ಸ್ವಪ್ನದ ಹೊಳೆ

ಸ್ವಪ್ನದ ಹೊಳೆ

Regular price
$5.99
Sale price
$5.99
Regular price
Sold out
Unit price
per 
Shipping does not apply

ಬರಹಗಾರ: ಡಾ|| ಕೆ. ಶಿವರಾಮ ಕಾರಂತ  

 

ಮನುಷ್ಯರಿಗೆ, ಕಾರ್ಯ ಮಾಡುವುದು ಕಷ್ಟವಾದರೂ, ಹಗಲುಗನಸು ಕಾಣುವುದು ಸುಲಭವೆಂಬುದಾಗಿ ಅನೇಕರು ತಿಳಿಯುತ್ತಾರೆ. ಜೀವನದ ಕಷ್ಟ ಕಾರ್ಪಣ್ಯಗಳಿಂದ ತಪ್ಪಿಸಿಕೊಳ್ಳಲು ಆ ಮನೋವೃತ್ತಿ ಸಹಾಯಕವಾಗಲೂ ಬಹುದು. ಆದರೆ ಕನಸಿನ ಕೆಲಸ ಅಷ್ಟೇ ಸರಿಯೇ?

ರಾತ್ರಿ ಮಲಗಿದಾಗ ಮನಸ್ಸಿನ ಪಟಲದ ಮೇಲೆ ಹಾಯುವ ಸಾವಿರಾರು ಕನಸುಗಳ ಮೇಲೆ ನಮ್ಮ ಅಂಕೆ, ಅಂಕುಶಗಳಿರುವುದಿಲ್ಲ; ಅವುಗಳ ನೆನಪೂ ಉಳಿಯುವುದಿಲ್ಲ. ಬದುಕಿಗೂ ಅವಕ್ಕೂ ಏನು ಸಂಬಂಧ ಎಂದು ತಿಳಿಯುವುದರಲ್ಲಿ ವಿಜ್ಞಾನಿಗಳು ನಿರತರಾಗಿದ್ದಾರೆ.

ವಾಸ್ತವಿಕ ಜಗತ್ತಿನ ಧ್ವನಿ, ಬಣ್ಣ, ರೂಪಗಳನ್ನು ಕಂಡು ಮಗುವು ಸ್ವಪ್ನ ಹೆಣೆಯುತ್ತದೆ. ಹೊಂದಿಕೆ ಕಾಣಿಸದ ನೂರಾರು ವಸ್ತುಗಳೊಡನೆ ಹೊಂದಿಕೆ ತಂದುಕೊಂಡು, ತಲ್ಲೀನವಾಗಲು ಬಯಸುತ್ತದೆ. ''ಕೇವಲ ತನಗಾಗಿ ಇದರಿಂದ ಏನು ಲಾಭ ? " ಎಂಬ ವ್ಯಾಪಾರಿ ಮನೋವೃತ್ತಿ ಅದರಲ್ಲಿಲ್ಲ; ಸ್ವಾರ್ಥದ ಎಣಿಕೆಯಿಂದ ಅದು ಯಾವುದನ್ನೂ ಅಳೆಯುವುದಿಲ್ಲ. ಜಗತ್ತಿನಲ್ಲಿರುವ ಚೆಲುವನ್ನು ಅದು ತಿಳಿಯಲು, ಸವಿಯಲು ಪ್ರಯತ್ನಿಸುತ್ತದೆ. ನಮ್ಮ ಮನಸ್ಸನ್ನು ಸೂಕ್ಷ್ಮವನ್ನಾಗಿ, ಬೇಕಾದಂತೆ ಹಿಗ್ಗ ಬಲ್ಲುದನ್ನಾಗಿ, ಅಸಂಬದ್ಧವೆನಿಸುವ ವಸ್ತು, ವಿಷಯ, ಘಟನೆಗೊಳೊಡನೆ ಸಂಬಂಧ ಕಂಡುಕೊಳ್ಳುವುದಕ್ಕೆ ಶಕ್ತವನ್ನಾಗಿ ಮಾಡುತ್ತದೆ ಕಲ್ಪನಾಶಕ್ತಿ!

ಕಲಾವಿದನ ಬೆಳವಣಿಗೆಗೆ ಅದು ತೀರ ತೀರ ಮುಖ್ಯ. ಮುಂದೆ ಆತ ಬೆಳೆದಂತೆ, ಅವನ ಸಂವೇದನೆಗಳು ಇನ್ನಷ್ಟು ಸೂಕ್ಷ್ಮವಾಗುತ್ತವೆ; ಆತನ ಅನುಭವಗಳು ಪುಷ್ಟವಾಗುತ್ತವೆ. ಜನಜೀವನದ ಪೂರ್ವಾನುಭವಗಳನ್ನು ಹಲವು ಸಂಕೇತಗಳ ಮೂಲಕ ತಿಳಿದು, ತನ್ನ ಮನಸ್ಸಿನ ಅನುಭವಗಳೊಡನೆ ಹೊಂದಿಸಿ, ತೂಗುವುದಕ್ಕೆ ಸಾಧ್ಯವಾಗುತ್ತದೆ.

ಈ ಕಾದಂಬರಿಯಲ್ಲಿ ಸ್ವಪ್ನಗಾರನ ಮನಸ್ಸೊಂದರ ಪರಿಚಯವನ್ನು ಮಾಡಿಕೊಟ್ಟಂತೆ, ಒಂದ ಪ್ರಗಲ್ಭ ಸಮಸ್ಯೆಯ ವಿರಾಟರೂಪವನ್ನೂ, ಅದರ ಹಿಂದು, ಮುಂದನ್ನೂ ಕಲಾವಿದನ ಕಣ್ಣಿನಿಂದ ತೋರಿಸಲು ಪ್ರಯತ್ನಿಸಿದ್ದೇನೆ. ಹಳೆಯ ಭೂತ ಎಷ್ಟು ಸುಂದರವೋ ಅಷ್ಟು ಭೀಕರ; ಎಷ್ಟು ಪುರಾತನವೋ ಅಷ್ಟು ಅರ್ವಾಚೀನ.

ಈ ಕಾದಂಬರಿಯ ಹಲವಾರು ಪಾತ್ರಗಳು ನಿಜ ಜೀವನದಲ್ಲಿ ಸಂಧಿಸಿದ ಮಹಾನುಭಾವರು. ಸಮಸ್ಯೆಯಂತು ತೀರ ನಿಜ ಜೀವನದ್ದೇ. ಇಲ್ಲಿನ ಮುಖ್ಯ ಚೌಕಟ್ಟನ್ನು ಮೀರುವ ಅನುಭವ, ಪ್ರತ್ಯುತ್ತರ ಇತರರಿಗೆ ಬರಬಾರದೆಂದಿಲ್ಲ.

ಇತಿ,
ಶಿವರಾಮ ಕಾರಂತ
ಪುತ್ತೂರು ದ. ಕ.
19-9-1966

 

ಪುಟಗಳು: 324

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !