ಲ್ಯಾಪಟಾಪ್ ಪರದೆಯಾಚೆಗೆ

ಲ್ಯಾಪಟಾಪ್ ಪರದೆಯಾಚೆಗೆ

Regular price
$4.99
Sale price
$4.99
Regular price
Sold out
Unit price
per 
Shipping does not apply

‘ಅವಧಿ’ಗೆ ಬರಹಗಳನ್ನು ಬರೆಯುವಾಗ ಸಂಯುಕ್ತೆ ಯಾವುದೇ ಚೌಕಟ್ಟನ್ನು ಹಾಕಿಕೊಂಡಿರಲಿಲ್ಲ. ನದಿ ಹರಿಯುವಷ್ಟೇ ಸಹಜವಾಗಿ ಅವಳು ಬೇರೆಬೇರೆ ಊರಿನ, ಬೇರೆಬೇರೆ ನೆಲದ ಕಥೆಗಳನ್ನು ಹೇಳುತ್ತಾ ಹೋಗಿದ್ದಳು. ಅವುಗಳಲ್ಲಿ ಕೆಲವು ಬರಹಗಳನ್ನು ಆರಿಸಿಕೊಂಡು ಈ ಪುಸ್ತಕವನ್ನು ರೂಪಿಸಲಾಗಿದೆ. ಪುಸ್ತಕದ ವಿವಿಧ ವಿಷಯಗಳ ಕ್ಯಾನ್ವಾಸೇ ಹೇಳುವ ಹಾಗೆ ಇಲ್ಲಿ ಮಕ್ಕಳ ಪದ್ಯಗಳಿಂದ ಹಿಡಿದು, ಮದೀಬಾವರೆಗೂ ಕೌದಿಯ ಚಿತ್ತಾರಗಳ ಹಾಗೆ ಹಲವು ಬಣ್ಣಗಳ ನೂಲುಗಳು ಸೇರಿವೆ.

ಸಂಧ್ಯಾರಾಣಿ

‘ಬೈನರಿ ಜಗತ್ತಿನ ಮಧ್ಯೆ ಇದ್ದೂ ಜಗತ್ತು ಅದಕ್ಕಿಂತ ಭಿನ್ನವಾಗಿ ಕಟ್ಟಲ್ಪಟ್ಟಿದ್ದು ಎನ್ನುವುದನ್ನು ಸಮರ್ಥವಾಗಿ ಈ ಕೃತಿಯಲ್ಲಿ ಮನವರಿಕೆ ಮಾಡಿಸುತ್ತಿದ್ದಾರೆ' ಎನ್ನುವ ಮಾತು ಸಂಯುಕ್ತಾ ಪುಲಿಗಲ್ ಅವರ 'ಲ್ಯಾಪ್‌ಟಾಪ್ ಪರದೆಯಾಚೆಗೆ' ಪುಸ್ತಕದ ಬೆನ್ನುಡಿಯಲ್ಲಿ ಇದೆ. ಈ ಪುಸ್ತಕದಲ್ಲಿ ಇರುವ ಬಿಡಿ ಬರಹಗಳನ್ನು ಓದುತ್ತಿದ್ದರೆ ಈ ಮಾತು, ಪುಸ್ತಕಕ್ಕೆ ಬಹಳ ಸೂಕ್ತ ಎಂಬ ಅನಿಸಿಕೆ ಮೂಡುತ್ತದೆ. 'ಡಾರ್ಕ್ ಅಂಡ್ ಲವೀ ಟೂ...' ಬರಹದಲ್ಲಿ ಮನುಷ್ಯನ ಕಪ್ಪು ಮತ್ತು ಬಿಳಿ ತೊಗಲಿನ ಕುರಿತು ಸಂಯುಕ್ತಾ ಅವರು ದಾಖಲಿಸಿರುವ ಅನುಭವ-ಅನಿಸಿಕೆಗಳು ನೆನಪಿನಲ್ಲಿ ಉಳಿಯುವಂಥವು. ಇಲ್ಲಿನ ಒಂದೆರಡು ಬರಹಗಳು ಚರ್ಚಾರ್ಹ ವಸ್ತುಗಳನ್ನು ಅಯ್ಕೆ ಮಾಡಿಕೊಂಡಿವೆ. ಅವುಗಳಲ್ಲಿ ಲೇಖಕಿ ತಮ್ಮ ಅಭಿಪ್ರಾಯವನ್ನು ಸ್ಪುಟವಾಗಿ ದಾಖಲಿಸಿದ್ದಾರೆ. ಅಲ್ಲಿ ಪಾರಿಭಾಷಿಕದ ರೂಪದಲ್ಲಿ ಬಳಸಿರುವ ಪದಗುಚ್ಛಗಳ ಬಗ್ಗೆ ಪ್ರಶ್ನೆಗಳು ಮೂಡಬಹುದು - ಆದರೆ, ಅಲ್ಲಿ ಲೇಖಕಿ ಹೊಂದಿರುವ ಸದಾಶಯವು ಪ್ರತಿಫಲಿತವಾಗಿದೆ ಎಂಬುದನ್ನೂ ಗುರುತಿಸಬೇಕು. ಅಂದಹಾಗೆ, ಇಲ್ಲಿರುವವು ಸಂಯುಕ್ತಾ ಅವರು ಬ್ಲಾಗಿನಲ್ಲಿ ಬಿಡಿಬಿಡಿಯಾಗಿ ಬರೆದ ಬರಹಗಳು.

ಪ್ರಜಾವಾಣಿ ಪುಸ್ತಕ ವಿಮರ್ಶೆ

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !

 

ಪುಟಗಳು: 128