ಕಥಾವಸಂತ

ಕಥಾವಸಂತ

Regular price
$9.99
Sale price
$9.99
Regular price
Sold out
Unit price
per 
Shipping does not apply

ಇಲ್ಲಿ 25 ಸುಂದರ ಕಥೆಗಳಿವೆ. ಈ ಟಾಪ್‌ 25 ಕಥೆಗಳ ಈ ಕಥಾಗುಚ್ಛವನ್ನು ನಿಮ್ಮ ಕೈಗಿಡುತ್ತಿದ್ದೇವೆ. 
ಇಲ್ಲಿನ ಕಥೆಗಳಲ್ಲಿ ವಸ್ತು ವೈವಿಧ್ಯವಿದೆ. ಶೈಲಿಯಲ್ಲಿ ಭಿನ್ನತೆಯೂ ಇದೆ. ರಾಜ್ಯದ ವಿವಿಧ ಪ್ರದೇಶಗಳ ಕಥೆಗಾರರು ಇಲ್ಲಿ ತಮ್ಮ ಕಥೆಗಳೊಂದಿಗೆ ಕಾಣಿಸಿಕೊಂಡಿದ್ದಾರೆ. ಇಲ್ಲಿ ಕಥನಗಾರಿಕೆಯ ಜತೆ ಕುತೂಹಲದಿಂದ ಒಡನಾಡಿದವರಿದ್ದಾರೆ. ಹೊಸ ಪ್ರಯೋಗ ಮಾಡೋಣವೆಂದು ಮುನ್ನುಗ್ಗಿದವರಿದ್ದಾರೆ. ವಸ್ತುವಿನ ಹೊಸತನದೊಂದಿಗೆ ಗಮನ ಸೆಳೆದವರಿದ್ದಾರೆ. ಭಾಷೆಯ ವೈವಿಧ್ಯತೆಯೊಂದಿಗೆ ಕಥೆಗಳನ್ನು ಚೆಂದಗಾಣಿಸಿದವರಿದ್ದಾರೆ. ಇಲ್ಲಿನ ಕಥೆಗಳನ್ನು ಓದುವಾಗ ನಮ್ಮ ಕಥಾಪರಂಪರೆಯ ಹಿನ್ನೆಲೆ ಹಾಗೂ ಕಥಾಲೋಕ ಮುಂದೆ ತೆರೆದುಕೊಳ್ಳಲಿರುವ ದಾರಿ ಎರಡೂ ಕಾಣಿಸಬಹುದು. ಇದು ಇಲ್ಲಿನ ಕಥೆಗಳ ಶಕ್ತಿ. ಇಲ್ಲಿನ ಕಥೆಗಳ ಮೂಲಕ ನಿತ್ಯ ಜೀವನದ ತಲ್ಲಣಗಳು ನಮ್ಮನ್ನು ಬಹುಮಟ್ಟಿಗೆ ತಾಕುತ್ತವೆ. ಇಲ್ಲಿ ವ್ಯಕ್ತವಾಗುವ ಭಾಷೆಯ ಬನಿ ಕನ್ನಡದ ಭಾಷಾ ವೈವಿಧ್ಯತೆ, ಆಡುನುಡಿಯಲ್ಲಾಗುತ್ತಿರುವ ಬದಲಾವಣೆಗಳನ್ನು ತೆರೆದಿಡುತ್ತದೆ.


ಇಲ್ಲಿ ಅನುಭವಿಗಳ ಜತೆಗೆ ಹೊಸ ಕಥೆಗಾರರಿದ್ದಾರೆ. ಹಳೆಯ ಕಥನ ಪರಂಪರೆಯ ಕಸುವನ್ನೆಲ್ಲ ಹೀರಿ ಬೆಳೆಯುತ್ತಿರುವವರಿದ್ದಾರೆ. ತಮ್ಮದೇ ದಾರಿಯಲ್ಲಿ ನಡೆವವರೂ ಇದ್ದಾರೆ. ಒಟ್ಟಿನಲ್ಲಿ ನಾಳಿನ ಕಥನಲೋಕ ಹಸಿರಾಗಿದೆ ಎಂಬುದನ್ನು ಈ ಕಥೆಗಾರರ ಹುಮ್ಮಸ್ಸು ತೋರಿಸುತ್ತಿದೆ. ಇವರೆಲ್ಲರ ಮುಂದಿನ ಕಥನಕೃಷಿ ಸಾಹಿತ್ಯಲೋಕವನ್ನು ಸಿರಿವಂತಗೊಳಿಸಲಿದೆ ಎಂಬ ಭರವಸೆಯೊಂದಿಗೆ ಈ ಕೃತಿಯನ್ನು ನಿಮ್ಮ ಕೈಗಿಡುತ್ತಿದ್ದೇವೆ.

ಪುಟಗಳು : 196