ವಾಸನೆ, ಶಬ್ದ, ಬಣ್ಣ ಇತ್ಯಾದಿ...

ವಾಸನೆ, ಶಬ್ದ, ಬಣ್ಣ ಇತ್ಯಾದಿ...

Regular price
$3.99
Sale price
$3.99
Regular price
Sold out
Unit price
per 
Shipping does not apply

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಈ ಪುಸ್ತಕದಲ್ಲಿ ಒಟ್ಟು ಹನ್ನೊಂದು ಕಥೆಗಳಿವೆ.

...ಲ್ಯಾಪಟಾಪ್ ತೆಗೆದು ತನ್ನ ಶೇರುಗಳ ಸಮಗ್ರ ಲೆಕ್ಕ ಹಾಕಿದೆ. ಕೊನೆಯಲ್ಲಿ ಎರಡಿರಲಿಕ್ಕಿಲ್ಲ ಅನ್ನಿಸಿ ಸ್ವಲ್ಪ ಸಮಾಧಾನವಾಯಿತು. ಚಾನಲ್ ಬದಲಾಯಿಸಿ ಎನ್.ಡಿ.ಟಿ.ವಿ ಯನ್ನ ನೋಡತೊಡಗಿದೆ. ಅದರಲ್ಲಿ ಮದುವೆಗಿಂತ ಮೊದಲು ಲೈಂಗಿಕ ಸಂಪರ್ಕ ಇಟ್ಟುಕೊಳ್ಳಬೇಕೋ ಅಥವಾ ಮದುವೆಯ ನಂತರವೋ ಎನ್ನುವದರ ಬಗ್ಗೆ ಬಿಸಿಬಿಸಿ ಚರ್ಚೆ. ಮಧ್ಯರಾತ್ರಿ ಮೀರದ ಮೇಲೆಯೆ ಇಂತಹ ಚರ್ಚೆಗೊಂದು ಮಜ ಅನ್ನಿಸಿತು... (ಕತ್ತಲು)

...ಕುಸುಮಾಳಿಗೆ ಸಂಪಿಗೆಯ ವಾಸನೆಯೂ, ಚೈತ್ರಳಿಗೆ ಮಲ್ಲಿಗೆಯ ವಾಸನೆಯೂ, ಮಂದಾಕಿನಿಗೆ ಪುನಗದ ವಾಸನೆಯೂ ಮತ್ತು ಜಯಂತಿಗೆ ಕೆಂಪುಸಂಪಿಗೆ ಬಾಡಿದ ವಾಸನೆಯೂ ಇವೆ. ಮಂದಾಕಿನಿ ಮಧ್ಯಾಹ್ನದ ಊಟದ ವೇಳೆಯಲ್ಲಿ ಬಂದರೆ ಜಯಂತಿ ಸೂರ್ಯ ಕಂತುವ ವೇಳೆಯಲ್ಲಿ ಬರುತ್ತಾಳೆ. ಆದರೆ ಸಂಪಿಗೆ ಮಲ್ಲಿಗೆ ವಾಸನೆಯನ್ನು ಬೆಳಗಿನಲ್ಲೂ, ಪುನಗದ ವಾಸನೆಯನ್ನು ಮಧ್ಯಾಹ್ನದ ಊಟದ ವೇಳೆಯಲ್ಲೂ ಮತ್ತು ಕೂದಲಿರುವ ಕಂಕುಳಲ್ಲಿ ಮಾತ್ರ ಬರುವ ಬೆವರು ಮತ್ತು ಬಾಡಿದ ಕೇಂಡ ಸಂಪಿಗೆಯ ವಾಸನೆಯನ್ನು ನಾನು ಇರುಳಿನಲ್ಲೂ ಅನುಭವಿಸುತ್ತೇನೆ... (ವಾಸನೆ ಶಬ್ದ ಬಣ್ಣ ಇತ್ಯಾದಿ)

...ರಾತ್ರಿ ಊಟ ಮಾಡಿ ಮಲಗಿದ್ದು ಮಾತ್ರ ಭವಾನಕ್ಕನಿಗೆ ನೆನಪು. ಆಷಾಢದ ಮಳೆ ಬೇರೆ. ಬೇರೆ ಯಾವ ಸಪ್ಪಳವೂ ಕೇಳುವಂತಿರಲಿಲ್ಲ. ಮರುದಿನ ಭವಾನಕ್ಕ ಹಂಡೆಗೆ ನೀರು ತುಂಬಲು ಬಾವಿಗೆ ಕೊಡ ಇಳಿಸಿದ್ದೊಂದೆ ಗೊತ್ತು. ಬಾವಿಯಲ್ಲಿ ತೇಲುವ ಗಂಗಾ ಮತ್ತು ಸೀತಾರಾಮರ ಹೆಣ ನೋಡಿ ಅವಳು ಬಾವಿಗೆ ಹಾರಿ ಕೊಳ್ಳದಿದ್ದುದೊಂದೆ ಹೆಚ್ಚು. ಮಗಳ ಬಾಯಲ್ಲಿ ಇನ್ನೂ ಕೆನೆಗಟ್ಟಿಕೊಂಡಿದ್ದ ಹಾಲು ಮೊಸರನ್ನು ನೆನೆದು ಭವಾನಕ್ಕ ಈಗಲೂ ಅಳುತ್ತಾಳೆ... (ಮಳೆ)

ಪುಟಗಳು: 136

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !