ಬೇರು

ಬೇರು

Regular price
$7.99
Sale price
$7.99
Regular price
Sold out
Unit price
per 
Shipping does not apply

ಬರಹಗಾರರು: ಶ್ರೀಧರ್ ಬನವಾಸಿ (ಫಕೀರ)

ಬೇರು' ಕಾದಂಬರಿ ನಮ್ಮ ಕಾಲದ ಬದುಕನ್ನು ಕುರಿತ ಸಾವಕಾಶ ಕಥನ. ಕಾದಂಬರಿಯಲ್ಲಿ ಕೆಟ್ಟವರು ಬದಲಾಗುತ್ತಾರೆ, ಅಸಹಾಯಕರು ಹೊಸ ವಿಶ್ವಾಸ ಗಳಿಸುತ್ತಾರೆ, ಸೋತಂತೆ ಕಂಡರೂ ಆದರ್ಶವೆನ್ನುವುದು ಕೆಡುಕರನ್ನು ನಾಶ ಮಾಡದೆ ಒಳ್ಳೆಯವರನ್ನಾಗಿ ಪರಿವತರ್ಿಸುತ್ತದೆ. ಬದುಕೆಂಬ ಮರದ ಸಾರವಿರುವುದೇ ಒಳಿತನಲ್ಲಿ. ಕ್ರೌರ್ಯ ಹಿಂಸೆ ಅನ್ಯಾಯ ಇವೆಲ್ಲವೂ ನಿಜ; ಆದರೆ ಮನುಷ್ಯನ ಹಂಬಲವಾದ ಶಾಂತಿ, ಸಮಾಧಾನ, ಸಹಬಾಳುವೆ ಇವೇ ಜೀವನ ವೃಕ್ಷವನ್ನು ಪೊರೆಯುವ ಬೇರುಗಳು. ಇಂಥ ಸ್ವಸ್ಥಬದುಕಿನ ಸಾಧ್ಯತೆಯನ್ನು ಈ ಕಾದಂಬರಿ ಅನಾವರಣಗೊಳಿಸುತ್ತದೆ. ಸೂಕ್ಷ್ಮ ನಿರೀಕ್ಷಣೆಯಿಂದ ಮೂಡಿದ ಖಚಿತ ಚಿತ್ರಗಳು, ಆ ಚಿತ್ರಗಳೊಂದಿಗೆ ಬೆಸೆದಿರುವ ಭಾವಲೋಕ ಇವನ್ನೆಲ್ಲ ಓದುಗರೂ ಕಾಣುವಂತೆ 'ಫಕೀರ' ನಡೆಸಿರುವ ಪ್ರಯತ್ನ ಮೆಚ್ಚುಗೆಗೆ ಅರ್ಹವಾದದ್ದು. ಆದರ್ಶದ ಸಾಕ್ಷಾತ್ಕಾರದ ಸಾಧ್ಯತೆಯನ್ನು ಹುಡುಕುವ ಪ್ರಯತ್ನವಾಗಿ 'ಬೇರು' ಕಾದಂಬರಿ ನಮ್ಮ ಕಾಲದ ಬರವಣಿಗೆ ಮರೆತಿರುವ ಸ್ವಸ್ಥ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ನೆನಪಿಸುತ್ತದೆ.

-ಪ್ರೊ. ಓ. ಎಲ್. ನಾಗಭೂಷಣಸ್ವಾಮಿ

2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಯುವ ಪುರಸ್ಕಾರ’ ಪಡೆದ ಫಕೀರ ಅನ್ನುವ ಹೆಸರಿನಿಂದ ಪರಿಚಿತವಾಗಿರುವ ಶ್ರೀಧರ್ ಬನವಾಸಿ ಅವರ ಮೊದಲ ಕಾದಂಬರಿ ""ಬೇರು"".