ವಿಶ್ವಾತ್ಮಕ ದೇಶಭಾಷೆ

ವಿಶ್ವಾತ್ಮಕ ದೇಶಭಾಷೆ

Regular price
$6.99
Sale price
$6.99
Regular price
Sold out
Unit price
per 
Shipping does not apply

 

ಪ್ರಕಾಶಕರು: ಅಕ್ಷರ ಪ್ರಕಾಶನ

Publisher: Akshara Prakashana

 

ಕನ್ನಡ ಭಾಷೆಯು ತನ್ನ ಸಾಹಿತ್ಯವನ್ನು ನಿರ್ಮಿಸಿಕೊಂಡ ಆದಿಕಾಲವನ್ನು ಕೇಂದ್ರವಾಗಿಟ್ಟುಕೊಂಡಿರುವ ಪ್ರಸ್ತುತ ಪುಸ್ತಕದ ಎರಡು ಲೇಖನಗಳು ‘ದೇಶಭಾಷಾ ನಿರ್ಮಾಣ’ವೆಂಬ ಪ್ರಕ್ರಿಯೆಯನ್ನು ಕುರಿತು ಹೊಸ ಸಿದ್ಧಾಂತನಿರ್ಮಾಣಕ್ಕೆ ತೊಡಗುತ್ತವೆ. ಜತೆಗೆ, ಈ ಕಾಲದ ಕನ್ನಡಕ್ಕೂ ಮತ್ತು ಅದಕ್ಕೆ ಭಿತ್ತಿಯನ್ನು ಒದಗಿಸಿಕೊಟ್ಟ ವಿಶ್ವಾತ್ಮಕ ವ್ಯಾಪ್ತಿಯ ಸಂಸ್ಕೃತಕ್ಕೂ ನಡುವಿನ ಸಂಬಂಧಗಳು ಏನು, ಅವೆರಡು ಭಾಷೆಗಳ ನಡುವಣ ವ್ಯವಹಾರಗಳು ಯಾವ ಮಾದರಿಯವು -- ಮೊದಲಾದ ಪ್ರಶ್ನೆಗಳನ್ನೂ ಈ ಲೇಖನಗಳು ತುಂಬ ಹೊಸ ಬೆಳಕಿನಲ್ಲಿ ಕಾಣಲು ಪ್ರಯತ್ನಿಸಿವೆ. ಹಾಗೂ ಈ ಎಲ್ಲ ಚರ್ಚೆಗಳ ಮೂಲಕ ಇವತ್ತು ಎದುರಾಗಿರುವ ಜಾಗತೀಕರಣವೆಂಬ ವಿದ್ಯಮಾನಕ್ಕೂ ನಾವು ತುಂಬ ಹೊಸದೇ ಆದ ನೆಲೆಯಲ್ಲಿ ಪ್ರತಿಸ್ಪಂದಿಸುವುದು ಸಾಧ್ಯವೆ -- ಎಂಬುದನ್ನು ಪರೋಕ್ಷವಾಗಿ ಪರಿಶೀಲಿಸುವ ಒಂದು ಮಹತ್ತ್ವಾಕಾಂಕ್ಷೆಯೂ ಕೂಡಾ ಈ ಎರಡು ಲೇಖನಗಳ ಹಿನ್ನೆಲೆಯಲ್ಲಿ ಅಡಕವಾಗಿದೆ. 

 

ಪುಟಗಳು: 176

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !