ವಿಶ್ವದ ಅಂಚಿನೆಡೆಗೆ (ಆಡಿಯೋ  ಬುಕ್)

ವಿಶ್ವದ ಅಂಚಿನೆಡೆಗೆ (ಆಡಿಯೋ ಬುಕ್)

Regular price
$7.99
Sale price
$7.99
Regular price
Sold out
Unit price
per 
Shipping does not apply

GET FREE SAMPLE

ನಿರ್ಮಾಣ ಸಹಾಯ: ಧ್ವನಿಧಾರೆ ಮಿಡಿಯಾ

ಆಡಿಯೋ ಪುಸ್ತಕದ ಅವಧಿ : 8 ಘಂಟೆ 42 ನಿಮಿಷ


ಈ ಪುಸ್ತಕ ಬ್ರಹ್ಮಾಂಡವನ್ನು ಅರಿಯುವಲ್ಲಿ ಸಹಕಾರಿಯಾಗಿದೆ. ನಿಮ್ಮ ಕುರ್ಚಿಯಲ್ಲಿ ಕುಳಿತೇ ವಿಶ್ವದ ಅದ್ಭುತಗಳ ಕಡೆಗೆ ಪ್ರಯಾಣ ಮಾಡಿ! ಮೇಧಾವಿಗಳು, ಈ ಬ್ರಹ್ಮಾಂಡದ ರಹಸ್ಯಗಳನ್ನು ಭೇದಿಸುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ನಾವು ನಮ್ಮ ಪ್ರಯಾಣವನ್ನು ನಮ್ಮ ಮನೆ, ಭೂಮಿಯಿಂದ ಶುರು ಮಾಡಿ, ಬ್ರಹ್ಮಾಂಡದ ತುದಿಯವರೆಗೂ ಹೋಗಿ ಬರೋಣ. ಮಾರ್ಗದುದ್ದಕ್ಕೂ ನಾವು ಕೆಲವೆಡೆಗಳಲ್ಲಿ  ನಿಂತು, ವಿಶ್ವದ ಕೆಲವು ಅದ್ಭುತ ಸಂಗತಿಗಳನ್ನು ಕಲಿಯೋಣ. ಈ  ವಿಶ್ವದ ಪ್ರಯಾಣ ಎಷ್ಟು ಕಾಲ ತೆಗೆದುಕೊಳ್ಳುವುದು ಎಂಬುದರ ಬಗ್ಗೆ ನಮಗೆ ಕಲ್ಪನೆ ಇಲ್ಲ. ಅದೇ ರೀತಿ ನಾವು ಪ್ರವಾಸ ಮುಗಿಸಿ ಯಾವಾಗ ಭೂಮಿಗೆ  ಹಿಂತಿರುಗಿ ಬರುವೆವೋ ಅದೂ ಗೊತ್ತಿಲ್ಲ. ಯಾಕೆಂದರೆ ನಾವು ಹಿಂದಿರುಗಿದಾಗ, ನಮ್ಮ ಭೂಮಿ. ಇಲ್ಲಿ ಇರಲಿಕ್ಕೂ ಇಲ್ಲ! ಆದಾಗ್ಯೂ ನಾವು ಬಂದೆವೆಂದುಕೊಳ್ಳೋಣ. ಆಗ  ನಾವು ನಮ್ಮ ನಂತರದ ಪೀಳಿಗೆಯವರನ್ನು ಭೇಟಿ ಮಾಡಬಹುದು. ಆದರೆ ಅವರು ನಮ್ಮ ತರಹ ಕಾಣುವುದೂ ಇಲ್ಲ;  ನಮ್ಮ ತರಹ ಯೋಚಿಸುವುದೂ ಇಲ್ಲ. ಅವರ ಸಂಸ್ಕೃತಿ , ರೀತಿ, ರಿವಾಜುಗಳು, ಭಾಷೆ, ರೂಪ, ಕೆಲಸ, ಜೀವನಶೈಲಿ ಹಾಗೂ ಅವರು ಉಪಯೋಗಿಸುವ ತಂತ್ರಜ್ಞಾನ  ಎಲ್ಲವೂ ನಮಗೆ ಇರುಸು ಮುರುಸನ್ನುಂಟು ಮಾಡಬಹುದು. ನಾವು ಭೂಮಿಗೆ ಬಂದೆವೋ ಅಥವಾ ಇನ್ನಾವುದೋ ಅನ್ಯಗ್ರಹಕ್ಕೆ ಕಾಲಿಟ್ಟಿರುವೆವೋ ಎನ್ನುವದೂ ನಮಗೆ ಗೊತ್ತಾಗುವುದಿಲ್ಲ! "

- ಶರದ್ ನೆಲವಡೆ

 

ಈಗ ಕೇಳಿ ವಿಶ್ವದ ಅಂಚಿನೆಡೆಗೆ ಕೇವಲ ಮೈಲ್ಯಾಂಗ್ ಆ್ಯಪ್  ಅಲ್ಲಿ.