ಬರಹಗಾರರು: ಪ್ರೊ ಎಸ್ ಎನ್ ಶಂಕರ್
ಕನ್ನಡದ ಜನಪ್ರಿಯ ಕಾದಂಬರಿಗಾರ್ತಿ ತ್ರಿವೇಣಿ ಪತಿ ಪ್ರೊ.ಎಸ್.ಎನ್. ಶಂಕರ್ 1956ರಲ್ಲಿ ಬಾಂಬೆಯಲ್ಲಿ ಐದು ರೂಪಾಯಿಗೆ ತೆಗೆದುಕೊಂಡಿದ್ದ ಓಹೆನ್ರಿಯ ಇಂಗ್ಲಿಷ್ ಕಥಾ ಪುಸ್ತಕವನ್ನು ಕನ್ನಡಕ್ಕೆ ರೂಪಾಂತರ ಮಾಡಿದ ಸಂಕಲನವಿದು. ಇಲ್ಲಿಯವರೆಗೂ ಓಹೆನ್ರಿಯ ಕೆಲವು ಕಥೆಗಳು ಬಿಡಿಬಿಡಿಯಾಗಿ ಪ್ರಕಟವಾಗಿದ್ದರೂ, ಆತನ ಕಥೆಗಳು ಒಂದು ಕಡೆ ಸಿಗುವ ಪ್ರಯತ್ನ ಆಗಿರಲಿಲ್ಲ. ಹಾಗಾಗಿ ಕನ್ನಡ ಸಾಹಿತ್ಯಕ್ಕೆ ಓಹೆನ್ರಿ ಎಲ್ಲೋ ಒಂದು ಕಡೆ ದೂರವಾಗಿದ್ದ. ಈ ಸಂಕಲನದ ಮೂಲಕ 32 ಓಹೆನ್ರಿ ಕಥೆಗಳನ್ನು ಇಡೀಯಾಗಿ ಕನ್ನಡಕ್ಕೆ ಪರಿಚಯಿಸಿದ ಹೆಮ್ಮೆ ಪಂಚಮಿ ಪ್ರಕಾಶನದ್ದು. ಇದು ಅವರ ಕೊನೆಯ ಪುಸ್ತಕ ಕೂಡ ಹೌದು.