ವಿಚಿತ್ರಸೇನನ ವೈಖರಿ (ಇಬುಕ್)

ವಿಚಿತ್ರಸೇನನ ವೈಖರಿ (ಇಬುಕ್)

Regular price
$5.99
Sale price
$5.99
Regular price
Sold out
Unit price
per 
Shipping does not apply

GET FREE SAMPLE

 "ಜಯಂತ ಕಾಯ್ಕಿಣಿಯವರ ಕವನಸಂಕಲನವನ್ನು ಕುರಿತು ಇವರು ಹೀಗೆ ಹೇಳಿದ್ದಾರೆ".

"ಜಯಂತ ಕಾಯ್ಕಿಣಿ ತಮ್ಮ ಹುಡುಕಾಟದ ಕಾಲದಲ್ಲೇ 'ರಂಗದೊಂದಿಷ್ಟು ದೂರ' ಕವನಸಂಕಲನವನ್ನು ಪ್ರಕಟಿಸಿ ಪ್ರಸಿದ್ಧಿಗೆ ಬಂದವರು. ಈಗಲೂ ಹುಡುಗಾಟಿಕೆಯ ಹುಡುಗನಾಗಿಯೇ ಇರುವ ಅವರು ತಮ್ಮ ಕವನಕ್ಕಾಗಿ ಎಂದು ಹುಡುಕಾಟ ನಡೆಸಿದ್ದೇ ಇಲ್ಲ. ನಡೆದಲ್ಲೆಲ್ಲ ಅವರಿಗೆ ಕವನಗಳು ಗೋಚರಿಸುತ್ತವೆ. ಅವರ ಮಾತು, ಕಥೆ,ನಡೆ-ನುಡಿ ಎಲ್ಲದರಲ್ಲೂ ಕವನಪ್ರತಿಭೆ  ಪ್ರತಿಫಲಿಸುತ್ತಿರುತ್ತದೆ. ಕೌದಿ ನೇಯ್ಗೆಯಲ್ಲಿ ಪರಿಣತಿ ಪಡೆದವರಿಗೆ ಒಂದೊಂದು ತುಣುಕು ಬಟ್ಟೆ ಚೂರು ನಾಳಿನ ಸುಂದರ ಕೌದಿಯಾಗಿಕಾಣುವಂತೆ ಕಾಯ್ಕಿಣಿಯವರ ಇಂದ್ರಿಯಗಳನ್ನು ತಟ್ಟುವ ಎಲ್ಲವೂ ಕವನಗಳಾಗುತ್ತವೆ." 

 

                                                                                                                                       -- ನಾಗೇಶ್ ಹೆಗಡೆ.

"ರಂಗದೊಂದಿಷ್ಟು ದೂರ ಎನ್ನುವ ಕಾವ್ಯಗುಚ್ಚದೊಂದಿಗೆ ತಮ್ಮ ಹದಿನೇಳನೆ ವಯಸ್ಸಿಗೆ ಕಾವ್ಯಯಾನ ಆರಂಭಿಸಿದ ಜಯಂತರು ಸಂತೆಯ ಗೌಜುಗದ್ದಲದ ನಡುವೆ ನಿಂತು ಗಾಳಿಯ ಲಯ ಹಿಡಿಯಬಲ್ಲರು, ಘಮವನ್ನು ಬೊಗಸೆಯಲ್ಲಿ ಹೆಕ್ಕಿ ಹಂಚಬಲ್ಲರು ಹಾರುವ ಹಕ್ಕಿಯ ಕಣ್ಣುಗಳಲ್ಲಿ ಕನಸುಗಳ ಎಣಿಸಬಲ್ಲರು ಮನಸ್ಸಿನ ಗೀರುಗಳಿಗೆ ಮುಲಾಮು ಹಚ್ಚಬಲ್ಲರು. ಹೀಗಾಗಿಯೇ ಅವರ ಬಹುತೇಕ ಕವಿತೆಗಳು ಮನುಷ್ಯ ಸಹಜ ಪ್ರೀತಿಯನ್ನು ಕಾಳಜಿಯನ್ನು ಸ್ಫುರಿಸುತ್ತವೆ. ಜೀವನ ಪ್ರೀತಿಯ ತೇರಿನಲ್ಲಿ ಕೂತು ಯಾವ ಉತ್ಪ್ರೇಕ್ಷೆಯ ಹಂಗಿಗೆ ಒಳಪಡದೆ ಅತ್ಯಂತ ಸೂಕ್ಷ್ಮವಾಗಿ ಮತ್ತು ಆತ್ಯಂತಿಕವಾಗಿ ತಾವು ಹೇಳಬೇಕಾದ್ದನ್ನು ತುಸು ಮೆಲ್ಲದನಿಯಲ್ಲೇ ಹೇಳುತ್ತವೆ. ಗಮನವಿಟ್ಟು ಕೇಳಿದರೆ ಕಡಲ ತೀರದ ಅಲೆಗಳಿಗೆ ಇರಬಹುದಾದ ಖಾಸಗಿ ಒಳಾಂಗಣ ಸದ್ದೊಂದು ಅವರ ಕವಿತೆಗಳಲ್ಲಿ ಅನಾವರಣಗೊಳ್ಳುತ್ತ ಹೋಗುತ್ತದೆ. ರಾಶಿ ರಾಶಿ ರೂಪಕಗಳ ಮೊಗೆಮೊಗೆದು ಕೊಡುವ ಇವರ ಕಾವ್ಯ ತಕರಾರುಗಳನ್ನು ಕೂಡ ಹೂಪಕಳೆಗಳನ್ನು ಬಿಡಿಸಿದಷ್ಟೇ ಎಚ್ಚರದಲ್ಲಿ ತಣ್ಣಗೆ ದಾಖಲಿಸುತ್ತವೆ.' ಹೀಗೆ ನಾನಾ ರೀತಿಯ ಕಿಚಿಪಿಚಿ, ಪ್ರಭುತ್ವ ನ್ಯಾಯ ನಡದೇ ಇದೆ ಈ ನಗ್ನ ವೇದಶಾಲೆಯಲ್ಲಿ'(ಬಟ್ಟಬಯಲು). 'ಪಾದ ಧೂಳಿಯಲ್ಲೇ ಬೀಜ ನೆನೆಸಿ ಹದ ಬೆಳೆಸಿ ಹಸಿರು ಉಸಿರುವಾಸೆ ಮೊಳಕೆ ಮೂಕಭಾಷೆ' (ಮೊಳಕೆ) ಎನ್ನುವುದನ್ನು ಒಟ್ಟೊಟ್ಟಿಗೆ ಕಟ್ಟಿಕೊಡುತ್ತದೆ."

                                                                                                                                       -- - ದೀಪ್ತಿ ಭದ್ರಾವತಿ 

 

ಪುಟಗಳು: 136

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !