ಆರು ಟಾಲ್‌ಸ್ಟಾಯ್ ಕತೆಗಳು (ಇಬುಕ್)

ಆರು ಟಾಲ್‌ಸ್ಟಾಯ್ ಕತೆಗಳು (ಇಬುಕ್)

Regular price
$5.99
Sale price
$5.99
Regular price
Sold out
Unit price
per 
Shipping does not apply

GET FREE SAMPLE

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಪ್ರಸ್ತುತ ಸಂಕಲನದ ಎಲ್ಲಾ ಕತೆಗಳೂ ಟಾಲ್‌ಸ್ಟಾಯ್‌ಯವರ ದ್ವಿತೀಯಾರ್ಧದ ಬರವಣಿಗೆಯನ್ನು ಪ್ರತಿನಿಧಿಸುವ ಕೆಲವು ಮುಖ್ಯ ನಿದರ್ಶನಗಳು. ಈ ಕತೆಗಳಲ್ಲಿ ಪ್ರಜ್ಞಾಪೂರ್ವಕ ಕಲೆಗಾರಿಕೆಯಾಗಲೀ ಕುಸುರಿ ಕೆಲಸದ ಕಸುಬುಗಾರಿಕೆಯಾಗಲೀ ಕಂಡುಬರುವುದಿಲ್ಲ. ಹಿರಿಯನೊಬ್ಬ ತನ್ನ ಮಕ್ಕಳು, ಮೊಮ್ಮಕ್ಕಳು, ಬಂಧು ಬಾಂಧವರು, ನೆರೆ ಹೊರೆಯವರೊಂದಿಗೆ ಹಂಚಿಕೊಂಡ ಅನುಭವ ಕಥನಗಳಂತಿರುವ ಈ ಬರಹಗಳು ತಮ್ಮ ಸರಳತೆ ಮತ್ತು ಸಹಜತೆಗಳಿಂದಾಗಿ ಮನಮುಟ್ಟುತ್ತವೆ. ಅಪಾರ ಜೀವನಾನುಭವದಿಂದ ಮೂಡಿಬಂದ ವಿವೇಕ ಈ ಕತೆಗಳ ರೂಪದಲ್ಲಿ ನಿರೂಪಣೆಗೆ ಒಳಗಾಗಿದೆ ಎನಿಸುತ್ತದೆ...

ಈ ಎಲ್ಲ ಕತೆಗಳ ಕೇಂದ್ರದಲ್ಲಿರುವುದು ಸಾಮಾನ್ಯ ರಷ್ಯನ್ನರು. ಅವರ ಬದುಕಿನ ಸುತ್ತ ಹೆಣೆದ ದೃಷ್ಟಾಂತಗಳಂತಿರುವ ಈ ಕತೆಗಳು ಮೇಲುನೋಟಕ್ಕೆ ಸರಳವೆನಿಸಿದರೂ ಬದುಕನ್ನು ಕುರಿತು ಅನೇಕ ಮೂಲಭೂತವಾದ ತಾತ್ತ್ವಿಕ ಪ್ರಶ್ನೆಗಳ ಚಿಂತನ ಮಂಥನವನ್ನು ನಡೆಸುತ್ತವೆ...


ಟಿ.ಪಿ. ಅಶೋಕ

(ಮುನ್ನುಡಿಯಿಂದ) 

  

ಪುಟಗಳು: 162

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !