ವಿಸ್ಮಯ ವಿಶ್ವ - 2 (ಮಿಲನಿಯಮ್ - 15)

ವಿಸ್ಮಯ ವಿಶ್ವ - 2 (ಮಿಲನಿಯಮ್ - 15)

Regular price
$4.99
Sale price
$4.99
Regular price
Sold out
Unit price
per 
Shipping does not apply

ಬರಹಗಾರ: ಪೂರ್ಣಚಂದ್ರ ತೇಜಸ್ವಿ 

 

ಈ ಶತಮಾನದ ಅದ್ಭುತಗಳಾಗಿ ಎವರೆಸ್ಟ್ ಹತ್ತಿದ್ದು, ಉಪಗ್ರಹ ಹಾರಿಸಿದ್ದು, ಚಂದ್ರನಲ್ಲಿ ಇಳಿದಿದ್ದು, ಕಂಪ್ಯೂಟರ್ ಚಿಪ್‌ಗಳನ್ನು ತಯಾರಿಸಿದ್ದು ಕಣ್ಣು ಕೋರೈಸುವ ಸಾಧನೆಗಳಾದ್ದರಿಂದ ಜನಪ್ರಿಯತೆಯನ್ನೂ ಪ್ರಚಾರವನ್ನೂ ಪಡೆದುಕೊಳ್ಳುತ್ತವೆ. ಆದರೆ ಈ ಶತಮಾನದ ಸಾಧನೆ ಎಂದು ಯಾವುದಾದರೂ ಒಂದೇ ಒಂದು ಸಾಧನೆಯನ್ನು ಹೇಳು ಎಂದು ನನ್ನನ್ನು ಯಾರಾದರೂ ಕೇಳಿದರೆ ನಾನು ನಿಸ್ಸಂಶಯವಾಗಿ ‘ವಿಶ್ವಆರೋಗ್ಯ ಸಂಸ್ಥೆ ಸಿಡುಬನ್ನು ಈ ಭೂಮಂಡಲದಿಂದಲೇ ಉಚ್ಛಾಟಿಸಿದ್ದು’ ಎಂದು ಹೇಳುತ್ತೇನೆ. ಇದು ಇದ್ದಕ್ಕಿದ್ದಂತೆ ಧಡೀರೆಂದು ಯಾರೋ ಒಬ್ಬ ಸಹಸ್ರಾರು ಜನರ ಸಮ್ಮುಖದಲ್ಲಿ ಸಾಧಿಸಿ ಚಪ್ಪಾಳೆ ಗಿಟ್ಟಿಸಿದಂಥ ಸಾಧನೆಯಲ್ಲ! ನೂರಾರು ದೇಶಗಳ ಸಹಸ್ರಾರು ಕಾರ್ಯಕರ್ತರು ಮಳೆ ಬಿಸಿಲೆನ್ನದೆ, ಕಗ್ಗಾಡು ಮರಳುಗಾಡೆನ್ನದೆ ಅನೇಕ ವರ್ಷಗಳ ಪರ್ಯಂತ ಕೆಲಸ ಮಾಡಿ ಸಾಧಿಸಿದ ಯಶಸ್ಸು. ನಾಗರೀಕತೆಗಳ ಹುಟ್ಟಿನಿಂದಲೂ ಸತತವಾಗಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡ, ವಿರೂಪಗೊಳಿಸಿದ, ಕುರುಡರನ್ನಾಗಿ ಮಾಡಿದ ಈ ಮಹಾ ಮಾರಿಯಿಂದ ಮನುಕುಲವನ್ನೇ ವಿಮುಕ್ತಿಗೊಳಿಸಿದ್ದು ಈ ಶತಮಾನದ ಮನುಷ್ಯ ಸದ್ದುಗದ್ದಲವಿಲ್ಲದೆ ಸಾಧಿಸಿದ ಅತ್ಯಮೋಘ ಸಾಧನೆ. ಈ ಸಾಧನೆಯಿಂದ ಹಿಂದುಳಿದ ರಾಷ್ಟ್ರಗಳ ಕೊಟ್ಯಂತರ ದೀನರ ಬಡವರ ಆಹುತಿ ತಪ್ಪಿತು, ಇದಕ್ಕಿಂತ ಹೆಚ್ಚಾಗಿ ಇಡೀ ಮನುಕುಲಕ್ಕೆ ಇದರಿಂದ ಒದಗಿದ ಆತ್ಮವಿಶ್ವಾಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಈಗ ಭಯಾನಕ ಪೋಲಿಯೋ ರೋಗ ಉಚ್ಫಾಟನೆಗೆ ಹೋರಾಟ ನಡೆಯುತ್ತಿದೆ. ಸಿಡುಬು ನಿರ್ನಾಮ ಸಾಧ್ಯವಾಗಿದ್ದನ್ನು ನೋಡಿದರೆ ಇದರಲ್ಲೂ ಮನಷ್ಯ ಜಯಶೀಲನಾಗುತ್ತಾನೆನ್ನುವುದರಲ್ಲಿ ಸಂದೇಹವೇ ಇಲ್ಲ. ಸಿಡುಬಿನಿಂದ ಮುಖವೆಲ್ಲಾ ಗುಳಿ ಬಿದ್ದ, ಹೂ ಕೂತು ಕುರುಡಾದ ಕಣ್ಣಿನ ಹತಾಶ ಮೋರೆಗಳು ಹೊ ಇತಿಹಾಸವಾಗಿ ಜನರ ನೆನಪಿನಿಂದಲೇ ಕಣ್ಮರೆಯಾದರೋ ಹಾಗೇ ಪೋಲಿಯೋ ರೋಗದಿಂದ ಕಾಲು ಕೈ ಕುಬ್ಜವಾಗಿ ಮರದ ಕಾಲು ಕಟ್ಟಿಕೊಂಡು ಕುಂಟುತ್ತಾ ನಡೆಯುವ ಮಕ್ಕಳನ್ನು ಮುಂದಿನ ಶತಮಾನದಲ್ಲಿ ನಾವು ನೋಡುವುದಿಲ್ಲ ಎನ್ನುವುದು ಶತಸ್ಸಿದ್ಧ!

ಇತಿಹಾಸದ ಹಾದಿಯಲ್ಲಿ ಹೇಗೆ ಅನಾವೃಷ್ಟಿ, ಕ್ಷಾಮ, ಸಾಂಕ್ರಾಮಿಕ ರೋಗಗಳು ದೊಡ್ಡದೊಡ್ಡ ನಾಗರೀಕತೆಗಳನ್ನೇ ನಾಶ ಮಾಡಿದುವು! ಪ್ರಕೃತಿ ವಿಕೋಪಗಳು, ಖಾಯಿಲೆಗಳು ಮನುಷ್ಯನನ್ನು ಯಾವ ಮಟ್ಟಕ್ಕೆ ಕಾಡಿ ಮೃಗಸಮಾನ ಮಾಡುತ್ತಿದ್ದುವು ಎನ್ನುವುದನ್ನು ಈ ಪುಸ್ತಕದಲ್ಲಿರುವ ಕೆಲವು ಚಿತ್ರಣಗಳ ಸಾದೃಶ್ಯದಲ್ಲಿ ಅವಲೋಕಿಸಿ. ಸಿಡುಬು ನಿರ್ಮೂಲನದ ಮಹತ್ವ ಅರಿವಾಗುತ್ತದೆ.

- ಕೆ.ಪಿ.ಪೂರ್ಣಚಂದ್ರ ತೇಜಸ್ವಿ

ಸರಣಿಯ ಹದಿನೈದನೆಯ ಪುಸ್ತಕ ’ವಿಸ್ಮಯ ವಿಶ್ವ - 2’.

 


ಪುಟಗಳು: 100

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !