ಆಯ್ದ ಪತ್ರಗಳೂ ಚಿತ್ರ(ಣ)ಗಳೂ (ಇಬುಕ್)

ಆಯ್ದ ಪತ್ರಗಳೂ ಚಿತ್ರ(ಣ)ಗಳೂ (ಇಬುಕ್)

Regular price
$6.99
Sale price
$6.99
Regular price
Sold out
Unit price
per 
Shipping does not apply

GET FREE SAMPLE

1986ರಿಂದ ತೊಡಗಿದ್ದ ನನ್ನ ಬರವಣಿಗೆಗಳ ಕುರಿತು ಅದರಲ್ಲೂ ಕಾರಂತ ಸಾಹಿತ್ಯದ ಬಗ್ಗೆ ಕಾರಂತರ ಕುರಿತು ಅಭಿಮಾನವುಳ್ಳವರನೇಕರು ಆಗಾಗ ನನಗೆ ಪತ್ರ ಬರೆಯುತ್ತಲೇ ಇದ್ದಾರೆ. ಕಾರಂತರು ಜೀವಂತರಿದ್ದಾಗಲೂ ಅವರು ಕಾಲವಶರಾದ ಬಳಿಕವೂ ಒಂದಿಲ್ಲೊಂದು ಕಾರಣಕ್ಕಾಗಿ ನನಗೆ ಪತ್ರಗಳು ಬರುತ್ತಲೇ ಇವೆ. ಅಂಥವುಗಳಲ್ಲಿ - ಬಹಳಷ್ಟು ಪತ್ರಗಳು ನನ್ನ ಮತ್ತು ಕಾರಂತರ ಮೇಲಣ ಅಭಿಮಾನದಿಂದ ಕೂಡಿದವುಗಳು. ಸಾಧನೆಗಳು ಮತ್ತು ವ್ಯಕ್ತಿ-ವಿವರಗಳಷ್ಟೇ ಅವುಗಳ ತಿರುಳಾಗಿರುವುದರಿಂದ - ಅಂತಹ ಪತ್ರಗಳು ನನಗೆ ಮತ್ತು ಕಾರಂತರಿಗೆ ಅಮೂಲ್ಯ ಸಂಪತ್ತು; ಅಂಥವುಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವುದರಿಂದ ಸಾಹಿತ್ಯಕ್ಷೇತ್ರಕ್ಕೆ ಯಾವುದೇ ಲಾಭವಿಲ್ಲ - ಎಂಬುದನ್ನು ಮನಗಂಡು ಅಂಥವುಗಳನ್ನು ಪ್ರಕಟಿಸುವುದು ಬೇಡವೆಂದು ತೀರ್ಮಾನಿಸಿದ್ದೇನೆ. ಅಂತಹ ಪತ್ರಗಳ ಸ್ವರೂಪ ಹೇಗಿರುತ್ತದೆ ಎಂಬ ಓದುಗರ ಕುತೂಹಲವನ್ನು ತಣಿಸಲು ಬೆರಳೆಣಿಕೆಯ ಸಾಹಿತ್ಯೇತರ ಪತ್ರಗಳನ್ನು ಇಲ್ಲಿ ಪ್ರಕಟಿಸಿದ್ದೇನೆ. ಕಾರಂತರಿಗೆ ಅಭಿಮಾನಿಗಳು ಬರೆದಿದ್ದ ಪತ್ರಗಳಲ್ಲಿ ನನ್ನ ಬಗ್ಗೆ ಪ್ರಸ್ತಾಪವಿದ್ದರೆ, ಅಂತಹ ಪತ್ರಗಳನ್ನೂ ಪ್ರಸ್ತುತ ಗ್ರಂಥದಲ್ಲಿ ಪ್ರಕಟಿಸಿದ್ದೇನೆ. ನನಗಾಗಲೀ, ಓದುಗರಿಗಾಗಲೀ ಸಂಬಂಧವಿಲ್ಲದ ವ್ಯಕ್ತಿ-ವಿವರಗಳನ್ನು ಹೊಂದಿರುವ ಕಾರಂತರಿಗೆ ಬಂದಿದ್ದ ಪತ್ರಗಳಲ್ಲಿನ ವೈಯಕ್ತಿಕ ವಿಚಾರಗಳನ್ನು (ಕಾರಂತರಿಗಷ್ಟೇ ಮುಖ್ಯವಾದ ವಿವರಗಳು) ಪ್ರಕಟಿಸಲು ಹೋಗಿಲ್ಲ. ವೈಯಕ್ತಿಕ ಸಹಾಯಹಸ್ತ ಪಡೆದುಕೊಂಡಿದ್ದವರು ನನಗೆ ಬರೆದಿದ್ದ ಪತ್ರಗಳೂ ಅನೇಕ ಇವೆ. ಅವುಗಳನ್ನು ಪ್ರಕಟಿಸುವುದು ನನ್ನ ಈ ಗ್ರಂಥದ ಉದ್ದೇಶವಲ್ಲದಿರುವುದರಿಂದ, ಅಂಥವುಗಳನ್ನು ಕೈಬಿಟ್ಟಿದ್ದೇನೆ. ಗ್ರಂಥದ ಪುಟಗಳನ್ನು ಬೀಗಿಸಬಾರದೆಂಬ ಎಚ್ಚರಿಕೆಯಿಂದ. ಕಾರಂತರು ನನಗೆ ಬರೆದಿದ್ದ ಪತ್ರಗಳನ್ನು ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದವರು 1998ರಲ್ಲಿ ಪ್ರಕಟಿಸಿದ ಕಾರಂತರ ಬೃಹತ್‌ ಪತ್ರ ಸಂಪುಟ (ನೋಡಿ: ಪತ್ರ ವ್ಯವಹಾರ ಮತ್ತು ನಾನು-ಲೇ: ಕೆ. ಶಿವರಾಮ ಕಾರಂತ)ದಲ್ಲಿ ಪ್ರಕಟಿಸಲಾಗಿದೆ.

ಹೀಗೆ ನನ್ನ ಈ ಗ್ರಂಥಕ್ಕೆ ಆಯ್ದ ಪತ್ರಗಳೂ, ಚಿತ್ರಣಗಳೂ ಎಂಬ ಶೀರ್ಷಿಕೆಗೆ ತಕ್ಕಂತೆ ಈ ಗ್ರಂಥದ ಸಂಪಾದಕಿ ನಾನಾಗಿದ್ದರೂ, ಎಚ್ಚರಿಕೆಯಿಂದಲೇ ಸಂಪಾದನಾ ಕಾರ್ಯವನ್ನು ಮಾಡಿದ್ದೇನೆ. ಕಾರಂತರ ಬದುಕು ಬರಹಗಳ ಬಗ್ಗೆ ನಾನು ಲೇಖನಿ ಕೈಗೆತ್ತಿಕೊಂಡು ಬರೆಯುತ್ತಲೇ ಸಾಗಿದ ಕುರಿತು ಕಾಲದ ವಿವರವೂ ಲಭಿಸುವುದರಿಂದ ಇದು ನನ್ನ ಲೇಖನಿಯ ಕಾಲಾನುಸಾರ ಬೆಳವಣಿಗೆಯ ದಿಕ್ಸೂಚಿ ಎಂದೇ ಭಾವಿಸಬಹುದು. ಈ ಗ್ರಂಥದಲ್ಲಿ ಪ್ರಕಟಗೊಂಡಿರುವ ಹಿಂಬರಹಗಳು ಕನ್ನಡದ ಪ್ರಸಿದ್ಧ ಲೇಖಕರ ಅಭಿಪ್ರಾಯಗಳು. ನನ್ನ ಕಾರಂತ-ಸಾಹಿತ್ಯಕ್ಕೆ ಸಂದ ಆಶೀರ್ವಾದ ಅಥವಾ ಮೆಚ್ಚುಗೆ ರೂಪದ ಪುರಸ್ಕಾರಗಳೆಂದೇ ನಾನು ಭಾವಿಸಿದ್ದೇನೆ. ಇಂಥವುಗಳಲ್ಲಿ ಕೆಲವು ನನಗೆ ಅಥವಾ ಕಾರಂತರಿಗೆ ಬರೆದಿದ್ದ ಪತ್ರಗಳಲ್ಲಿ ಪಡಿಮೂಡಿವೆ. ಹಿಂಬರಹಕ್ಕಾಗಿಯೇ ಕೆಲವು ಬರಹಗಳು ನನ್ನ ಮನವಿಯ ಮೇರೆಗೆ ಬರೆಯಲ್ಪಟ್ಟವೂ ಇವೆ. ಇಂತಹ ಹಿರಿಯ ವಿದ್ವಾಂಸರಿಗೆ ನನ್ನ ನಮನಗಳು ಎಂದೆಂದಿಗೂ ಸಲ್ಲುತ್ತವೆ. ಆಯ್ದ ಪತ್ರಗಳ ಮೊದಲ ಭಾಗದಲ್ಲಿ ಪ್ರಕಟವಾಗಿರುವ ನನ್ನ ಕೃತಿಗಳನ್ನು ಅವಲೋಕಿಸಿದಾಗ, ಕಾಲಾನುಕ್ರಮದ ನನ್ನ ವಿಷಯಸೂಚಿಯ ಔಚಿತ್ಯ ಓದುಗರಿಗೆ ತಿಳಿಯುತ್ತದೆ ಮಾತ್ರವಲ್ಲ, ನನ್ನ ಬರವಣಿಗೆಯ ಬೆಳವಣಿಗೆಯ ಕುರಿತೂ ಸ್ಥೂಲನೋಟ ಲಭಿಸುತ್ತದೆ.

 

ಪುಟಗಳು: 228

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !