ಸ್ಮೃತಿ ಪಟಲದಿಂದ ಸಂಪುಟ 1 (ಇಬುಕ್)

ಸ್ಮೃತಿ ಪಟಲದಿಂದ ಸಂಪುಟ 1 (ಇಬುಕ್)

Regular price
$11.99
Sale price
$11.99
Regular price
Sold out
Unit price
per 
Shipping does not apply

GET FREE SAMPLE

ನನ್ನ ಬಾಳಿನ ಐದನೆಯ ದಶಕ ಮುಗಿದ ಹೊತ್ತಿಗೆ 'ಹುಚ್ಚು ಮನಸ್ಸಿನ ಹತ್ತು ಮುಖಗಳು' ಎಂಬೊಂದು ಆತ್ಮ ಕಥನವನ್ನು ಬರೆದು ಕನ್ನಡ ನಾಡಿನ ಜನರಿಗೆ ಒಪ್ಪಿಸಿದ್ದೆ. ಮುಂದೆ ಹತ್ತು ಹದಿನೆರಡು ವರ್ಷಗಳ ಬಳಿಕ ಅದಕ್ಕೇನೆ ಒಂದಿಷ್ಟು ಹೆಚ್ಚಿನ ಅನುಭವ ಗಳನ್ನು ಸೇರಿಸಿ ಪ್ರಕಟಿಸಿದೆ. ಆ ನನ್ನ ಬರಹ ಅನೇಕರ ಕುತೂಹಲವನ್ನು ಕೆರಳಿಸಿದುದನ್ನು ಕಂಡೆ. ಮೂರನೆಯ ಬಾರಿಗೆ ಅದೇ ರೀತಿಯಲ್ಲಿ ಸಂದ ವರ್ಷಗಳ ಅನುಭವವನ್ನು ಸೇರಿಸಿ ಈ ದಿನದ ತನಕವೂ ನಾನು ಸಾಗಿಸಿದ ಬಾಳಿನ ಒಂದು ವಿಹಂಗಮ ನೋಟವನ್ನು ಬರೆದು ಒಪ್ಪಿಸುವುದು ಸಾಧ್ಯವಾದರೂ ಆ ಕೆಲಸ ಬೇಡವೇ ಬೇಡ ಅನಿಸಿತು. ಬರೆದ ವಿಷಯಗಳೆ ಲ್ಲವೂ ನನ್ನ ಜೀವನದ ವಿವಿಧ ಹಂತಗಳ ಒಂದು ಸ್ಥೂಲ ಚಿತ್ರವನ್ನು ಕೊಡಬಹುದು ಎಂಬ ನಂಬಿಕೆ ನನಗಿದೆ. ಆದರೆ, ನನ್ನ ಜೀವನ ಒಂದೇ ರೀತಿಯಿಂದ ಹಾದುಹೋದ ಕಥನವಾಗಿಲ್ಲ. ನನ್ನ ಆತ್ಮ ಕಥನವನ್ನು ಓದಿದವರಿಗೆ, ನನ್ನನ್ನು ವಿವಿಧ ಪ್ರವೃತ್ತಿಗಳ ಕಡೆಗೆ ಸಾಗಿಸಿದ ಸುಳಿವು, ಒಲವುಗಳು ಯಾವ ರೀತಿಯವು ಎಂಬುದನ್ನು ತಿಳಿಸಬಲ್ಲವಾದರೂ ಅವುಗಳ ಆಳವಾಗಲಿ, ವಿಸ್ತಾರವಾಗಲಿ, ಅವುಗಳಿಂದ ನನಗೆ ದೊರಕಿದ ಪ್ರಯೋಜನ ಇಲ್ಲವೆ ಸಂತೋಷವಾಗಲೀ ಅನ್ಯರಿಗೆ ಅಷ್ಟೇ ಉಪಯುಕ್ತವೂ ಸಂತೋಷಕ್ಕೆ ಕಾರಣವೂ ಆಗಿ ಕಾಣಿಸಬೇಕಾಗಿಲ್ಲ.

ಈಗ ನಾನು ನನ್ನ ಜೀವಮಾನದ ಎಪ್ಪತ್ತೊಂಬತ್ತನೆಯ ವರ್ಷದಲ್ಲಿ ಕಾಲಿರಿಸಿದ್ದೇ ನಾದರೂ ಈ ಬರಹವನ್ನು ತೊಡಗಿದ್ದು ಎರಡು ವರ್ಷಗಳ ಹಿಂದೆ. ಅದರ ಎರಡು ಸಂಪುಟ ಗಳನ್ನು ಬರೆದು ಮುಗಿಸಿದೆ; ಇನ್ನೂ ಒಂದು ಸಂಪುಟವಾಗುವಷ್ಟು ಬರೆಯಬಹುದಾದ ವಿಷಯಗಳಿವೆ ಎನಿಸುತ್ತದೆ. ಈ ಬರಹಕ್ಕೆ “ಸ್ಮೃತಿ ಪಟಲದಿಂದ” ಎಂಬ ಇನ್ನೊಂದೇ ಹೆಸ ರನ್ನು ಕೊಟ್ಟಿ ದ್ದೇನೆ ಆದರೆ ನನ್ನ ನೆನಪುಗಳು ಅಷ್ಟೊಂದು ಗಾಢ ಎಂಬ ಧೈರ್ಯ ನನಗಿಲ್ಲ. ಇದನ್ನು ಬರೆಯುವಾಗ ಸಂದ ವರ್ಷಗಳ ನೆನಪಿಗೆ ಕಟ್ಟು ಬೀಳದೆ, ನನ್ನಲ್ಲಿ ಆಸಕ್ತಿಯನ್ನು ಕೆರಳಿಸಿ, ಒಂದಲ್ಲ ಒಂದು ರೀತಿಯ ಕೆಲಸಗಳಿಗೆ ನನ್ನನ್ನು ಪ್ರೇರಿಸಿದ ವಿಷಯಗಳ ದೃಷ್ಟಿ ಯಿಂದ ಇದನ್ನು ಬರೆಯ ತೊಡಗಿದೆ. ಕಾರಣವಿಷ್ಟೆ-ಆಯುಷ್ಯ ನಮ್ಮ ಪ್ರಯತ್ನವಿಲ್ಲ ದೆಯೇ ಸಾಗುತ್ತದೆ. ಸಂದ ಪ್ರಾಯದ ಬಗ್ಗೆ ನಾನು ಹೆಮ್ಮೆ ಪಡಬೇಕಾದ ಕಾರಣವೇನಿಲ್ಲ. ಒಂದಿಷ್ಟು ಚೆನ್ನಾದ ಆರೋಗ್ಯವಿದೆ; ಬರೆಯಲು ಬೇಕಾದ ಉತ್ಸಾಹವಿದೆ; ಬರೆಯಬಹು ದಾದ ವಿಷಯಗಳೂ ಇವೆ. ಇವು ವಿವಿಧ ರೀತಿಯವು ಎಂಬುದರಿಂದ, ನನ್ನಂತೆ ಒಂದಲ್ಲ ಒಂದು ಕ್ಷೇತ್ರದಲ್ಲಿ ದುಡಿಯಲು ಹಂಬಲಿಸುವವರಿಗೆ ಆ ವಿಷಯಗಳು ನನಗೆ ಹೇಗೆ ಕಾಣಿ ದುವು-ಎಂದು ತೋರಿಸುವ ಪ್ರಯತ್ನ ಇದು. ಹೀಗಾಗಿ ಈ ಹೊಸ ಬರಹವು ವಿಷಯಗಳ ದೃಷ್ಟಿಯಿಂದಲೂ, ಅವಕ್ಕೆ ಸಂಬಂಧಿಸಿದ ಪ್ರಯತ್ನಗಳ ದೃಷ್ಟಿಯಿಂದಲೂ, ನನಗೆ ದೊರ ಕಿಸಿಕೊಟ್ಟ ಅನುಭವಗಳ ದೃಷ್ಟಿಯಿಂದಲೂ ನನಗೆ ಮುಖ್ಯ ಎನಿಸುತ್ತದೆ.


- ಶಿವರಾಮ ಕಾರಂತ

 

ಪುಟಗಳು: 480

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !