದು.

ವಿನಾಯಕ ಕೃಷ್ಣ ಗೋಕಾಕರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಬಿ.ಎ. ಹಾಗೂ ಎಂ.ಎ.ನಲ್ಲಿ ಪ್ರಥಮ ರ‍್ಯಾಂಕ್ ಪಡೆದರು. ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಅಧ್ಯಾಪಕ ಕೆಲಸವನ್ನು ಮಾಡಿ ಅನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ವಿದೇಶದಿಂದ ಹಿಂದಿರುಗಿ ಸಾಂಗಲಿಯ ವೆಲ್ಲಿಂಗ್ಡನ್ ಕಾಲೇಜಿನ ಪ್ರಾಂಶುಪಾಲರಾದರು. ಅನಂತರ ಹೈದರಾಬಾದ್, ಗುಜರಾತ್ ಹಾಗೂ ಕೊಲ್ಹಾಪುರಗಳಲ್ಲಿ ಪ್ರಾಂಶುಪಾಲ ವೃತ್ತಿಯನ್ನು ನಿಭಾಯಿಸಿ ಕೊನೆಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. ಗೋಕಾಕರ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರವು ‘ಪದ್ಮಶ್ರೀ‘ ಪ್ರಶಸ್ತಿ ನೀಡಿ ಗೌರವಿಸಿದೆ.

 

ಪುಟಗಳು: 48 

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !