ಬತ್ತದ ತೊರೆ

ಬತ್ತದ ತೊರೆ

Regular price
$6.49
Sale price
$6.49
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

ಇದು ನಾಲ್ಕು ಹೆಣ್ಣು ಮಕ್ಕಳ ಜೀವನ ಯಾತ್ರೆ. ಎರಡನೆ ಮಹಯುದ್ದದ ಸಂದರ್ಭದ ಕತೆ ಇದಾಗಿದ್ದು, ನಾಲ್ಕು ಗೆಳತಿಯರ ಮೆಟ್ರಿಕ ಪರಿಕ್ಷೆಯ ನಂತರದ ಜೀವನ, ಅವರು ಕಾಣುವ ಏರಿಳಿತಗಳು ಹಾಗು ಅವರ ವೈವಾಹಿಕ ಜೀವನ ಅಂತ್ಯಗೊಂಡ ರೀತಿ. ಓಬ್ಬಳಿಗೆ ಪ್ರಿತಿಸಿ ಮದುವೆಯಾಗುವ ಆಸೆ. ಇನ್ನೊಬ್ಬಳು ತಾಯಿಯ ಹಾಗೆ ವ್ಯಬಿಚಾರ ನಡೆಸದೆ ತನ್ನ ಸ್ವಚ್ಚ ಸಂಸಾರ ನಡೆಸಬೆಕೆನಿಸುವ ಹಂಬಲ. ಮಗದೊಬ್ಬಳಿಗೆ ತನ್ನ ಜೀವನದ ಕೊನೆಯಲ್ಲಿ ಒಂಟಿಯಾಗಿ ಸಾಯುವ ಇಷ್ಟವಿಲ್ಲದೆ ಕೊನೆಗಾಲದ ಸಲುವಾಗಿ ಮದುವೆಯಾಗುವಳು. ಪ್ರತಿಯೊಬ್ಬರು ತಮ್ಮ ವೈವಾಹಿಕ ಜೀವನದಲ್ಲಿ ಸಂತೋಷ ಕಾಣಬೇಕೆಂದು ಬಯಸಿದವರು ಅದಕ್ಕಾಗಿ ತಮ್ಮ ಹತ್ತಿರವೆ ಇದ್ದ ಸಂತೋಷಗಳನ್ನು ತೊರೆದವರು ಕಡೆಗೆ ಅವರು ಹುಡುಕುತ್ತಿದ್ದ ಸಂತೋಷ ಸಿಗದಾಗ ಅವರ ತೊಳಲಾಟ ಅವರು ತೆಗೆದುಕೊಂಡ ತಪ್ಪು ನಿರ್ದಾರಗಳು ಈ ಕಥೆಯ ಸಾರಂಸ. ಈ ಕಥೆಯು ಮೇಲ್ನೊಟಕ್ಕೆ ಸಂಸಾರಿಕವಾದರು ಇದರಲ್ಲಿ ಅಡಗಿರುವ ಸಾರ ಮನುಷ್ಯನಿಗೆ ಆತ್ಮಾವಲೊಕನೆ ಮಾಡಲು ಅನುವು ಮಾಡಿಕೊಡುತ್ತವೆ. ಈ ಕಥೆಯು ಈಗಿನ ಪಾಕಿಸ್ತಾನದ ಕೆಲವು ಸ್ಥಳಗಳನ್ನು ಹೊಂದಿದೆ. ಸಮಯ ಯಾವುದಾದರು ಮನುಷ್ಯನ ಸಂಬಂದಗಳು, ಅವುಗಳನ್ನು ಉಳಿಸಿಕೊಳ್ಳಲು ನಡೆಸುವ ಹೊರಾಟ ಬದಲಾಗದು. ಎಂಬತ್ತು ವರ್ಷಗಳ ಹಳೆ ಕಥೆಯಾದರು ಎಲ್ಲೂ ಪ್ರಸ್ತುತ ಜಗತ್ತಿಗೆ ಹೊಂದುವುದಿಲ್ಲ ಎಂದು ಅನಿಸುವುದಿಲ್ಲ. ಆದ್ದರಿಂದಲೇ ಇರಬೇಕು ಕುವೆಂಪು ಮತ್ತು ಶಿವರಾಮ ಕಾರಂತರ ಬರಹಗಳು ಇಂದಿಗು ಕನ್ನಡ ಜನರ ಮನಸಿನಲ್ಲಿ ಅಜರಾಮರವಾಗಿ ಉಳಿದಿವೆ.

 

ಕೃಪೆ

https://www.goodreads.com/book/show/27845847-battada-tore

 

ಪುಟಗಳು: 296

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !